ಮಂಗಳವಾರ, ಜುಲೈ 14, 2020
28 °C

ಮಾರುತಿ ಸುಜುಕಿ: ಸ್ಫೋರ್ಟ್ಸ್‌ ಆವೃತ್ತಿಯ ಸಿಯಾಜ್‌ ಕಾರು ಬಿಡುಗಡೆ 

ಪಿಟಿಐ Updated:

ಅಕ್ಷರ ಗಾತ್ರ : | |

ಮಾರುತಿ ಸುಜುಕಿ ಸಿಯಾಜ್‌ ಎಸ್‌

ನವದೆಹಲಿ: ದೇಶದ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಶನಿವಾರ ಹೊಸ 'ಸಿಯಾಜ್‌ ಎಸ್‌' ಬಿಡುಗಡೆ ಮಾಡಿದೆ. ಸ್ಫೋರ್ಟ್ಸ್‌ ಆವೃತ್ತಿಯ ಸೆಡಾನ್‌ ಕಾರು ಇದಾಗಿದೆ. 

ಅನಾವರಣಗೊಂಡಿರುವ 'ಸಿಯಾಜ್‌–ಎಸ್‌' ಕಾರಿಗೆ ₹ 10.08 ಲಕ್ಷ ನಿಗದಿಯಾಗಿದೆ. ಬಿಎಸ್‌–6 ಗುಣಮಟ್ಟದ ಸಿಯಾಜ್‌ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಸಿಯಾಜ್‌ ಬಿಎಸ್–6 ಕಾರುಗಳ ಬೆಲೆ ₹ 8.31 ಲಕ್ಷದಿಂದ ₹ 11.09 ಲಕ್ಷ ನಿಗದಿಯಾಗಿದೆ. ಏಪ್ರಿಲ್‌ 1ರಿಂದ ಬಿಎಸ್‌–6 ವಾಯು ಮಾಲಿನ್ಯ ಪರಿಮಾಣ ಜಾರಿಯಾಗಲಿದೆ. 

ಎಂಜಿನ್‌ ಸಾಮರ್ಥ್ಯ, ಸೆಳೆಯುವ ಹೊರ ವಿನ್ಯಾಸ ಹಾಗೂ ಕಾರಿನ ಒಳಗಿನ ಪ್ರೀಮಿಯಂ ವಿನ್ಯಾಸಗಳಿಂದ ಜನಪ್ರಿಯಗೊಂಡಿರುವ ಸಿಯಾಜ್‌ ಶೇ 29ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಈವರೆಗೂ 2.7 ಲಕ್ಷ ಕಾರುಗಳು ಮಾರಾಟಗೊಂಡಿವೆ. 

ಬಿಡುಗಡೆಯಾಗಿರುವ ಸ್ಫೋರ್ಟ್‌ ಆವೃತ್ತಿಯ ಸಿಯಾಜ್‌ ಕಾರಿಗೆ ಹಿಂಬದಿಯಲ್ಲಿ ಅಳವಡಿಸಲಾಗಿರುವ ಸ್ಪಾಯ್ಲರ್‌ ಗಮನ ಸೆಳೆಯುತ್ತಿದೆ. ಮುಂಬದಿಯಲ್ಲಿ ಫಾಗ್‌ ಲ್ಯಾಂಪ್‌, ಮಲ್ಟಿ ಸ್ಪೋಕ್‌ ಹೊಂದಿರುವ 16 ಇಂಚಿನ ಅಲಾಯ್‌ ವೀಲ್ಸ್‌ ನೀಡಲಾಗಿದೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು