ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ರಸ್ತೆಗೆ ಬಂತು ವಿಶಿಷ್ಟ ‘ಪೆಡಲ್ ಟ್ರೈಸಿಕಲ್’.. ಇಲ್ಲಿದೆ ಇದರ ವಿಶೇಷತೆ

Last Updated 25 ಜನವರಿ 2023, 11:00 IST
ಅಕ್ಷರ ಗಾತ್ರ

ಬೆಂಗಳೂರು: ಜನವರಿ ತಿಂಗಳ ಆರಂಭದಲ್ಲಿ ವಿಶಿಷ್ಟ ಎನ್ನಬಹುದಾದ ಸೈಕಲ್ ಒಂದು ಬೆಂಗಳೂರಿನ ಈಸ್ಟ್ ಎಂಡ್ ಸರ್ಕಲ್‌ನಲ್ಲಿ ಕಾಣಿಸಿಕೊಂಡು ಜನರನ್ನು ಚಕಿತಗೊಳಿಸಿತ್ತು. ಜನರು ನಿಂತಲ್ಲೇ ನಿಂತು ನಿಬ್ಬೆರಗಾಗಿ ಇದನ್ನು ನೋಡಿದ್ದರು. ಅಲ್ಲದೆ, ಈ ಸೈಕಲ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿ ಎಲ್ಲರ ಗಮನ ಸೆಳೆದಿದ್ದವು. ಕೆಲವರು ಇದನ್ನು ಆಟಿಕೆ ರೇಸ್ ಕಾರು ಎಂದುಕೊಂಡರೆ, ಮತ್ತೆ ಕೆಲವರಿಗೆ ಇದು ರಸ್ತೆ ಮೇಲೆ ಸಂಚರಿಸುವುದು ಸುರಕ್ಷಿತವೇ? ಎಲ್ಲಿ ಪಾರ್ಕ್ ಮಾಡುವುದು? ಕಾರು ಅಥವಾ ಸೈಕಲ್ ಲೇನ್‌ನಲ್ಲೋ ಎಂಬ ಪ್ರಶ್ನೆ ಎದ್ದಿತ್ತು.

ಅಂದಹಾಗೆ, ಇದನ್ನು ‘ವೆಲೊಮೊಬೈಲ್’(ಸೈಕಲ್ ರೀತಿಯಲ್ಲೇ ತುಳಿಯುವ ಸೈಕಲ್ ಕಾರು) ಎನ್ನಲಾಗುತ್ತದೆ. ಯೂರೋಪ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ 3 ಚಕ್ರದ ಈ ಸೈಕಲ್ ಭಾರತಕ್ಕೆ ಹೊಸದು. ಇದೊಂದು ಪೆಡಲ್ ಟ್ರೈಸಿಕಲ್ ಆಗಿದ್ದು, ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಣೆ ಒದಗಿಸಲು ಹೊರ ಕವಚವಿದೆ. ಬ್ಯಾಗೇಜ್ ಸ್ಥಳವೂ ಇದರಲ್ಲಿ ಇರಲಿದ್ದು, ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಬಹುದಾಗಿದೆ.

ಇದು ಗೋಕಾರ್ಟ್ ರೀತಿ ಇದ್ದು, ಹಿಂಬದಿ ಕುಳಿತಿರುವ ವ್ಯಕ್ತಿ ಪೆಡಲ್ ಮಾಡುವ ಮೂಲಕ ಸೈಕಲ್ ಚಲಿಸುತ್ತದೆ.

ದಾರಿಹೋಕರ ಆಕರ್ಷಣೆಗೆ ಕಾರಣವಾಗಿರುವ ಈ ನೀಲಿ ಮತ್ತು ಬಿಳಿ ಬಣ್ಣದ ‘ವೆಲೊಮೊಬೈಲ್’, ವಿಶಿಷ್ಟ ಸೈಕಲ್‌ಗಳ ಸಂಗ್ರಹಕಾರ, ಸೈಕ್ಲಿಸ್ಟ್ 41 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಫಣೀಶ್ ನಾಗರಾಜ ಅವರದ್ದು. ಇದು ರೊಮೇನಿಯಾ ಕಂಪನಿಯೊಂದರ ಕಸ್ಟಮ್ ಮೇಡ್ ಸೈಕಲ್ ಆಗಿದ್ದು, ಬೆಂಗಳೂರಿನ ಸೈಕಲ್ ಶೋರೂಮ್ Cadence90 ಎಕ್ಸ್‌ಕ್ಲೂಸಿವ್ ಡೀಲರ್ ಮೂಲಕ ‘ಆಲ್ಫಾ–7’ಮಾದರಿಯ ಈ ವೆಲೊಮೊಬೈಲ್ ಅನ್ನು ನಾಗರಾಜ ಅವರಿಗೆ ತರಿಸಿಕೊಟ್ಟಿದೆ.

ಈ ವಿಶಿಷ್ಟ ಸೈಕಲ್ ಬೆಲೆ ತೆರಿಗೆ ಸೇರಿ ₹18 ಲಕ್ಷವಾಗಿದ್ದು, ಜೆ.ಪಿ. ನಗರದ ನಿವಾಸಿಯಾಗಿರುವ ಫಣೀಶ್, ಮನೆಗೆ ದಿನಸಿ ಪದಾರ್ಥಗಳನ್ನು ತರಲು ಅಥವಾ ವೀಕೆಂಡ್ ಲಾಂಗ್ ರೈಡ್‌ಗೆ ತಮ್ಮ ಸೈಕಲ್ ಬದಲಿಗೆ ಇದನ್ನು ಪರ್ಯಾಯವಾಗಿ ಬಳಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT