ಭಾನುವಾರ, ಜನವರಿ 26, 2020
25 °C

‘ಸರ್ದಾರ್ ಪಟೇಲ್ ಪಾತ್ರ ಅವಿಸ್ಮರಣೀಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸ್ವಾತಂತ್ರ್ಯ ಹೋರಾಟ­ದಲ್ಲಿ ಹಾಗೂ ಸ್ವಾತಂತ್ರ್ಯಾನಂತರ ದೇಶದ ಅಖಂಡತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವಿಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ.  ದೇಶದ ಏಕತೆಗಾಗಿ ಯುವಜನತೆ ಒಂದಾಗಿ ಪ್ರಯತ್ನ ಮಾಡಬೇಕಾಗಿದೆ ಎಂದು ಗುಜರಾತ್ ರಾಜ್ಯ ಇಂಧನ ಸಚಿವ ಸೌರಭಭಾಯಿ ಪಟೇಲ್ ಹೇಳಿದರು.ಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ದೇಶದ 562ಕ್ಕೂ ಮಿಕ್ಕಿ ಸಂಸ್ಥಾನಗಳನ್ನು ಒಗ್ಗೂಡಿಸಿ ಏಕತೆಯನ್ನು ಸಾಧಿಸಿದ ಪಟೇಲರನ್ನು ದೇಶವಿಂದು ನೆನಪಿಸಿ­ಕೊಳ್ಳುವ ಅನಿವಾರ್ಯತೆ ಇದೆ ಎಂದರು.

ರಾಜ್ಯ ಲೋಹ ಸಂಗ್ರಹ ಸಮಿತಿ ಅಧ್ಯಕ್ಷ ಮಾಜಿ ಸಚಿವ ಮುರಗೇಶ ನಿರಾಣಿ, ಗುಜರಾತ್ ರಾಜ್ಯದ ಶಾಸಕರಾದ ವಾಗ್ಜೀಭಾಯಿ ಪಟೇಲ್,ನಾಗರಾಜ ಠಾಕೂರ್, ಲಾಲ್‌ಜಿ  ಮೆರ್, ವಲ್ಲಭಭಾಯಿ ಕಾಕಡಿಯ, ವರ್ಷಾಬೆನ್, ಭರತ್‌ಭಾಯಿ ಪಟೇಲ್, ದಿಲೀಪ್ ಭಾಯಿ ಪಟೇಲ್, ದಿನೇಶ ಭಾಯಿ ಪಟೇಲ್, ಬಿಜೆಪಿ ರಾಜ್ಯ ಪ್ರಮುಖರಾದ ಸಚ್ಚಿದಾನಂದ ಮೂರ್ತಿ, ಸುಲೋಚನಾ ಜಿ.ಕೆ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಕೆ. ಮೋನಪ್ಪ ಭಂಡಾರಿ, ಕೆ. ಬಾಲಕೃಷ್ಣ ಭಟ್, ಎನ್. ಯೋಗೀಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ತಾರ ಸತೀಶ ಪ್ರಭು ಮತ್ತು ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ ವಂದಿಸಿದರು.

ಪ್ರತಿಕ್ರಿಯಿಸಿ (+)