ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಪ್‌ಗಳ ಪೂರೈಕೆ 2025ರವರೆಗೂ ಅಸ್ಥಿರ; ಆದರೂ ಕಾರುಗಳ ಮಾರಾಟ ಶೇ 7ರಷ್ಟು ಹೆಚ್ಚಳ

Published 8 ನವೆಂಬರ್ 2023, 9:55 IST
Last Updated 8 ನವೆಂಬರ್ 2023, 9:55 IST
ಅಕ್ಷರ ಗಾತ್ರ

ಬರ್ಲಿನ್: ಸೆಮಿಕಂಡಕ್ಟರ್‌ ಪೂರೈಕೆ ಸರಪಳಿ ಉತ್ತಮವಾಗುತ್ತಿದ್ದರೂ 2025ರವರೆಗೆ ವಾಹನಗಳ ಬಿಡಿಭಾಗಗಳಲ್ಲಿ ತೀರಾ ಅಗತ್ಯವಿರುವ ಕೆಲ ಚಿಪ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯಲಿದೆ. ಹೀಗಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ ಶೇ 5ರಿಂದ 7ರಷ್ಟು ಹೆಚ್ಚಳವಾಗಿದೆ ಎಂದು ಜರ್ಮನಿಯ ವಾಹನ ಕ್ಷೇತ್ರದ ಪರಿಣಿತರು ಹೇಳಿದ್ದಾರೆ.

ಹಿಂದಿನ ವರ್ಷ ಕಾರುಗಳ ಮಾರಾಟ ದರ ಶೇ 3ರಿಂದ 5ರ ದರದಲ್ಲಿತ್ತು. ಕಳೆದ ವರ್ಷ ಲಘು ಮೋಟಾರು ವಾಹನಗಳ ಮಾರಾಟ ಶೇ 1ರಿಂದ 3ರಷ್ಟಿತ್ತು. 2ನೇ ತ್ರೈಮಾಸಿಕದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳವಾಗಿತ್ತು. ಇದರಿಂದಾಗಿ ಕಾರುಗಳ ಬೆಲೆಯಲ್ಲೂ ಏರಿಕೆಯಾಗುವ ಸುಳಿವನ್ನು ಪರಿಣಿತರು ನೀಡಿದ್ದಾರೆ. 

‘ದರ ಹೆಚ್ಚಳ ಕುರಿತು ಗ್ರಾಹಕರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು. ಆದರೂ ಬೆಲೆ ಏರಿಕೆ ಅನಿವಾರ್ಯವಾಗಲಿದೆ’ ಎಂದು ಕಾಂಟಿನೆಂಟಲ್‌ನ ಮುಖ್ಯ ಹಣಕಾಸು ಅಧಿಕಾರಿ ಕಾಟಿಯಾ ಗಾರ್ಸಿಯಾ ವಿಲಾ ಹೇಳಿದ್ದಾರೆ.

‘ಸ್ವಯಂ ಚಾಲಿತ ಕಾರುಗಳ ಉತ್ಪಾದನೆ, ಸಂವಹನಕ್ಕೆ ನೀಡುತ್ತಿರುವ ಹೆಚ್ಚಿನ ಗಮನದಿಂದಾಗಿ ನಿರ್ದಿಷ್ಟ ಸ್ವರೂಪದ ಚಿಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇಂಥ ಚಿಪ್‌ಗಳ ಪೂರೈಕೆ ಸರಾಗವಾಗಲು 2025ರವರೆಗೂ ಕಾಯಲೇಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT