ಶನಿವಾರ, ಜೂನ್ 19, 2021
28 °C

‘ಬೆಲೆ ಏರಿಕೆ ಯುಪಿಎ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ:  ದಿನನಿತ್ಯದ ಅಗತ್ಯ ವಸ್ತು­ಗಳ ಬೆಲೆ ಏರಿಸಿದ್ದೇ ಯುಪಿಎ ಸರ್ಕಾ­ರದ ಸಾಧನೆಯಾಗಿದೆ ಎಂದು ಯಲ­ಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಟೀಕಿಸಿದರು.

ಪಟ್ಟಣದ ವಿಶ್ವಪ್ರೇಮಿ ಸಮಾರಂಭ ಭವನ­ದಲ್ಲಿ ಸೋಮವಾರ ನಡೆದ

ತಾಲ್ಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯ­ಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾ­ರದ ಸಚಿವರು ಮಾಡಿದ ಹಗರಣಗಳು ಜಾಗತಿಕ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತೆ ಮಾಡಿದೆ ಎಂದು ಹರಿಹಾಯ್ದರು.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿ­ರಾಜು­ಗೌಡ ಮಾತನಾಡಿ, ಕ್ಷೇತ್ರದಲ್ಲಿ ಹಿಂದೆ ಗೆಲುವು ಸಾಧಿಸಿದವರು ಕ್ಷೇತ್ರದ ಅಭಿ­ವೃದ್ದಿ­ಗಾಗಿ ಕೇಂದ್ರದಿಂದ ಬಂದ ಅನು­ದಾನವನ್ನು ಬಳಸಿಕೊಳ್ಳಲು ವಿಫಲರಾಗಿ­ದ್ದಾರೆ ಎಂದು ಟೀಕಿಸಿದರು.ವಿರೋಧ ಪಕ್ಷದವರು ತಮ್ಮನ್ನು ಡಮ್ಮಿ ಅಭ್ಯರ್ಥಿ ಎಂದು ಬಿಂಬಿಸಲು ಹೊರಟಿದ್ದು, ಚುನಾವಣೆಯಲ್ಲಿ ಯಾರು ಡಮ್ಮಿ, ಯಾರು ಬಲಾಢ್ಯರು ಎಂಬುದು ತಿಳಿಯಲಿದೆ. ಈ ಬಾರಿ ಬಿಜೆಪಿ ಗೆಲುವು ಖಚಿತ ಎಂದು ಮುನಿರಾಜ ಗೌಡ ವಿಶ್ವಾಸ ವ್ಯಕ್ತಪಡಿಸಿ ದರು. ವಿಧಾನಪರಿಷತ್ ಸದಸ್ಯ ರಾಮ ಚಂದ್ರೇ­ಗೌಡ ಒಕ್ಕಲಿಗರ ಸಂಘದ ನಿರ್ದೇ ಶಕ ಜಾಲಹಳ್ಳಿ ರವಿ, ಮುರಳಿ ಮನೋಹರ್, ಪರಿಚಿತರಾಜೇ ಅರಸ್, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗರಾಜು, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್‌ಗೌಡ ಮುಂತಾದವರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.