ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಎಲೆಕ್ಟ್ರಿಕ್‌ ಸ್ಕೂಟರ್ ಮೀಸೊ: ಲೈಸೆನ್ಸ್‌, ಆರ್‌ಟಿಒ ನೋಂದಣಿ ಬೇಕಿಲ್ಲ

Last Updated 27 ಜೂನ್ 2020, 3:51 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೋವಿಡ್‌ನಿಂದಾಗಿ ಜಗತ್ತಿನಾದ್ಯಂತ ಖಾಸಗಿ ವಾಹನಗಳ ಸಂಚಾರ ಇಳಿಮುಖವಾಗಿದೆ. ಹೆಚ್ಚಿನ ಜನರು ಮನೆಯಿಂದಲೇ ಕಾರ್ಯಾಚರಿಸುತ್ತಿರುವುದರಿಂದ ದ್ವಿಚಕ್ರ ವಾಹನಗಳ ಓಡಾಟವೂ ಕಡಿಮೆಯಾಗಿದೆ. ಇದರೊಂದಿಗೆ ಪರಿಸರ ಕಾಳಜಿ, ಪೆಟ್ರೋಲ್‌ ಬೆಲೆ ಏರಿಕೆ ಜನರನ್ನು ಎಲೆಕ್ಟ್ರಿಕ್‌ ಚಾಲಿತ ವಾಹನಗಳತ್ತ ಮುಖಮಾಡಿಸಿವೆ. ಇತ್ತೀಚೆಗಷ್ಟೇ ಜಿಮೊಪಾಯ್ ಎಲೆಕ್ಟ್ರಿಕ್‌ ಹೊಸ ಇ–ಸ್ಕೂಟರ್‌ ಮೀಸೊ ಬಿಡುಗಡೆ ಮಾಡಿದೆ.

ಪುಟ್ಟ ಹಾಗೂ ಹಗುರವಾದ ಇ–ಸ್ಕೂಟರ್‌ ಮೀಸೊ ಬೆಲೆ ₹44,000 ನಿಗದಿಯಾಗಿದೆ. ಈ ಮಿನಿ ಸ್ಕೂಟರ್‌ ಮುಂದಿನ ತಿಂಗಳಿನಿಂದ ಗ್ರಾಹಕರಿಗೆ ಸಿಗಲಿದ್ದು, ಮುಂಚಿತವಾಗಿಯೇ ಬುಕ್ಕಿಂಗ್ ಮಾಡಲು ಅವಕಾಶವಿದೆ. ‌

ಈ ಸ್ಕೂಟರ್‌ನಲ್ಲಿ ಒಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸುವ ಅವಕಾಶವಿದೆ. ಬ್ಯಾಟರಿ ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ ಗರಿಷ್ಠ 75 ಕಿ.ಮೀ. ಕ್ರಮಿಸಬಹುದು ಹಾಗೂ ಎರಡು ಗಂಟೆಗಳಲ್ಲಿ ಬ್ಯಾಟರಿ ಶೇ 90ರಷ್ಟು ಚಾರ್ಜ್‌ ಆಗುವುದಾಗಿ ಕಂಪನಿ ಹೇಳಿದೆ.

ಮೀಸೊ ಮಿನಿ ಸ್ಕೂಟರ್‌ ಓಡಿಸಲು ಲೈಸೆನ್ಸ್ ಅಥವಾ ಆರ್‌ಟಿಒ ನೋಂದಣಿ ಬೇಕಿಲ್ಲ. ಇದು ಚಲಿಸುವ ವೇಗ ಗಂಟೆಗೆ 25–35 ಕಿ.ಮೀ.

ಸ್ಕೂಟರ್‌ ಗರಿಷ್ಠ 120 ಕೆ.ಜಿ. ತೂಕ ಹೊರುವ ಸಾಮರ್ಥ್ಯವಿದೆ. ಮಧ್ಯ ಭಾಗದಲ್ಲಿ ಹಾಗೂ ಸೀಟಿನ ಹಿಂಬದಿಯಲ್ಲಿ ಅಗತ್ಯ ವಸ್ತುಗಳನ್ನು ಇಟ್ಟು ಸಾಗಿಸಬಹುದಾಗಿದೆ. ಎಲ್‌ಇಡಿ ಸ್ಪೀಡೊಮೀಟರ್ ಡಿಸ್‌ಪ್ಲೇ, 16 ಇಂಚಿನ ಟ್ಯೂಬ್‌ಲೆಸ್‌ ಟೈರ್‌ಗಳು, ಹೆಕ್ಸಾ ಹೆಡ್‌ ಲ್ಯಾಂಪ್‌, ಎಲ್‌ಇಡಿ ಇಂಡಿಕೇಟರ್‌ ಹೊಂದಿದೆ. ಪೂರ್ಣ ಚಾರ್ಜ್‌ ಆಗಲು 3–4 ಗಂಟೆ ಬೇಕಾಗುತ್ತದೆ.

ಸುರಕ್ಷಿತವಾಗಿರ ಬೇಕು ಹಾಗೂ ನಿತ್ಯ ಚಟುವಟಿಕೆ, ಕಾರ್ಯಾಚರಣೆಗಳ ಭಾಗವಾಗಿ ಸಂಚರಿಸುವುದು ಅಗತ್ಯವಾಗಿರುವ ಸಂದರ್ಭದಲ್ಲಿ ಮೈಕ್ರೊ ಮೊಬಿಲಿಟಿ ಅತ್ಯಂತ ಸುರಕ್ಷಿತ ಮಾರ್ಗವಾಗಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಅಮಿತ್‌ ರಾಜ್‌ ಸಿಂಗ್‌ ಹೇಳಿದ್ದಾರೆ. ಗೊರೀನ್‌ ಇ–ಮೊಬಿಲಿಟಿ ಮತ್ತು ಒಪೈ ಎಲೆಕ್ಟ್ರಿಕ್‌ ಸಂಸ್ಥೆಗಳ ಸಹಭಾಗಿತ್ವವನ್ನು ಜೆಮೊಪಾಯ್‌ ಎಲೆಕ್ಟ್ರಿಕ್‌ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT