ಮುಂಬೈ: ಐಷಾರಾಮಿ ಕಾರು ತಯಾರಿಸುವ ಔಡಿ ಕಂಪನಿಯು ತನ್ನ ‘ಎಸ್5 ಸ್ಪೋರ್ಟ್ಬ್ಯಾಕ್’ ಕಾರಿನ ಸುಧಾರಿತ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 79.06 ಲಕ್ಷ.

ಕಂಪನಿಯು ಈ ವರ್ಷದಲ್ಲಿ ಬಿಡುಗಡೆ ಮಾಡುತ್ತಿರುವ ಎರಡನೇ ವಾಹನ ಇದಾಗಿದೆ. ‘ಎಸ್5 ಸ್ಪೋರ್ಟ್ಬ್ಯಾಕ್’ ಕಾರು ತನ್ನ ವಿಶೇಷ ವಿನ್ಯಾಸ, ಆರಾಮದಾಯಕ ಐದು ಆಸನಗಳಿಂದ ಗಮನ ಸೆಳೆಯಲಿದೆ. ಇದನ್ನು ಬಿಡುಗಡೆ ಮಾಡಿದ್ದರಿಂದಾಗಿ ದೇಶದಲ್ಲಿ ಕಂಪನಿಯ ಕಾರುಗಳ ವಿಭಾಗವು ಇನ್ನಷ್ಟು ಬಲಗೊಳ್ಳಲಿದೆ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಧಿಲ್ಲೋನ್ ತಿಳಿಸಿದ್ದಾರೆ.

‘ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿಯೂ ನಮ್ಮ ಮಾರಾಟ ಬೆಳವಣಿಗೆ ಕಾಣುತ್ತಿದ್ದು, ಈ ವರ್ಷದಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದೂ ಧಿಲ್ಲೋನ್ ಹೇಳಿದ್ದಾರೆ.

3.0 ಲೀಟರ್ ಟ್ವಿನ್ ಟರ್ಬೊ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಈ ಕಾರಿನಲ್ಲಿದ್ದು, ಸ್ಫೋರ್ಟ್ ಫ್ರಂಟ್ ಸೀಟ್, ವರ್ಚುವಲ್ ಕಾಕ್ಪಿಟ್, ಸುಧಾರಿತ ಮಲ್ಟಿಮೀಡಿಯಾ ಇಂಟರ್ಫೇಸ್ ಸಿಸ್ಟಂ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.