ಸೋಮವಾರ, ಡಿಸೆಂಬರ್ 6, 2021
23 °C

ಎಲೆಕ್ಟ್ರಿಕ್ ಕಾರು ಪರಿಚಯಿಸಲಿದೆ ಆ್ಯಪಲ್‌: ಸ್ವಯಂಚಾಲಿತ ವ್ಯವಸ್ಥೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Apple Logo DH Collection

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಆ್ಯಪಲ್‌, ಎಲೆಕ್ಟ್ರಿಕ್ ಕಾರು ಪರಿಚಯಿಸಲು ಮುಂದಾಗಿದೆ.

2025ರ ವೇಳೆಗೆ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡ ನೂತನ ಆ್ಯಪಲ್‌ ಕಾರು ಸಿದ್ಧವಾಗಲಿದೆ.

ಆ್ಯಪಲ್‌ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಮುಂದಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಕಂಪನಿಯ ಷೇರುಗಳು ಕೂಡ ಏರಿಕೆ ಕಂಡಿದೆ.

ಪ್ರಾಜೆಕ್ಟ್ ಟೈಟಾನ್ ಹೆಸರಿನ ಯೋಜನೆ ಮೂಲಕ ಆ್ಯಪಲ್‌ ಹೊಸ ಕಾರು ಪರಿಚಯಿಸುವ ಸಾಧ್ಯತೆಯಿದೆ.

ಪರಿಸರ ಕಾಳಜಿ ಮತ್ತು ಮಿತವ್ಯಯದ ಇಂಧನ ಬಳಕೆ ಕುರಿತು ಹೆಚ್ಚಿನ ಆದ್ಯತೆ ವಹಿಸಿ ಎಲೆಕ್ಟ್ರಿಕ್ ಕಾರು ತಯಾರಾಗಲಿದೆ.

ಆದರೆ ಹೊಸ ಯೋಜನೆ ಮತ್ತು ಕಾರಿನ ಬಗ್ಗೆ ವಿವರ ನೀಡಲು ಆ್ಯಪಲ್‌ ನಿರಾಕರಿಸಿದೆ ಎಂದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು