ಬುಧವಾರ, ಮೇ 18, 2022
29 °C

ಜಾಗತಿಕ ಮಾರುಕಟ್ಟೆಗೆ ಹೋಂಡಾ ಸಿಬಿ350ಆರ್‌ಎಸ್‌: ಬೆಲೆ ₹1.96 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋಂಡಾ ಮೋಟರ್‌ಸೈಕಲ್ಸ್‌ ಆ್ಯಂಡ್ ಸ್ಕೂಟರ್‌ ಇಂಡಿಯಾ ಕಂಪನಿಯು ಮಧ್ಯಮ ಗಾತ್ರದ ಸಿಬಿ350ಆರ್‌ಎಸ್‌ ಬೈಕ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 1.90 ಲಕ್ಷ ಇದೆ. ಮಂಗಳವಾರದಿಂದಲೇ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಸಿಬಿ ಕುಟುಂಬದ ಎರಡನೇ ಹೊಸ ಮೋಟರ್‌ಸೈಕಲ್‌ ಇದಾಗಿದೆ. 

‘ಮೋಟರ್‌ಸೈಕಲ್‌ ಉತ್ಸಾಹಿಗಳ ಕನಸುಗಳನ್ನು ಸಾಕಾರಗೊಳಿಸುವುದನ್ನು ಬ್ರ್ಯಾಂಡ್ ಸಿಬಿ ಪ್ರತಿನಿಧಿಸುತ್ತದೆ. 1959ರಲ್ಲಿ ಮಾರುಕಟ್ಟೆಗೆ ಸಿಬಿ92 ಪರಿಚಯಿಸಿದ ದಿನದಿಂದ ಇಲ್ಲಿಯವರೆಗೆ ಇದು ತಂತ್ರಜ್ಞಾನದ ಎಲ್ಲೆಗಳನ್ನು ಮೀರಿ ಬೆಳೆದಿದೆ. ಕಾರ್ಯಕ್ಷಮತೆ, ಆರಾಮ, ಶೈಲಿ, ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯ ಸುಂದರ ಪ್ರತೀಕ ಇದಾಗಿದ’ ಎಂದು ಕಂಪನಿಯ ಅಧ್ಯಕ್ಷ ಅತ್ಸುಶಿ ಒಗಾಟಾ ಹೇಳಿದರು.

‘ಸವಾರರ ಜೀವನಶೈಲಿಗೆ ಸರಿಹೊಂದುವ ಬಗೆಯಲ್ಲಿ ಅತ್ಯಾಧುನಿಕ ನಗರ ಶೈಲಿ ಮತ್ತು ಶಕ್ತಿಯುತ ಸುಧಾರಿತ 350ಸಿಸಿ ಎಂಜಿನ್ ಜತೆಗೆ ಇದನ್ನು ರೂಪಿಸಲಾಗಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್‌ ಸಿಂಗ್‌ ಗುಲೇರಿಯಾ ತಿಳಿಸಿದರು.

4 ಸ್ಟ್ರೋಕ್‌ 3500 ಸಿಸಿ ಎಂಜಿನ್‌ 5,500 ಆರ್‌ಪಿಎಂನಲ್ಲಿ ಗರಿಷ್ಠ 15.5ಕಿಲೊವಾಟ್‌ ಶಕ್ತಿ ಉತ್ಪಾದಿಸಬಲ್ಲದು. ಗಿಯರ್‌ ಶಿಫ್ಟ್‌ ಮೃದುವಾಗಿಸಲು ಅಸಿಸ್ಟ್ ಮತ್ತು ಸ್ಲಿಪ್ಪರ್‌ ಕ್ಲಚ್‌ ಒಳಗೊಂಡಿದೆ. ಡಿಜಿಟಲ್‌ ಅನಲಾಗ್‌ ಮೀಟರ್‌ನಲ್ಲಿ ಟಾರ್ಕ್‌ ಕಂಟ್ರೋಲ್‌, ಎಬಿಎಸ್‌, ಸೈಡ್‌ ಸ್ಟ್ಯಾಂಡ್‌ ಇಂಡಿಕೇಟರ್‌ ವಿತ್‌ ಎಂಜಿನ್‌ ಎಕ್ಸಿಬಿಟರ್, ಗಿಯರ್ ಪೊಸಿಷನ್‌ ಇಂಡಿಕೇಟರ್ ಮತ್ತು ಬ್ಯಾಟರಿ ವೊಲ್ಟೋಜ್‌ ಮಾಹಿತಿಗಳನ್ನು ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು