ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಲಿದೆ ಫೋರ್ಡ್‌: ಕೆಲವೇ ಕಾರುಗಳು ಲಭ್ಯ, ಕಾರ್ಮಿಕರ ಭವಿಷ್ಯ ಅತಂತ್ರ

Last Updated 9 ಸೆಪ್ಟೆಂಬರ್ 2021, 13:20 IST
ಅಕ್ಷರ ಗಾತ್ರ

ದೆಹಲಿ: ಅಮೆರಿಕದ ವಾಹನ ತಯಾರಕ ಸಂಸ್ಥೆ ಫೋರ್ಡ್‌ ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ.

ಅಂಗಸಂಸ್ಥೆಯಾದ ‘ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌’ನ ಎರಡು ಉತ್ಪಾದನಾ ಘಟಕಗಳನ್ನೂ ನಷ್ಟದ ಕಾರಣದಿಂದಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಫೋರ್ಡ್‌ ಸಂಸ್ಥೆ ಗುರುವಾರ ಘೋಷಿಸಿದೆ

ನಗರ ಆಧಾರಿತ ‘ಫೋರ್ಡ್ ಬಿಸಿನೆಸ್ ಸೊಲ್ಯೂಷನ್ಸ್’ ತಂಡವನ್ನು ವಿಸ್ತರಿಸುವುದಾಗಿಯೂ‌, ಜಾಗತಿಕ ಮಟ್ಟದ ವಾಹನಗಳು ಮತ್ತು ಎಲೆಕ್ಟ್ರಿಕ್‌ ಎಸ್‌ಯುವಿಗಳನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುವುದಾಗಿಯೂ ಫೋರ್ಡ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಫೋರ್ಡ್ ಇಂಡಿಯಾ ಕಂಪನಿಯು ಭಾರತದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದೆ. ಒಂದು ತಮಿಳುನಾಡಿನ ಚೆನ್ನೈ ಬಳಿ ಇದ್ದರೆ, ಮತ್ತೊಂದು ಗುಜರಾತ್‌ನ ಸನಂದ್ ಬಳಿ ಇದೆ.

ಉತ್ಪಾದನಾ ಘಟಕಗಳನ್ನು ಮುಚ್ಚಿದರೂ ಭಾರತದ ಗ್ರಾಹಕರಿಗೆ ವಾಹನಗಳ ಬಿಡಿ ಭಾಗಗಳು, ಸೇವೆ, ಇನ್ನಿತರೆ ನೆರವನ್ನು ಒದಗಿಸುವುದಾಗಿ ಫೋರ್ಡ್‌ ತಿಳಿಸಿದೆ.

‘ನಿರ್ಧಾರದಂತೆ, 2021ರ ನಾಲ್ಕನೇ ತ್ರೈಮಾಸಿಕದ ಹೊತ್ತಿಗೆ ಗುಜರಾತ್‌ನ ಸನಂದ್‌ನಲ್ಲಿ ವಾಹನ ಜೋಡಣೆ ಘಟಕವನ್ನು ಮುಚ್ಚಲಾಗುತ್ತದೆ. 2022ರ ಎರಡನೇ ತ್ರೈಮಾಸಿಕದಲ್ಲಿ ಚೆನ್ನೈನಲ್ಲಿರುವ ವಾಹನಗಳ ಎಂಜಿನ್ ಉತ್ಪಾದನೆಯನ್ನು ನಿಲ್ಲಿಸಲಾಗುತ್ತದೆ,‘ ಎಂದು ಸಂಸ್ಥೆ ಹೇಳಿದೆ.

ಕಳೆದ 10 ವರ್ಷಗಳಲ್ಲಿ 2 ಶತಕೋಟಿ ಡಾಲರ್‌ (₹14.70 ಸಾವಿರ ಕೋಟಿ) ನಷ್ಟ ಅನುಭವಿಸಿರುವುದಾಗಿ ಫೋರ್ಡ್‌ ಇಂಡಿಯಾ‌ ಸಂಸ್ಥೆ ಮಾಹಿತಿ ಒದಗಿಸಿದೆ.

ಡೀಲರ್‌ಗಳ ಬಳಿ ದಾಸ್ತಾನು ಲಭ್ಯವಿರುವ ವರೆಗೆ ಫಿಗೊ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್, ಮತ್ತು ಎಂಡೀವರ್ ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ದಾಸ್ತಾನು ಪೂರ್ಣಗೊಂಡ ಕೂಡಲೇ ಅವುಗಳ ಮಾರಾಟವೂ ಸ್ತಬ್ಧವಾಗಲಿದೆ. ನಂತರಮುಸ್ತಾಂಗ್ ಕೂಪ್ ಸೇರಿದಂತೆ ವಿವಿಧ ಮಾದರಿಗಳ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಫೋರ್ಡ್‌ ಇಚ್ಚಿಸಿದೆ.

’ಕಂ‍ಪನಿಯ ಈ ನಿರ್ಧಾರವು ಸುಮಾರು 4,000 ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಆಗಲಿರುವ ತೊಂದರೆಯ ಪ್ರಮಾಣವನ್ನು ತಗ್ಗಿಸಲು ಸಂಸ್ಥೆಯು ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳು, ಪೂರೈಕೆದಾರರು, ವಿತರಕರು, ಸರ್ಕಾರ, ಚೆನ್ನೈ ಮತ್ತು ಸನಂದ್‌ನ ಇತರ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ನ್ಯಾಯಯುತ ಮತ್ತು ಸಮತೋಲಿತ ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ,‘ ಎಂದು ಪೋರ್ಡ್‌ ಹೇಳಿದೆ.

ಪೋರ್ಡ್‌ನ ತೀರ್ಮಾನದಿಂದ ಸುಮಾರು 4,800 ಉದ್ಯೋಗಿಗಳ ಭವಿಷ್ಯ ಅತಂತ್ರವಾಗಲಿದೆ ಎಂದು ಕಾರ್ಮಿಕ ಸಂಘಟನೆಯ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.‌

ಫೋರ್ಡ್ ಇಂಡಿಯಾ ಚೆನ್ನೈ ಘಟಕದಲ್ಲಿ ಒಟ್ಟಾರೆ 3300 ಸಿಬ್ಬಂದಿ ಇರುವುದಾಗಿಯೂ, ಸನಂದ್‌ನಲ್ಲಿ ಕಾರ್ಮಿಕರ 1,500 ಸಿಬ್ಬಂದಿ ಇರುವುದಾಗಿಯೂ ಕಾರ್ಮಿಕ ಸಂಘಟನೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT