ರಾಯಚೂರು: ಮುನ್ನೂರು ಕಾಪು ಬಲಿಜ ಸಮಾಜ, ಹಟ್ಟಿ ಚಿನ್ನದ ಗಣಿ, ನಗರಸಭೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇನಾಲಯದ ಸಂಯುಕ್ತ ಆಶ್ರಯಲ್ಲಿ ಜೂನ್ 22, 23 ಮತ್ತು 24ರಂದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಡೆಯಲಿದೆ.

22ರಂದು ಬೆಳಿಗ್ಗೆ 8ಗಂಟೆಗೆ ಒಂದೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ(ಕರ್ನಾಟಕ ರಾಜ್ಯದ ಎತ್ತುಗಳಿಗೆ ಮಾತ್ರ) ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದೆ.

ಸಾನಿಧ್ಯವನ್ನು ಮುನ್ನೂರು ಕಾಪು ಸಮಾಜದ ಶೂನ್ಯ ಸಿಂಹಾಸನ ಪೀಠದ ಸದ್ಗುರು ಶರಣ ತಿಪ್ಪೇಶ್ವರ ಸ್ವಾಮಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಮುಂಗಾರು ಸಾಂಸ್ಕೃತಿಕ ಹಬ್ಬದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಸಂಸದ ಎಸ್.ಪಕೀರಪ್ಪ, ಶಾಸಕರಾದ ಎ.ವೆಂಕಟೇಶ ನಾಯಕ, ಡಾ.ಶಿವರಾಜ ಪಾಟೀಲ್, ತಿಪ್ಪರಾಜ, ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕರಾದ ಸಯ್ಯದ್ ಯಾಸಿನ್,ರಾಜಾರಾಯಪ್ಪ ನಾಯಕ, ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು, ಉಪಾಧ್ಯಕ್ಷ ಕೆ.ಶರಣಪ್ಪ, ಡಾ.ವಿ.ಶ್ರೀಧರರೆಡ್ಡಿ, ಎಎಂಇ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬೆಟ್ಟಪ್ಪ ಗಧಾರ, ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ ಬಿಸ್ನಳ್ಳಿ ಆಗಮಿಸಲಿದ್ದಾರೆ.

ಅಂದು ಸಂಜೆ 6ಗಂಟೆಗೆ ಮಹಿಳಾ ಸಮಾಜದಲ್ಲಿ ಮಣಿಪುರ, ರಾಜಸ್ತಾನ, ಗುಜರಾತ,ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯದ ಕಲಾವಿದರಿಂದ ನೃತ್ಯರೂಪಕ ನಡೆಯಲಿದೆ.

ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.ಉದ್ಘಾಟನೆಯನ್ನು ಮಾಜಿ ಶಾಸಕ ಸಯ್ಯದ್ ಯಾಸಿನ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ನಗರಸಭೆ ಸದಸ್ಯರಾದ ಜಯಣ್ಣ, ಮಾಜಿ ಸದಸ್ಯ ಜಿ.ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷ ಗುಮಗೇರಿ ಮಹಾಂತಗೌಡ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ, ಪದ್ಮಶಾಲಿ ಸಮಾಜದ ಅಧ್ಯಕ್ಷ ಪೆನ್ನಗೊಂಡ್ಲು ಗೋವಿಂದರಾಜು ಆಗಮಿಸಲಿದ್ದಾರೆ.

23ರಂದು ಬೆಳಿಗ್ಗೆ 8ಗಂಟೆಗೆ ಎರಡು ಟನ್ ಕಲ್ಲು ಭಾರ ಎಳೆಯುವ ಸ್ಪರ್ಧೆ(ಅಖಿಲ ಭಾರತ ಮುಕ್ತ ಸ್ಪರ್ಧೆ) ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದೆ. ಸಾನಿಧ್ಯವನ್ನು ಚಿಕ್ಕಸುಗೂರಿನ ಚೌಕಿಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮುನ್ನೂರು ಕಾಪು ಸಮಾಜದ ಶೂನ್ಯ ಸಿಂಹಾಸನ ಪೀಠದ ಸದ್ಗುರು ಶರಣ ತಿಪ್ಪೇಶ್ವರ ಸ್ವಾಮಿ ವಹಿಸಲಿದ್ದಾರೆ.

ಉದ್ಘಾಟನೆಯನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೆರವೇರಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಎ.ಪಾಪಾರೆಡ್ಡಿ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಬೋಸರಾಜ, ಶಾಸಕರಾದ ಹಂಪನಗೌಡ ಬಾದರ್ಲಿ, ಜಿ.ಹಂಪಯ್ಯ ನಾಯಕ, ಖೈವಾರಮಠದ ಧರ್ಮಾಧಿಕಾರಿ ಡಾ.ಎಂ.ಆರ್ ಜಯರಾಮ್,ಹಾವೇರಿ ಶಾಸಕ ಮನೋಹರ ತಹಸೀಲ್ದಾರ, ಚಲವಾದಿ ಮಹಾಸಭಾದ ಅಧ್ಯಕ್ಷ ಜಗನ್ನಾಥ ಸುಂಕಾರಿ, ಎಂಆರ್ಎಚ್ಎಸ್ ಗೌರವಾಧ್ಯಕ್ಷ ಎಸ್.ಮಾರೆಪ್ಪ ಆಗಮಿಸಲಿದ್ದಾರೆ.

ಸಂಜೆ 5ಗಂಟೆಗೆ ಶ್ರೀ ಮಾತಾ ಲಕ್ಷ್ಮೀದೇವಿ ಭಾವಚಿತ್ರ ಹಾಗೂ ಎತ್ತುಗಳ ಬೃಹತ್ ಮೆರವಣಿಗೆ ನಡೆಯಲಿದ್ದು, ಕೃಷಿ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾ ತಂಡಗಳ ಕಲಾ ಪ್ರದರ್ಶನ ನಡೆಯಲಿದೆ.

6ಗಂಟೆಗೆ ನಗರದ ಮಹಿಳಾ ಸಮಾಜದಲ್ಲಿ ನೃತ್ಯರೂಪಕ ನಡೆಯಲಿದ್ದು, ಉದ್ಘಾಟನೆಯನ್ನು ನವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್ ರೆಡ್ಡಿ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಡಾ.ಶಿವರಾಜ ಪಾಟೀಲ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎ.ಪಾಪಾರೆಡ್ಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಎಂಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ರಾಜಣ್ಣ, ಅಖಿಲ ಕರ್ನಾಟಕ ಬಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಆಗಮಿಸಲಿದ್ದಾರೆ.

24ರಂದು ಬೆಳಿಗ್ಗೆ 8ಗಂಟೆಗೆ ಎರಡೂವರೆ ಟನ್ ಕಲ್ಲು ಭಾರ ಎಳೆಯುವ ಸ್ಪರ್ಧೆ(ಅಖಿಲ ಭಾರತ ಮುಕ್ತ ಸ್ಪರ್ಧೆ) ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದೆ.

ಸಾನಿಧ್ಯವನ್ನು ಮುನ್ನೂರು ಕಾಪು ಸಮಾಜದ ಶೂನ್ಯ ಸಿಂಹಾಸನ ಪೀಠದ ಸದ್ಗುರು ಶರಣ ತಿಪ್ಪೇಶ್ವರ ಸ್ವಾಮೀಜಿ,ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.

ಉದ್ಘಾಟನೆಯನ್ನು ರಾಜ್ಯ ಅಬಕಾರಿ ಸಚಿವ ಸತೀಶ ಜಾರಕಿಹೊಳಿ ನೆರವೇರಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಆಂಧ್ರಪ್ರದೇಶದ ಸಮಾಚಾರ ಸಚಿವೆ ಡಿ.ಕೆ ಅರುಣಾ ಭರತಸಿಂಹರೆಡ್ಡಿ, ರೇಷ್ಮೆ ಮತ್ತು ತೋಟಗಾರಿಕೆ ಸಚಿವರಾದ ರಾಮರೆಡ್ಡಿ ವೆಂಕಟರೆಡ್ಡಿ ಆಗಮಿಸಲಿದ್ದಾರೆ.

ಶಾಸಕರಾದ ಎ.ವೆಂಕಟೇಶ ನಾಯಕ, ಮಾನಪ್ಪ ವಜ್ಜಲ್.ಖೈವಾರಮಠದ ಧರ್ಮಾಧಿಕಾರಿ ಡಾ.ಎಂ.ಆರ್ ಜಯರಾಮ್, ಆಂಧ್ರಪ್ರದೇಶದ ನಾರಾಯಪೇಟೆ ಶಾಸಕ ಯಲ್ಲಾರೆಡ್ಡಿ, ಕೆಒಎಫ್ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಕುರುಬರ ಸಮಾಜದ ಅಧ್ಯಕ್ಷ ಎಂ.ಈರಣ್ಣ ಮಾನ್ವಿ, ಮಡಿವಾಳ ಸಮಾಜದ ಅಧ್ಯಕ್ಷ ಜಿ.ಸೂಗಪ್ಪ, ಯಾದವ ಸಮಾಜದ ಅಧ್ಯಕ್ಷ ಕೆ.ಹನುಮಂತಪ್ಪ ಆಗಮಿಸಲಿದ್ದಾರೆ.

ಅಂದು ಮಧ್ಯಾಹ್ನ 3ಗಂಟೆಗೆ ಲಕ್ಷಮ್ಮದೇವಿ ಕಲ್ಯಾಣ ಮಂಟಪದ ಆವರಣದಲ್ಲಿ ಕಲ್ಲು ಗುಂಡು ಎತ್ತುವ ಹಾಗೂ ಉಸುಕಿನ(ಮರಳು) ಚೀಲ ಎತ್ತುವ ಸ್ಪರ್ಧೆಗಳ ನಡೆಯಲಿವೆ.

ಸಂಜೆ 5ಗಂಟೆಗೆ ಕುಸ್ತಿ ಸ್ಪರ್ಧೆಯು ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದ್ದು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಬೋಸರಾಜ ಉದ್ಘಾಟಿಸಲಿದ್ದಾರೆ.

ಸಂಜೆ 6ಗಂಟೆಗೆ ನಗರದ ಮಹಿಳಾ ಸಮಾಜದಲ್ಲಿ ವಿವಿಧ ರಾಜ್ಯಗಳ ಕಲಾವಿದರಿಂದ ನೃತ್ಯ ರೂಪಕ ನಡೆಯಲಿದ್ದು, ಶಾಸಕ ಎ.ವೆಂಕಟೇಶ ನಾಯಕ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎ.ವಸಂತಕುಮಾರ, ಆರ್ಯವೈಶ್ಯ ಮಹಾಸಭಾಗಳ ಒಕ್ಕೂಟದ ಉಪಾಧ್ಯಕ್ಷ ಕುಂಟ್ನಾಳ ವೆಂಕಟೇಶ, ಭಾವಸಾರ ಕ್ಷತೀಯ ಸಮಾಜದ ಅಧ್ಯಕ್ಷ ಜಯವಂತರಾವ್ ಪತಂಗೆ, ಗುಜರಾತಿ ಸಮಾಜದ ಅಧ್ಯಕ್ಷ ಕಾಂಜಿಮಿಶ್ರಾ, ರಾಜಸ್ತಾನಿ ಸಮಾಜದ ಶುಕ್ರಾಜ್ ಬೋಹರಾ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.