ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

Published 15 ಆಗಸ್ಟ್ 2023, 5:52 IST
Last Updated 15 ಆಗಸ್ಟ್ 2023, 5:52 IST
ಅಕ್ಷರ ಗಾತ್ರ

ಬೆಂಗಳೂರು: ಡೀಪ್‌ ವ್ಯೂ ಡಿಸ್‌ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್‌ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.

ಸುರಕ್ಷತೆ ಹಾಗೂ ರೆಸ್ಪಾನ್ಸ್‌ ಫೀಚರ್‌ಗಳನ್ನು ಹೊಂದಿರುವ ಈ ಸ್ಕೂಟರ್‌ 2.9 ಕಿಲೋ ವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಪ್ರತಿ ಚಾರ್ಜ್‌ಗೆ ಗರಿಷ್ಠ 115 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಇದರದ್ದು. 

ಪ್ರತಿ ಗಂಟೆಗೆ 0 ದಿಂದ 40 ಕಿ.ಮೀ. ವೇಗ ಕ್ರಮಿಸಲು 3.9 ಸೆಕೆಂಡುಗಳು ಮಾತ್ರ ತೆಗೆದುಕೊಳ್ಳುತ್ತದೆ. ಜತೆಗೆ ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ. ವೇಗದಲ್ಲಿ ಸಾಗುವ ಕಾರ್ಯಕ್ಷಮತೆ ಹೊಂದಿದೆ. 

ಏಥರ್ 450ಎಸ್‌ ನಲ್ಲಿ ಹೊಸ ತಂತ್ರಜ್ಞಾನವಾದ ಡೀಪ್‌ ವ್ಯೂ ಡಿಸ್‌ಪ್ಲೆ ಪರದೆ ಹೊಂದಿದೆ. ಹೊಸ ಸ್ವಿಚ್ ಗೇರ್, ಫಾಲ್ ಸೇಫ್‌, ತ್ವರಿತ ನಿಲುಗಡೆ ಸಿಗ್ನಲ್ (ಇಎಸ್‌ಎಸ್‌) ಫೀಚರ್‌ಗಳನ್ನು ಇದು ಹೊಂದಿದೆ. ಹಿಂದಿನ ಮಾದರಿಗಳಿಂಗಿಂತ ಶೇ 7ರಷ್ಟು ದೂರ ಕ್ರಮಿಸುವ ರೇಂಜ್ ಹೆಚ್ಚಳವಾಗಿದೆ. ಇಷ್ಟು ಮಾತ್ರವಲ್ಲ, ತನ್ನ ಏಥರ್ ಗ್ರಿಡ್ ಫಾಸ್ಟ್‌ ಚಾರ್ಜರ್ ಮೂಲಕ ನಿಮಿಷಕ್ಕೆ 1.5 ಕಿ.ಮೀ. ವೇಗದ ದರದಲ್ಲಿ ಚಾರ್ಜ್‌ ಮಾಡಬಹುದಾಗಿದೆ.

ಏಥರ್‌ ಸ್ಕೂಟರ್‌ಗಳನ್ನು 115 ಕಿ.ಮೀ. ಹಾಗೂ 145 ಕಿ.ಮೀ. ರೇಂಜ್‌ ವೇರಿಯಂಟ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. 450 ಎಸ್‌ ಹಾಗೂ 450 ಎಕ್ಸ್ ಮಾದರಿಗಳನ್ನು ಖರೀದಿಸುವವರು ಮೂಲ ಕಾನ್ಫಿಗರೇಷನ್‌ಗಳಾದ ಪ್ರೊ ಪ್ಯಾಕ್‌ ಮಾಡಿಕೊಳ್ಳುವ ಅವಕಾಶವಿದೆ. ಅದು ರೈಡ್ ಅಸಿಸ್ಟ್‌, ಏಥರ್ ಬ್ಯಾಟರಿ ಪ್ರೊಟೆಕ್ಟ್‌, ಏಥರ್ ಸ್ಟಾಕ್ ಅಪ್‌ಡೇಟ್ಸ್‌ ಮತ್ತು ಏಥರ್ ಕನೆಕ್ಟ್‌ ಅನ್ನು ಒಳಗೊಂಡಿದೆ.

‘ಏಥರ್ 450 ಎಸ್‌ ಸ್ಕೂಟರ್‌ ರೈಡಿಂಗ್‌ನ ಮಜಾ ಹಾಗೂ ಸುರಕ್ಷತೆಯ ಹೊಸ ಸೌಲಭ್ಯವನ್ನು ನೀಡುತ್ತಿದೆ. ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆಯ ಅನುಗುಣಕ್ಕೆ ತಕ್ಕಂತೆ ಸ್ಕೂಟರ್‌ ಆಯ್ಕೆ ಮಾಡಿಕೊಳ್ಳಬಹುದು. 1000:1 ಅನುಪಾತದಲ್ಲಿ ಡೀಪ್‌ ವ್ಯೂ ಡಿಸ್ಪ್ಲೆ ಅಳವಡಿಸಲಾಗಿದೆ. ನ್ಯಾವಿಗೇಷನ್‌ನಲ್ಲಿ 18ಕ್ಕೂ ಹೆಚ್ಚು ಮಾರ್ಗಗಳನ್ನು ಇದು ತೋರಿಸಬಲ್ಲದು. ಜತೆಗೆ 8 ಮಾರ್ಗದ ರಸ್ತೆಗಳಲ್ಲಿನ ರೌಂಡ್‌ ಅಬೌಟ್‌ ತೋರಿಸುವ ಸಾಮರ್ಥ್ಯ ಹೊಂದಿದೆ’ ಎಂದು ಏಥರ್ ಎನರ್ಜಿಯ ಸಹ ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ ಹೇಳಿದರು.

ವೇಗದಲ್ಲಿರುವ ಸ್ಕೂಟರ್‌ ಚಾಲಕನ ನಿಯಂತ್ರಣ ತಪ್ಪಿ ಬೀಳುವ ಹಂತದಲ್ಲಿದ್ದರೆ ಓರಿಯಂಟೇಷನ್ ಮತ್ತು ಆಕ್ಸಲರೇಷನ್ ಬದಲಾವಣೆಯನ್ನು ಇದು ಗ್ರಹಿಸಲಿದೆ. ತಕ್ಷಣವೇ ಮೋಟಾರ್ ಅನ್ನು ಬಂದ್ ಮಾಡುತ್ತದೆ. ಜತೆಗೆ ಫ್ಲಾಷಿಂಗ್ ಇಂಡಿಕೇಟರ್‌ ಬೆಳಗುವಂತೆ ಮಾಡುತ್ತದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಹಾಗೂ ಇತರ ವಾಹನ ಚಾಲಕರಿಗೆ ಅಪಘಾತದ ಸೂಚನೆ ತಿಳಿಯಲಿದೆ. ಪ್ರತಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಪ್ಯಾನಿಕ್ ಬ್ರೇಕ್ ಹಾಕಿದರೆ ಬ್ರೇಕ್ ದೀಪಗಳು ಬೆಳಗುವ ಮೂಲಕ ಇತರ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತದೆ.

ಸ್ಕೂಟರ್‌ನ ರೇಂಜ್ ಹೆಚ್ಚಿಸಲು ರಿಜೆನ್ ಸೌಲಭ್ಯವನ್ನು ಏಥರ್‌ 450 ಸ್ಕೂಟರ್‌ನಲ್ಲಿ ಅಳವಡಿಸಲಾಗಿದೆ. ಆಕ್ಸಲರೇಷನ್ ಹಾಗೂ ಮ್ಯಾನುಯಲ್ ಬ್ರೇಕಿಂಗ್ ಇಲ್ಲದ ಸಂದರ್ಭದಲ್ಲಿ ಬ್ಯಾಟರಿಯಲ್ಲಿನ ಶಕ್ತಿಯನ್ನು ಮರು ಬಳಕೆ ಮಾಡುತ್ತದೆ. ಬ್ರೇಕ್ ಪ್ಯಾಡ್‌ ಸವಕಳಿಯನ್ನು ತಗ್ಗಿಸಲೂ ಇದರಲ್ಲಿ ಹಲವು ಕ್ರಮಗಳನ್ನು ಏಥರ್ ಎನರ್ಜಿ ತೆಗೆದುಕೊಂಡಿದೆ. ವಾಟ್ಸ್‌ಆ್ಯಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಡಿಎಂ ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಏಥರ್ ಡ್ಯಾಶ್ ಬೋರ್ಡ್‌ ಮೂಲಕವೇ ವೀಕ್ಷಿಸುವ ಸೌಕರ್ಯವನ್ನು ನೀಡಲಾಗಿದೆ. ಗೂಗಲ್ ಮ್ಯಾಪ್‌ನಿಂದ ಲೊಕೇಷನ್ ಕೂಡಾ ಶೇರ್ ಮಾಡುವ ಅಕವಾಶ ಈ ಸ್ಕೂಟರ್‌ನಲ್ಲಿದೆ.

ಹಿಂಬದಿಯ ಸವಾರರಿಗೆ ಕೆಸರು ಸಿಡಿಯದಂತೆ ಮಡ್‌ ಫ್ಲಾಪ್‌ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಮಾನೊ ಶಾಕ್ ಮತ್ತು ಬ್ರೇಕ್‌ ಕ್ಯಾಲಿರ್ಸ್‌ಗೆ ಕೆಸರಿನಲ್ಲಿ ಹೆಚ್ಚುವರಿ ರಕ್ಷಣೆ ಕೂಡಾ ನೀಡುತ್ತದೆ. ಬೆಂಗಳೂರಿನಲ್ಲಿ (ಎಕ್ಸ್ ಶೋರೂಂ ಬೆಲೆ ): 450 ಎಸ್– ₹1.29.999, 450 ಎಕ್ಸ್‌ (2.9 ಕೆಡಬ್ಲೂಎಚ್)– ₹1,38,000, 450 ಎಕ್ಸ್ (3.7 ಕೆಡಬ್ಲೂಎಚ್‌)– ₹1,44,921  ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT