ಭಾನುವಾರ, ಮೇ 16, 2021
27 °C

14ರಿಂದ ಗಾಲ್ಫ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 40 ಲಕ್ಷ ರೂಪಾಯಿ ಬಹುಮಾನ ಒಳಗೊಂಡಿರುವ `ಗ್ಲೋಬಲ್ ಗ್ರೀನ್ ಬೆಂಗಳೂರು~ ಪಿಜಿಟಿಎ ಗಾಲ್ಫ್ ಚಾಂಪಿಯನ್‌ಷಿಪ್ ಇಲ್ಲಿಯ ಕರ್ನಾಟಕ ಗಾಲ್ಪ್ ಕೋರ್ಸ್‌ನಲ್ಲಿ ಸೆಪ್ಟಂಬರ್ 14ರಿಂದ 17ರ ವರೆಗೆ ನಡೆಯಲಿದೆ.ಕಳೆದ ಬಾರಿಯ ಚಾಂಪಿಯನ್ ಆಶೋಕ್ ಕುಮಾರ್, ಮುಖೇಶ್ ಕುಮಾರ್, ಶಮೀಮ್ ಖಾನ್, ಶಂಕರ್ ದಾಸ್, ಸಂಜಯ್ ಕುಮಾರ್, ಮಾಜಿ ಚಾಂಪಿಯನ್ ರಾಹುಲ್ ಗಣಪತಿ ಸೇರಿದಂತೆ ಇತರ ಭಾರತದ ಪ್ರಮುಖ ಗಾಲ್ಫರ್‌ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಉದ್ಯಾನ ನಗರಿಯಲ್ಲಿ ಗಾಲ್ಪ್ ಕ್ರೀಡೆಗೆ ಉತ್ತಮ ಬೆಂಬಲವಿದೆ. ಹೊಸ ಪ್ರತಿಭಾವಂತ ಗಾಲ್ಫರ್‌ಗಳ ಶೋಧಕ್ಕೆ ಈ ಟೂರ್ನಿ ನೆರವಾಗಲಿದೆ ಎಂದು ಪಿಜಿಟಿಎದ ನಿರ್ದೇಶಕ ಪದಮಜಿತ್ ಸಂಧು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.