2026ರ ಹೊಸವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ಉತ್ತಮ ಲಾಭ ಪಡೆಯಲು ಜನವರಿ ಮೊದಲ ವಾರ ಮುಕ್ತಾಯದ ಒಳಗೆ ಮನೆಗೆ ಮೂರು ವಸ್ತುಗಳನ್ನು ತರುವುದರಿಂದ ಆರ್ಥಿಕ ಲಾಭ ಉಂಟಾಗುವುದಲ್ಲದೆ, ಕುಟುಂಬದ ಸಮಸ್ಯೆಗಳೂ ದೂರವಾಗುತ್ತದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.
.ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ.
ಶಂಖ:

ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶಂಖವನ್ನು ಧಾರ್ಮಿಕ ಆಚರಣೆಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಪುರಾಣ ಕಥೆಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ 14 ರತ್ನಗಳು ದೊರೆಯುತ್ತವೆ. ಅವುಗಳಲ್ಲಿ ಶಂಖವೂ ಒಂದು ಎಂಬ ನಂಬಿಕೆಯಿದೆ. ಆದ್ದರಿಂದ ಯಾವ ಮನೆಯಲ್ಲಿ ಶಂಖ ಇರುತ್ತದೆಯೋ, ಆ ಮನೆಯಲ್ಲಿ ಲಕ್ಷ್ಮೀ ವಾಸವಾಗಿರುತ್ತಾಳೆ ಎಂಬ ನಂಬಿಕೆ ಇದೆ.
.ಲಕ್ಷ್ಮೀನಾರಾಯಣ ಯೋಗ: 2026ರಲ್ಲಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ.
ಗಣೇಶನ ವಿಗ್ರಹ:

ವರ್ಷದ ಮೊದಲನೇ ವಾರದಲ್ಲಿ ಗಣೇಶನ ವಿಗ್ರಹವನ್ನು ಖರೀದಿಸುವುದು ಶುಭಕರವಾಗಿದೆ. ಹಿಂದೂ ಧರ್ಮದಲ್ಲಿ ಯಾವುದೇ ಕಾರ್ಯವನ್ನು ಆರಂಭಿಸುವ ಮುನ್ನ ಗಣೇಶನನ್ನು ಸ್ಮರಿಸಲಾಗುತ್ತದೆ. ಆದ್ದರಿಂದ ಹೊಸ ವರ್ಷದ ಮೊದಲ ವಾರದ ಒಳಗಾಗಿ ಗಣೇಶನ ವಿಗ್ರಹವನ್ನು ಮನೆಗೆ ತನ್ನಿ. ಪ್ರತಿ ದಿನ ವಿಗ್ರಹಕ್ಕೆ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ವೃದ್ಧಿಯಾಗುತ್ತದೆ.

ತುಳಸಿ ಗಿಡ:

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಸಲ್ಲಿಸಿದರೆ ಮೋಕ್ಷ ಪ್ರಾಪ್ತಿಯಾಗುವುದರ ಜೊತೆಗೆ ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ತುಳಸಿ ಗಿಡವನ್ನು ಹೊಸ ವರ್ಷದ ಮೊದಲನೇ ವಾರದಲ್ಲಿ ಮನೆಗೆ ತಂದು ನೆಡುವುದರಿಂದ 2026ರ ವರ್ಷ ಶುಭವಾಗಿರುತ್ತದೆ ಎಂದು ಜ್ಯೋತಿಷ ಹೇಳುತ್ತದೆ.

ಈ 3 ವಸ್ತುಗಳನ್ನು ಮನೆಗೆ ತರುವುದರಿಂದ ವರ್ಷ ಪೂರ್ತಿ ಶುಭಫಲಗಳು ದೊರೆಯುತ್ತದೆ. ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿಯು ನೆಲೆಯಾಗಿರುತ್ತದೆ ಎಂದು ನಂಬಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.