ಗುರುವಾರ , ಸೆಪ್ಟೆಂಬರ್ 23, 2021
22 °C

ಫೆಬ್ರುವರಿಯಲ್ಲಿ ವಾಹನ ಮಾರಾಟ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಫೆಬ್ರುವರಿಯಲ್ಲಿ ಎಲ್ಲ ಬಗೆಯ ವಾಹನಗಳ ಮಾರಾಟವು ಶೇ 19ರಷ್ಟು ಕುಸಿತ ದಾಖಲಿಸಿದೆ.

ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ಬಿಎಸ್‌6 ಅಳವಡಿಕೆಯಿಂದಾಗಿ ತಯಾರಿಕೆ ಪ್ರಮಾಣ ಕಡಿಮೆಯಾಗಿದ್ದರೂ ಮಂದಗತಿಯ ಆರ್ಥಿಕತೆಯ ಕಾರಣಕ್ಕೆ ಬೇಡಿಕೆ ಕುಸಿದಿರುವುದು ಮುಂದುವರೆದಿದೆ. 2019ರ ಇದೇ ಅವಧಿಯಲ್ಲಿನ 20.34 ಲಕ್ಷ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ 16.46 ಲಕ್ಷ ವಾಹನಗಳಷ್ಟೇ ಮಾರಾಟವಾಗಿವೆ ಎಂದು ಭಾರತದ ವಾಹನ ತಯಾರಿಕಾ ಸಂಘವು (ಎಸ್‌ಐಎಎಂ) ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

‘ದೇಶಿ ಕಂಪನಿಗಳ ವಾಹನ ತಯಾರಿಕೆ ಮೇಲೆ ಚೀನಾದಿಂದ ಆಮದಾಗಲಿರುವ ಬಿಡಿಭಾಗಗಳ ಕೊರತೆಯು ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ‘ಎಸ್‌ಐಎಎಂ’ ಅಧ್ಯಕ್ಷ ರಾಜನ್‌ ವಧೇರಾ ಹೇಳಿದ್ದಾರೆ.

ವಾಣಿಜ್ಯ ವಾಹನಗಳ ಮಾರಾಟವು ಹಿಂದಿನ ವರ್ಷದ 87,436ಕ್ಕೆ ಹೋಲಿಸಿದರೆ ಶೇ 33ರಷ್ಟು ಕಡಿಮೆಯಾಗಿ 58,670ಕ್ಕೆ ಇಳಿದಿದೆ.

ಕಾರ್‌ ತಯಾರಿಸುವ ದೇಶದ ಅತಿದೊಡ್ಡ ಕಂಪನಿಯಾಗಿರುವ ಮಾರುತಿ ಸುಜುಕಿಯ ಮಾರಾಟ ಶೇ 2.34ರಷ್ಟು ಕಡಿಮೆಯಾಗಿದೆ. ಇದರ ಪ್ರಮುಖ ಪ್ರತಿಸ್ಪರ್ಧಿ ಹುಂಡೈ ಕಂಪನಿಯ ಮಾರಾಟ ಶೇ 7.19ರಷ್ಟು (40,010) ಕಡಿಮೆಯಾಗಿದೆ. ಕಿಯಾ ಮೋಟರ್ಸ್‌ 15,644 ಕಾರ್‌ಗಳನ್ನು ಮಾರಾಟ ಮಾಡಿ ಮೂರನೇ ಸ್ಥಾನದಲ್ಲಿ ಇದೆ.

ದ್ವಿಚಕ್ರ ವಾಹನ: ದ್ವಿಚಕ್ರ ವಾಹನಗಳ ಮಾರಾಟವೂ ಶೇ 19.82ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಹೀರೊ ಮೋಟೊಕಾರ್ಪ್‌ 4.80 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಶೇ 20.05ರಷ್ಟು ಕಡಿಮೆಯಾಗಿದೆ. ಇದರ ಪ್ರತಿಸ್ಪರ್ಧಿ ಕಂಪನಿಯಾಗಿರುವ ಹೋಂಡಾ ಮೋಟರ್‌ಸೈಕಲ್ ಆ್ಯಂಡ್‌ ಸ್ಕೂಟರ್‌ ಇಂಡಿಯಾದ ಬೈಕ್‌ಗಳ ಮಾರಾಟ ಶೇ 22.83ರಷ್ಟು ಕಡಿಮೆಯಾಗಿ 3.15 ಲಕ್ಷಕ್ಕೆ ಇಳಿದಿದೆ.

ಟಿವಿಎಸ್‌ ಮೋಟರ್‌ ಕಂಪನಿಯ ಮಾರಾಟವು ಶೇ 26.73ರಷ್ಟು ಕಡಿಮೆಯಾಗಿ 1.69 ಲಕ್ಷಕ್ಕೆ ಇಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು