ಬುಧವಾರ, ಮಾರ್ಚ್ 3, 2021
23 °C

‘ನೀರಿನ ಸಂರಕ್ಷಣೆಗೆ ಹೋರಾಟ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೀರಿನ ಸಂರಕ್ಷಣೆಗೆ ಹೋರಾಟ ಅಗತ್ಯ’

ಹುಲಕೋಟಿ: ‘ನೀರು ರೈತರ ಜೀವನಾಡಿ ಯಾಗಿದ್ದು ಅದರ ಸಂರಕ್ಷಣೆಗಾಗಿ ಸಂಘಟಿತರಾಗಿ ಹೋರಾಟ ಮಾಡ ಬೇಕು. ಮಳೆ ನೀರನ್ನು ಹೊಲಗಳಲ್ಲಿ ಇಂಗಿಸುವತ್ತ ರೈತರು ಹೆಚ್ಚಿನ ಗಮನ ಹರಿಸಬೇಕು’ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜಸ್ಥಾನದ  ಡಾ. ರಾಜೇಂದ್ರಸಿಂಗ್ ಹೇಳಿದರು.ಧಾರವಾಡ  ಕೃಷಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ ಪದವಿ ನೀಡಿದ ಹಿನ್ನಲೆಯಲ್ಲಿ ಇಲ್ಲಿನ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ ಅಭಿನಂ ದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತ ಸಮುದಾಯದ ಸಂಘಟನೆ ಮುಖಾಂ ತರ ರಾಜಸ್ತಾನದ ಅಳ್ವಾರ, ಜಯಪುರ, ಜಸಲ್ಮೇರ್ ಜಿಲ್ಲೆಗಳಲ್ಲಿ 1050 ಗ್ರಾಮಗಳಲ್ಲಿ ಏಳು ನದಿ ಪಾತ್ರಗಳಲ್ಲಿ ಸುಮಾರು 11 ಸಾವಿರ ಕೆರೆಗಳು ಕಟ್ಟಲಾಗಿದೆ. ಇದರಿಂದ  ಅಂತರ್ಜಲ ಪುನಶ್ಚೇತನಗೊಂಡು ಆ  ಗ್ರಾಮಗಳ ಆರ್ಥಿಕ, ಭೌತಿಕ ಹಾಗೂ ಸಾಮಾಜಿಕ ಪರಿವರ್ತನೆ ಆಗಿದೆ ಎಂದು ತಿಳಿಸಿದರು.ಎಪಿಎಂಸಿ ಅಧ್ಯಕ್ಷ  ಡಿ.ಆರ್. ಪಾಟೀಲ ಮಾತನಾಡಿ, ಆರು ವರ್ಷಗಳ ಹಿಂದೆ ರಾಜೇಂದ್ರಸಿಂಗ್ ಅವರ ಮಾರ್ಗ ದರ್ಶನದಲ್ಲಿ  ತಾಲ್ಲೂಕಿನ ಈಚಲ ಹಳ್ಳದ ಜಲಾನಯನ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರಿಂದ ಅಂತರ್ಜಲ ಹೆಚ್ಚಿದ್ದು, ಹಳ್ಳದ ಪಾತ್ರದಲ್ಲಿ ಕೆರೆ, ಬಾವಿ ಹಾಗೂ ಕೊಳುವೆಬಾವಿಗಳು ಪುನಶ್ಚೇತನ ಗೊಂಡವೆ. ಇಂತಹ ಕಾರ್ಯಕ್ರಮ ಗಳನ್ನು ಸಂಘಟನೆಗಳ ಮುಖಾಂತರ ಇತರೆ ಪ್ರದೇಶಗಳಿಗೆ ವಿಸ್ತರಿಸುವ ಅಗತ್ಯತೆ ಇದೆ ಎಂದು ಹೇಳಿದರು.ಜೆ.ಕೆ. ಜಮಾದಾರ, ಶಾಸಕ ಬಿ. ಆರ್. ಯಾವಗಲ್ ಮಾತನಾಡಿದರು. ರಾಮಕೃಷ್ಣ-ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಸಿ.ಜಿ. ಕೊರವ ನವರ ಅಧ್ಯಕ್ಷತೆ ವಹಿಸಿದ್ದರು. 500 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.