ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ಬ್ಯಾಗ್‌ ಕಡ್ಡಾಯ: ಕೇಂದ್ರ ಸರ್ಕಾರ

Last Updated 6 ಮಾರ್ಚ್ 2021, 3:10 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ಬ್ಯಾಗ್‌ ಕಡ್ಡಾಯಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ಘೋಷಿಸಿದ್ದು, ‘ಎಲ್ಲಾ ಹೊಸ ಕಾರುಗಳಲ್ಲಿ ಏಪ್ರಿಲ್ 1ರಿಂದ ಡ್ಯುಯಲ್‌ ಫ್ರಂಟ್‌ ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಜೊತೆಗೆ, ಅಸ್ತಿತ್ವದಲ್ಲಿರುವ ಕಾರುಗಳನ್ನು ಆಗಸ್ಟ್‌ನಿಂದ ಡ್ಯುಯಲ್‌ ಏರ್‌ಬ್ಯಾಗ್‌ಗಳೊಂದಿಗೆ ಮಾರಾಟ ಮಾಡಬೇಕಾಗುತ್ತದೆ’ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ ಸಮಿತಿಯ ಸಲಹೆಗಳನ್ನು ಆಧರಿಸಿದೆ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಾರ್ಕ್ ಅಡಿಯಲ್ಲಿ ಏರ್‌ಬ್ಯಾಗ್‌ ಎಐಎಸ್ 145 ಗುಣಮಟ್ಟದ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT