ಬೆಂಗಳೂರು: ಇಟಲಿ ಮೂಲದ ಪಿಯಾಜಿಯೊ ಇಂಡಿಯಾ ತನ್ನ ಹೊಸ ಏಪ್ರಿಲಿಯಾ ಎಸ್‍ಎಕ್ಸ್‌ಆರ್ 160 ಸ್ಕೂಟರ್ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದೆ.

ಏಪ್ರಿಲಿಯಾ ಎಸ್ಎಕ್ಸ್ಆರ್ 160 ಪ್ರೀಮಿಯಂ ಸ್ಕೂಟರ್ ಕರ್ನಾಟಕದಾದ್ಯಂತ ಎಕ್ಸ್ ಷೋರೂಂ ಬೆಲೆ ₹ 1,26,947 ಸಿಗಲಿದೆ. ₹ 5000 ಮುಂಗಡ ಪಾವತಿಸಿ ವಿತರಣಾ ಕೇಂದ್ರಗಳಲ್ಲಿ ಅಥವಾ ಕಂಪನಿಯ ಜಾಲತಾಣದಲ್ಲಿ ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಅತ್ಯಾಧುನಿಕ ಜಾಗತಿಕ ಗುಣಮಟ್ಟದ ವಿನ್ಯಾಸವಿದೆ. ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್, ಸ್ವಚ್ಛ ಮಾಲಿನ್ಯಕಾರಕ ತಂತ್ರಜ್ಞಾನದ 3 ವಾಲ್ವ್ ಫ್ಯೂಯೆಲ್ ಇಂಜೆಕ್ಷನ್ ಹೊಂದಿದೆ. ಅತ್ಯುತ್ತಮ ಮತ್ತು ಅನುಕೂಲಕರ ಚಾಲನಾ ಅನುಭವಕ್ಕಾಗಿ ಏಪ್ರಿಲಿಯಾ ಎಸ್‍ಎಕ್ಸ್‌ಆರ್ 160 ಸ್ಕೂಟರ್‌ಜಲ್ಲಿ ದೊಡ್ಡದಾದ, ಉದ್ದದಾದ ಅನುಕೂಲಕರ ಎರ್ಗೋನಾಮಿಕ್ ಸೀಟ್‍ಗಳಿವೆ. 7 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ.

‘ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಗುರಿಗೆ ತಕ್ಕಂತೆ ನಾವು ನಡೆದುಕೊಂಡಿದ್ದೇವೆ. ಪ್ರತಿಯೊಬ್ಬರಿಗೂ ಉತ್ತಮ ಅನುಭವವನ್ನು ಖಾತರಿ ಪಡಿಸಲು ಭಾರತದಲ್ಲಿ ನಮ್ಮ ವಿತರಣಾ ಜಾಲವನ್ನು ವಿಸ್ತರಿಸಲಿದ್ದೇವೆ. ಭಾರತದ ಪ್ರೀಮಿಯಂ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇದು ಹೊಸ ಮೈಲುಗಲ್ಲು ಸ್ಥಾಪಿಸಲಿದೆ’ ಎಂದು ಪಿಯಾಜಿಯೊ ಇಂಡಿಯಾದ ಅಧ್ಯಕ್ಷ ಡಿಯಾಗೋ ಗ್ರಾಫಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.