ಮಂಗಳವಾರ, ಜೂನ್ 15, 2021
23 °C

6ರಿಂದ ಮಾವಿನಹಳ್ಳಿ ಬಸವೇಶ್ವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆಯ ಬಸವಾಪುರದ ಮಾವಿನಹಳ್ಳಿ ಗುರು ಬಸವೇಶ್ವರ ಸ್ವಾಮಿಯ ರಥೋತ್ಸವ ಮಾರ್ಚ್‌ ೬ರಿಂದ ೧೧ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಮಲ್ಲಿಕಾರ್ಜನಪ್ಪ ತಿಳಿಸಿದ್ದಾರೆ.೬ರಂದು ಸ್ವಾಮಿಗೆ ಕಂಕಣಧಾರಣೆ, ಪಲ್ಲಕ್ಕಿ ಉತ್ಸವ, ಧ್ವಜಾರೋಹಣ. ೭ರಂದು ಸ್ವಾಮಿಗೆ ಅಶ್ವೋತ್ಸವ. ೮ರಂದು ವೃಷಭೋತ್ಸವ. ೯ರಂದು ಬೆಳಿಗ್ಗೆ ೬ಕ್ಕೆ ಸ್ವಾಮಿಗೆ ಹೂವಿನ ಪಲ್ಲಕ್ಕಿ ಉತ್ಸವ, ಗಜೋತ್ಸವ ನಂತರ ೧೦ಕ್ಕೆ ಕೆಂಡಾರ್ಚನೆ ಸೇವೆ ನಡೆಯಲಿದೆ ಎಂದು ಹೇಳಿದ್ದಾರೆ.೧೦ರಂದು ಬೆಳಿಗ್ಗೆ ೯ರಿಂದ ಕುಂಭಾಭಿಷೇಕ, ೧೦.೪೫ಕ್ಕೆ ರಾಜ ಗೋಪುರದ ಪಂಚ ಕಳಸ ಸ್ಥಾಪನಾ ಕಾರ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ನೆರವೇರಿಸಲಿದ್ದಾರೆ. ಅಂದು ಮಧ್ಯಾಹ್ನ ೧೧ಕ್ಕೆ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ವಿವಾಹವಾಗಲು ಇಚ್ಛಿಸುವವರು ದೇವಾಲಯದಲ್ಲಿ ಹೆಸರನ್ನು ನೋಂದಾಯಿಸಬಹುದು ಎಂದರು.ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಭೋಜನ ಶಾಲೆ, ಸಮುದಾಯ ಭವನದ ಕೊಠಡಿಗಳ ಉದ್ಘಾಟನಾ ಕಾರ್ಯ ನಡೆಯಲಿದೆ. ಜತೆಗೆ ಮಾವಿನಹಳ್ಳಿ ದೇವಸ್ಥಾನದಿಂದ ಬಿ.ದುರ್ಗ ಮತ್ತು ಭೀಮಸಮುದ್ರಕ್ಕೆ ಹೊಂದಿಕೊಳ್ಳುವ ರಸ್ತೆಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಬಸವೇಶ್ವರ ಸ್ವಾಮಿಯ ಇತಿಹಾಸ ಪುಸ್ತಕವನ್ನು ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡುವರು ಎಂದು ಹೇಳಿದ್ದಾರೆ.ಮಧ್ಯಾಹ್ನ ೨.೩೦ಕ್ಕೆ ಧಾರ್ಮಿಕ ಸಭೆ ಮತ್ತು ದೇವಾಲಯಕ್ಕೆ ನೆರವು ನೀಡಿದವರಿಗೆ ಸನ್ಮಾನ ಕಾರ್ಯಕ್ರಮ, ಸಂಜೆ ೪.೩೦ಕ್ಕೆ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವ, ನಂತರ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ೧೧ರಂದು ಸಂಜೆ ೫ಕ್ಕೆ ಕಂಕಣ ವಿಸರ್ಜನೆ ಹಾಗೂ ಮಹಾ ಮಂಗಳಾರತಿ ಯೊಂದಿಗೆ ಸ್ವಾಮಿಯ ರಥೋತ್ಸವ ಮುಕ್ತಾಯ ಆಗಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್‌ ೧೦ರಂದು ಮಧ್ಯಾಹ್ನ ೧೨ಕ್ಕೆ ರಿಚರ್ಡ್‌ ಲೂಯಿಸ್ ಮತ್ತು ತಂಡದವರಿಂದ ನಗೆ ಕೂಟ, ರಾತ್ರಿ ೭ಕ್ಕೆ ಗಂಜಿಕಟ್ಟೆ ಕೃಷ್ಣಮೂರ್ತಿ ತಂಡದಿಂದ ಲಾವಣಿ, ಯುಗಧರ್ಮ ರಾಮಣ್ಣ, ಶಿವಧರ್ಮ ಚಂದ್ರಣ್ಣ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.