ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸುಸ್ಥಿರವಾದ ಚಂದ್ರ ಗ್ರಹ ಒದಗಿಸಿರುವ ದೈತ್ಯ ಶಕ್ತಿಯ ಅಪಾರವಾದ ಬುದ್ಧಿಮತ್ತೆಯಾಗಿದೆ. ಚುರುಕಾಗಿ ಮಾತನಾಡಬಲ್ಲ ಕುಮಾರಸ್ವಾಮಿಯವರಿಗೆ, ಎದುರಾಳಿಯನ್ನು ಮಾತಿನಿಂದಲೇ ಕಟ್ಟಿಹಾಕುವ ಪ್ರತಿಯೊಂದು ಯುಕ್ತ ಮಾಹಿತಿಗಳನ್ನು ಗಟ್ಟಿಯಾಗಿಯೇ ಹೊಂದಿರುತ್ತಾರೆ. ಈ ಕುರಿತಾದ ವಿಚಾರಗಳನ್ನು ಇವರು ಅರ್ಥಪೂರ್ಣವಾಗಿ ಹೊಂದಿರುವುದೇ ತನು ಭಾವದ ಮನೆಯಾದ (ಮಿಥುನ ರಾಶಿಯಲ್ಲಿ) ಚಂದ್ರ ಗ್ರಹದ ಉಪಸ್ಥಿತಿಯಿಂದ.

ಹಾಗೆಯೇ ಇವರಿಗೆ ಅನೇಕ ಒಳಿತುಗಳನ್ನು ಒದಗಿಸಬೇಕಾದ ಶನಿ ಗ್ರಹವನ್ನು ಚಂದ್ರನು ಸಕಾರಾತ್ಮಕವಾಗಿ ಸಂವೇದಿಸುತ್ತಿರುವ ಕಾರಣದಿಂದಲೇ ಹಲವು ರೀತಿಯಲ್ಲಿ ಕುಮಾರಸ್ವಾಮಿಯವರು ಒಂದಿಲ್ಲೊಂದು ಕಾರಣದಿಂದ ರಾಜ್ಯ ರಾಜಕಾರಣದಲ್ಲಿ ಪ್ರಧಾನವಾದ ಭೂಮಿಕೆಯನ್ನು ಹೊಂದಿರುತ್ತಾರೆ.
.ಲಕ್ಷ್ಮೀನಾರಾಯಣ ಯೋಗ: 2026ರಲ್ಲಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ.
ಕೆಲವು ಕಾರಣದಿಂದಾಗಿ ಕುಮಾರಸ್ವಾಮಿಯವರಿಗೆ ಪೂರ್ತಿ ಹಿನ್ನಡೆಯಾಗಲಿದೆ ಎಂಬ ಸಂದರ್ಭದಲ್ಲಿ ಕೂಡ, ಅವರು ಮತ್ತೆ ಜಾಣ್ಮೆ ತೋರುತ್ತಾರೆ. ಇದು ಅವರಿಗೆ ಕೆಲವೊಮ್ಮೆ ಇರುಸು ಮುರುಸುಗಳಿಗೆ ಕಾರಣವಾಗುತ್ತವೆ. ಉತ್ತಮ ವಿಚಾರಗಳನ್ನು ಕುಮಾರಸ್ವಾಮಿಯವರಿಗೆ ಒದಗಿಸಬೇಕಾದ ಶನಿ ಗ್ರಹವನ್ನು ರವಿ ಗ್ರಹ ತಡೆಯುತ್ತದೆ. ಯಾಕೆಂದರೆ ರವಿಯ ಜೊತೆಯಿಂದಾಗಿ ಶನಿ ಗ್ರಹಕ್ಕೆ ಒದಗಿದ ದಗ್ಧ ಸ್ಥಿತಿಯಿಂದಾಗಿ, ಅಧಿಕಾರಕ್ಕೆ ಏರಿದಾಗ ಏಕಾಏಕಿ ಸುಸ್ಥಿತಿಯಿಂದ ದುರ್ಬಲ ಸ್ಥಿತಿಗೆ ತಳ್ಳಿ ಬಿಡುತ್ತದೆ.

2008 ರಿಂದ 2013ರ ತನಕ ತುಸು ಅತಂತ್ರತೆ, ಬುಧ ಗ್ರಹದ ಮೂಲಕ ಲಭ್ಯವಾಯಿತು. ಮೀನ ರಾಶಿ ಯಾವಾಗಲೂ ರವಿ ಗ್ರಹ ಹಾಗೂ ಶನಿ ಗ್ರಹ ಒಟ್ಟಿಗೆ ಇದ್ದಾಗ ತನ್ನಲ್ಲಿರುವ ಅಗ್ನಿ ತತ್ವಕ್ಕೆ ಇನ್ನೊಂದಿಷ್ಟು ತಾಪದ ಉರಿ ಲೇಪಿಸಿ ಬಿಡುತ್ತದೆ.

ಇನ್ನೊಂದು ಉರಿಯಲ್ಲಿ ಕುಜ ಮತ್ತು ಬುಧ

ಜಲ ತತ್ವದ ವೃಶ್ಚಿಕ ರಾಶಿಯಲ್ಲಿ ಬುಧ ಗ್ರಹ ಕುಳಿತಿರುವುದು ಕೂಡ ಹೆಚ್ಚಿನ ರೀತಿಯ ಬಾಧೆಯನ್ನು ಕುಮಾರಸ್ವಾಮಿಯವರ ಜನ್ಮ ಕುಂಡಲಿಯ ಬಾಧಕತೆ ತಂದ ಅಂಶ. ಗಾಯಕ್ಕೆ ಉಪ್ಪು ಸುರಿದಂತೆ ಕುಜ ಗ್ರಹವೂ ಬುಧನ ಜೊತೆಯಲ್ಲಿ ಇರುವುದು ಬುಧನ ಗಾಯಕ್ಕೆ ದೊಡ್ಡದೇ ಬಾಧೆ. ವೈರಿಗಳಿಂದಲೂ ಹಲವು ಸಲ ತುಸು ಲಾಭವನ್ನು ಒದಗಿಸುವ ಒಂದು ಕ್ಷೀಣವಾದ ಒಳಿತಿನ ಎಳೆಯನ್ನು ಕುಜ ಹಾಗೂ ಬುಧರ ಸಂಯುಕ್ತ ಸ್ಥಿತಿ ಒದಗಿಸುತ್ತದೆಯಾದರೂ, ಅದೇ ವೈರಿಗಳು ಮತ್ತೆ ತಿರುಗಿ ಬೀಳುವ ಕೆಂಡಕ್ಕೂ ಇದು ಗಾಳಿ ಹಾಕುತ್ತದೆ. ವೃಶ್ಚಿಕ ರಾಶಿಯಲ್ಲಿ ಬುಧನು ಕುಜನ ಜತೆ ಕುಳಿತಿರುವುದರಿಂದ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಕೂಡಾ ಜಾಗ್ರತೆ ಹೊಂದಿರಬೇಕಾಗುತ್ತದೆ. ಒಂದು ಸಮಾಧಾನಕರ ವಿಚಾರ ಏನೆಂದರೆ ಚಂದ್ರ ಗ್ರಹ ಮಿಥುನ ರಾಶಿಯಲ್ಲಿ ಕುಳಿತಿರುವುದು, ಚಂದ್ರನ ಬಲವು, ಆರೋಗ್ಯದ ವಿಚಾರದಲ್ಲಿ ಕುಮಾರಸ್ವಾಮಿಯವರಿಗೆ ಶನಿ ಗ್ರಹದ ಮೂಲಕ ರಕ್ಷಣೆಯನ್ನು ಕೊಡಲು ಒಂದು ಅದೃಷ್ಟವಾಗಿ ಒದಗಿದೆ. ಈಗ ಬೃಹತ್ ಕೈಗಾರಿಕಾ ಸಚಿವರಾಗಿ ಉತ್ಸಾಹ ಹಾಗೂ ಏಕಾಗ್ರತೆಗಳೊಡನೆ ಅತ್ಯಂತ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯದಾಚೆಯ ಮಾಧ್ಯಮಗಳು ಕೂಡಾ ವರದಿ ಮಾಡುತ್ತಿವೆ. ಕರ್ನಾಟಕದಲ್ಲೂ ಒಳ್ಳೆಯ ಮಾತುಗಳಿವೆ.
.ಚತುರ್ಗ್ರಾಹಿ ಯೋಗ: 200 ವರ್ಷಗಳ ಬಳಿಕ ಈ 3 ರಾಶಿಯವರಿಗೆ ಭಾರಿ ಅದೃಷ್ಟ.
ಮೀನ ರಾಶಿಯಲ್ಲಿ ಕೇತು ಗ್ರಹ:

ಗುರು ಗ್ರಹದ ಯಜಮಾನತ್ವದ ಮೀನ ರಾಶಿಯಲ್ಲಿ ಕೇತು ಗ್ರಹವಿದೆ. ಇವರ ಜನ್ಮ ಕುಂಡಲಿಯಲ್ಲಿ ವಾಸ್ತವಕ್ಕೆ ಜಲ ತತ್ವದ ಈ ರಾಶಿಯಲ್ಲಿ ಕೇತು ಉತ್ತಮ ಫಲ ಕೊಡಲು ಮುಂದಾಗದು. ಆದಾಗ್ಯೂ ಈ ಏಳು ವರ್ಷಗಳಿಂದ ಅಂದರೆ 2018 ರಿಂದಲೂ ರಾಶಿಯ ಜಲದಲ್ಲಿ ಇವರನ್ನು ಮುಳುಗಿಸಲಿಲ್ಲ. ಯಾಕೆಂದರೆ ಗುರು ಗ್ರಹದ ದೃಷ್ಟಿ (ಸುರಳೀತವಾಗಿ ಕುಳಿತಿರಲು ವೃಶ್ಚಿಕ ರಾಶಿ ಸ್ವಾದಿಷ್ಟಮಯ ಸ್ಥಳ ಅಲ್ಲದೇ ಹೋದರೂ) ಕೇತು ಗ್ರಹವನ್ನು ದೃಷ್ಟಿಸಿದ್ದರಿಂದ ಕೇತು ತೊಂದರೆ ನೀಡಿದನೇ, ವಿನಃ ಕುಮಾರಸ್ವಾಮಿಯವರನ್ನು ಮುಳುಗಿಸಲು ಸಾಧ್ಯವಾಗಲೇ ಇಲ್ಲ.

2018 ರಿಂದ ವಿವಿಧ ರೀತಿಯ ಸಮಸ್ಯೆ ಎದುರಿಸಿದರು. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ತನ್ನ ಮಂತ್ರಿ ಮಂಡಳ ಉರುಳುವುದನ್ನು ಬೇರೆ ಮಾರ್ಗ ಇರದೆ ಮೂಕ ಪ್ರೇಕ್ಷಕನಾಗಿ ನೋಡಿದರು. ಹಾಗೆಯೇ 2024ರಲ್ಲಿ ಮತ್ತೆ ಎದ್ದರು ಕೇಂದ್ರ ಸರಕಾರದಲ್ಲಿ ಮಹತ್ವದ ಖಾತೆಯನ್ನು ನಿರ್ವಹಿಸುತ್ತಲೇ ಬಂದಿದ್ದಾರೆ. ಅಂದರೆ ಈ ಏಳು ವರ್ಷಗಳಲ್ಲಿ ಹಲವಾರು ರೀತಿಯ ಏಳು ಬೀಳುಗಳನ್ನು ಕಂಡಿದ್ದಾರೆ. ಸಂಕಲ್ಪ ಶಕ್ತಿಗೆ ಅದರದೇ ಆದ ತೂಕವಿದೆ. ಹೀಗಾಗಿ ಎಂದೂ ಹಾಗೆ ನಿರಾಶರಾಗಿ ಕುಳಿತಿರುವ ಸ್ವಭಾವ ಇರದಿರುವ ಕುಮಾರಸ್ವಾಮಿಯವರು ಹೇಗೆ ರಾಜಕೀಯದ ದಾಳಗಳನ್ನು ಉರುಳಿಸಬೇಕು, ಎಲ್ಲಿ ಯಾವುದು ಯಾವುದನ್ನು ತಾಕಿದರೆ, ಹೇಗೆಲ್ಲ ಪರಿಣಾಮಗಳು ಸಾಧ್ಯ ಎಂಬೆಲ್ಲ ರಾಜಕೀಯ ಚದುರಂಗದ ಪಟ್ಟುಗಳ ಕೋಷ್ಟಕವನ್ನು ಪೂರ್ತಿಯಾಗಿ ಜೀರ್ಣಿಸಿಕೊಂಡವರು. ರಾಜಕೀಯ ರಂಗದ ದೈತ್ಯ ಶಕ್ತಿಯೇ ಆದ ತಂದೆ ದೇವೇಗೌಡರ ನೆರಳಲ್ಲಿ ಬೆಳೆದರೂ, ತಾನೇ ತನ್ನ ಸ್ವಂತ ಬುದ್ಧಿ ಬಲದಿಂದ ಮಿಂಚುವ ಶಕ್ತಿ ಕುಮಾರಸ್ವಾಮಿಯವರಿಗೆ ಇದೆ.
.ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ.
ಶುಕ್ರ ಗ್ರಹದ ಶಕ್ತಿ ಮತ್ತು ಕುಮಾರಸ್ವಾಮಿ

ಈಗಲೂ ತನ್ನ ಶಕ್ತಿ ಕ್ರೋಢಿಕರಣದ ಸರಳ ಸಮೀಕರಣ ಏನು, ಹೇಗೆ ಎಂಬ ವ್ಯವಸ್ಥಿತ ಸೂತ್ರವನ್ನು ತಿಳಿಯುವಲ್ಲಿ ಕುಮಾರಸ್ವಾಮಿಯವರಿಗೆ ಶುಕ್ರ ಗ್ರಹ ಸರಿಯಾದ ಎಲ್ಲಾ ಬೆಂಬಲ ನೀಡಲಿದೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತ ಶುಕ್ರ ಗ್ರಹ (ತನ್ನದಾದ ಸ್ವಂತ ಮನೆ ತುಲಾ ರಾಶಿಯಲ್ಲಿದೆ.) ಅನೇಕ ರೀತಿಯಲ್ಲಿ ಪಕ್ಷದ ಸಂಘಟನೆ ಹಾಗೂ ಆ ಮೂಲಕವಾದ ವಿವಿಧ ಲಾಭಗಳನ್ನು ಇವರ ಪಾಲಿಗೆ ಗಟ್ಟಿಯಾಗಿಯೇ ಹರಳುಗಟ್ಟಿಸಿ ಕೊಡಬಹುದಾಗಿದೆ. ಅದೃಶ್ಯ ಬಲ ಸಂಯುಕ್ತ ಶುಕ್ರ ಗ್ರಹ, ಪರಬ್ರಹ್ಮ ಸ್ವರೂಪಿಣಿಯಾದ ದೇವಿ ಶಕ್ತಿಯನ್ನು ಪ್ರಬಲವಾಗಿಯೇ ಸಂಕೇತಿಸುತ್ತಿರುವ ಕಾರಣ, ಸಮಯ ಹೊಂದಿಸಿ ಹಲವು ದೇವಿ ಪ್ರಧಾನ ಸಿದ್ಧ ಆರೂಢ, ಪೀಠಗಳನ್ನು ದರ್ಶನ ಮಾಡುವ, ಹಾಗೇ ಆರಾಧಿಸುವ ಕಾಯಕ ಕುಮಾರಸ್ವಾಮಿಯವರು ಮಾಡಬೇಕು. ಈ ಆರಾಧನೆಗಳು ಇವರಿಗೆ ಹಲವು ಅನುಕೂಲಗಳನ್ನು ದೊಡ್ಡದೇ ಪ್ರಮಾಣದಲ್ಲಿ ಕೈಗೂಡಿಸಿ ಕೊಡುತ್ತವೆ.

ವಿಶೇಷ ಅವಕಾಶಗಳ ಮೂಲಕ ಜನ ಮಾನಸದಲ್ಲಿ ಜನಪ್ರಿಯತೆ ಸಿಗುವಂತೆ ರೂಪಿಸಿಕೊಡಬಹುದಾಗಿದೆ. ಹಾಗೇ ಸತ್ ಚಿತ್ ಆನಂದಾದಿ ಘನ ಅವಭೃಥ ಕಾರಣೀಕ ಮೂರ್ತ ನಿಕ್ಷೇಪಗಳನ್ನು, ಸಹಜ, ಸಂತುಲಿತ, ಸಕಾರಾತ್ಮಕ ರೀತಿಯ ಅನುಗ್ರಹಗಳೊಂದಿಗೆ ವಿಪುಲವಾಗಿಯೇ ಒದಗಿಸಬಹುದಾಗಿದೆ.

ಅನೇಕ ವಿಷಮ ಕ್ಷಣಗಳಲ್ಲಿ ಕ್ಷತಗಳನ್ನು ನಿವಾರಿಸಿ, ಅಕ್ಷತವನ್ನು ರೂಪಿಸಿ ಕೊಡುತ್ತಿರುವ ಚಂದ್ರ ಹಾಗೂ ಚಂದ್ರನಿಂದ ಪೂರ್ವಪುಣ್ಯ ಸ್ಥಳದಲ್ಲಿ ಕುಳಿತ ಶುಕ್ರ ಗ್ರಹಕ್ಕೆ ದೊಡ್ಡದೇ ಸಿದ್ಧಿ ಇದೆ. ಜೊತೆಗೆ ರಾಹು ಗ್ರಹ ಕಕ್ಕುವ ವಿಷಕಾರಿ ಪ್ರಭಾವವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸುವ ಸಂಜೀವಿನಿ ಶಕ್ತಿ ಸಿಕ್ಕಿದೆ. ಅದೃಷ್ಟದ ಘಟಕಗಳಿಗಾಗಿ ಬಾಗಿಲು ತೆರೆದು ಕುಳಿತಿವೆ. ಹಾಗೇ ಭವಿಷ್ಯದ ಕಾಲ ಘಟ್ಟದಲ್ಲಿ ಗೆಲುವಿನ ಸಾಮರ್ಥ್ಯವನ್ನೂ ಸಂವರ್ಧಿಸುವಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.