ಶನಿವಾರ, ಮೇ 21, 2022
25 °C

19ರಂದು ಭೂಮಿ ಸಮೀಪಕ್ಕೆ ಚಂದ್ರ; ಹಾನಿ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಚಂದ್ರ ಭೂಮಿಗೆ ಅತಿ ಸಮೀಪದಲ್ಲಿ ಪ್ರದಕ್ಷಿಣೆ ಹಾಕುವ ವಿಶೇಷ ವಿದ್ಯಮಾನ ಮುಂದಿನ ಹುಣ್ಣಿಮೆಯಂದು ಸಂಭವಿಸಲಿದೆ. ಇದರಿಂದಾಗಿ ಭೂಮಿಯಲ್ಲಿ ಹಲವು ವಿಧದ ಹಾನಿ ಸಂಭವಿಸುವ ಸಾಧ್ಯತೆ ಇದೆ.ಭೂಮಿಯನ್ನು ಸುತ್ತುವ ಸ್ವಾಭಾವಿಕ ಉಪಗ್ರಹವಾದ ಚಂದ್ರ, ಇದೇ 19ರಂದು 2,21,556 ಮೈಲಿ ಅಂತರದಲ್ಲಿ ಚಲಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ಕಾಣಿಸದೇ ಇದ್ದಷ್ಟು ದೊಡ್ಡ ಗಾತ್ರದಲ್ಲಿ ಚಂದ್ರ ಅಂದು ಕಾಣಿಸಲಿದ್ದು ಕುತೂಹಲದ ದೃಶ್ಯವಾಗಲಿದೆ.ಇತ್ತೀಚಿನ ವರ್ಷಗಳಲ್ಲಿ ಚಂದ್ರನ ವಿಶೇಷ ಚಲನೆ ಇದಾಗಿದೆ. ಚಂದ್ರ ಭೂಮಿಗೆ ಇಷ್ಟು ಹತ್ತಿರದಲ್ಲಿ ಸಾಗಿದ ದಾಖಲೆ ಇದುವರೆಗೆ ಲಭ್ಯವಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದಾಗಿ ಚಂದ್ರ ದೊಡ್ಡ ಗಾತ್ರದಲ್ಲಿ ಕಾಣಿಸುವ ಸಾಧ್ಯತೆ ಇದೆ.ಚಂದ್ರನ ನಿಕಟ ಪ್ರಭಾವದಿಂದಾಗಿ ಭೂಮಿಯ ಮೇಲೆ ಸಮುದ್ರದ ನೀರು ಉಕ್ಕುವುದು (ಭರತ), ಭೂಕಂಪ, ಜ್ವಾಲಾಮುಖಿ ಸಿಡಿಯುವಿಕೆ ಮುಂತಾದ  ವಿಕೋಪ ಸಾಧ್ಯತೆ ಇದೆ.  ಎನ್ನಲಾಗಿದೆ. ಚಂದ್ರನ ಈ ‘ಭೂ ನಿಕಟ ಪ್ರದಕ್ಷಿಣೆ’ 1955, 1974, 1992, 2005ರಲ್ಲಿ ಸಂಭವಿಸಿತ್ತಾದರೂ ಇಷ್ಟೊಂದು ಹತ್ತಿರವಾಗಿರಲಿಲ್ಲ. ಆಗೆಲ್ಲಾ ಪ್ರಕೃತಿ ವಿಕೋಪ ಸಂಭವಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.