ಬುಧವಾರ, ಜೂನ್ 23, 2021
22 °C

‘ಬಿಜೆಪಿ ಸಂಘಟನಾ ಶಕ್ತಿಯಿಂದ ಸಂಸದನಾದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ‘ಯಾವ ಕನಿಷ್ಠ ಅರ್ಹತೆಯೂ ಇಲ್ಲದ ನನ್ನಂಥ ವ್ಯಕ್ತಿ ಸಂಸದನಾಗಲು ಸಾಧ್ಯವಾದದ್ದು, ಹಣ, ಜಾತಿ ಹೊರತಾದ ಬಿಜೆಪಿಯ ಸಂಘಟನಾ ಶಕ್ತಿಯಿಂದ’ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.ಪಟ್ಟಣದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು. ‘ಗುಜರಾತ್‌ ಮಾದರಿ ಹಾಗೂ ಮೋದಿ ಅವರ ವ್ಯಕ್ತಿತ್ವವೇ ಇಂದು ಅವರ ಬಗ್ಗೆ ಸಾರ್ವಜನಿಕ ಅಪೇಕ್ಷೆ ಬೆಳೆಯಲು ಕಾರಣವಾಗಿದೆ. ಸಂಸತ್ತಿನಲ್ಲಿ ಬಿಜೆಪಿಯನ್ನು ವಿರೋಧಿಸಿದ ಹಲವು ನಾಯಕರೇ ಇಂದು ಒಲವು ತೋರಿದ್ದಾರೆ’ ಎಂದರು.ಸಭೆ ಉದ್ಘಾಟಿಸಿದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ನಾಯ್ಕ, ‘ಮೋದಿ ಪ್ರಧಾನಿಯಾಗಿ ಈ ದೇಶ ಮುನ್ನಡೆಸಬೇಕು ಎನ್ನುವ ಒಲವು ದೇಶದ ಜನರಲ್ಲಿದೆ’ ಎಂದರು.ಮದನ ನಾಯಕ, ಸೂರಜ್‌ ನಾಯ್ಕ ಮಾತಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪಕ್ಷದ ಗಾಯತ್ರಿ ಗೌಡ, ವಿನೋದ ನಾಯ್ಕ, ರಾಘವೇಂದ್ರ ಭಟ್ಟ ಮಾತನಾಡಿದರು. ಕಾರ್ಯದರ್ಶಿ ಕುಮಾರ ಮಾರ್ಕಾಂಡೆ ಸ್ವಾಗತಿಸಿದರು. ಸಾಧನಾ ನಾಯ್ಕ, ಸರೋಜಾ ಶೇಟ್‌, ಜಯಶ್ರೀ ಬರ್ಗಿ, ಇಂದಿರಾ ಮುಕ್ರಿ, ರಾಧಾಕೃಷ್ಣ ಗೌಡ, ಮಂಜುನಾಥ ಗವಡ, ವೀಣಾ ನಾಯ್ಕ, ಸುಮನಾ ಪಟಗಾರ, ವಿನೋದ ಪ್ರಭು, ವಿವೇಕ ಜಾಲಿಸತ್ಗಿ, ಎಸ್‌.ಟಿ.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.