ಭಾನುವಾರ, ಜನವರಿ 19, 2020
28 °C

‘ವಿನಾಯ್ತಿ ಇದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ವೀಸಾ ವಂಚನೆ ಪ್ರಕರಣದಲ್ಲಿ ಬಂಧನ­ಕ್ಕೊಳಗಾಗಿದ್ದ ಭಾರತದ ರಾಜ­ತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ವಿಚಾರಣೆ­ಯಿಂದ ವಿನಾಯ್ತಿ ಸೌಲಭ್ಯ ಹೊಂದಿ­ದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.ಬಂಧನದ ಅವಧಿಯಲ್ಲಿ ದೇವ­ಯಾನಿ ಅವರೊಂದಿಗೆ  ಅಧಿಕಾರಿ­ಗಳು ತೋರಿ­ರುವ ಅಮಾನವೀಯ ವರ್ತನೆಯು ಅಮೆರಿಕದ ಅಂತರ­ರಾಷ್ಟ್ರೀಯ ಶಿಷ್ಟಾಚಾರದ ಉಲ್ಲಂಘ­ನೆ­­ಯಾಗಿದೆ ಎಂದೂ ಅವರು ಹೇಳಿದ್ದಾರೆ.‘ರಾಜತಾಂತ್ರಿಕ ಹುದ್ದೆಯನ್ನು ಹೊಂದಿದ್ದರಿಂದ ದೇವಯಾನಿ ಅವ­ರಿಗೆ  ವಿಚಾರಣೆಯಿಂದ ವಿನಾಯ್ತಿ ಇದೆ. ಆದರೆ, ಈ ಪ್ರಕರಣದಲ್ಲಿ ಅಮೆರಿಕ ತಪ್ಪು ನಿರ್ಣಯ ಕೈಗೊಂ­ಡಿದೆ’ ಎಂದು ಅವರ ಪರ ವಕೀಲ ಡೇನಿಯಲ್‌ ಎನ್‌ ಅರ್ಶಕ್‌ ಹೇಳಿದ್ದಾರೆ.ಭಾರತ ಮತ್ತು ಅಮೆರಿಕದ ಸರ್ಕಾರ­ಗಳು ಉನ್ನತ ಮಟ್ಟದಲ್ಲಿ ಚರ್ಚಿಸಿ ಈ ಸಮಸ್ಯೆಯನ್ನು ಬಗೆ­ಹರಿಸಬಹುದು ಎಂಬ ವಿಶ್ವಾಸ­ವನ್ನೂ ಅವರು ವ್ಯಕ್ತ­ಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)