ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೋ ಮೋಟೋಕಾರ್ಪ್ ದ್ವಿಚಕ್ರ ವಾಹನಗಳ ಬೆಲೆ ಏಪ್ರಿಲ್‌ನಿಂದ ಏರಿಕೆ

Last Updated 24 ಮಾರ್ಚ್ 2021, 6:48 IST
ಅಕ್ಷರ ಗಾತ್ರ

ನವದೆಹಲಿ: ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯ ಅತಿದೊಡ್ಡ ಕಂಪನಿ ಹೀರೋ ಮೋಟೋಕಾರ್ಪ್, ಏಪ್ರಿಲ್‌ ತಿಂಗಳಿನಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಹೇಳಿದೆ.

ಮಂಗಳವಾರ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಹೀರೋ ಮೋಟೋಕಾರ್ಪ್, ಉತ್ಪಾದನಾ ವೆಚ್ಚ ಏರಿಕೆ ಮತ್ತು ಬಿಡಿಭಾಗ ದರ ಹೆಚ್ಚಳದಿಂದಾಗಿ ಮುಂದಿನ ತಿಂಗಳಿನಿಂದ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಬೆಲೆಯಲ್ಲಿ ₹2500 ವರೆಗೆ ಹೆಚ್ಚಳವಾಗಲಿದೆ ಎಂದು ಹೇಳಿದೆ.

ಏಪ್ರಿಲ್‌ 1, 2021ರಿಂದ ಜಾರಿಗೆ ಬರುವಂತೆ ಎಲ್ಲ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಎಕ್ಸ್ ಶೋರೂಂ ದರವನ್ನು ಪರಿಷ್ಕರಿಸಲಾಗುವುದು ಎಂದು ಕಂಪನಿ ಹೇಳಿದ್ದು, ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ಅಲ್ಲದೆ, ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ, ವೆಚ್ಚ ಕಡಿತದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಹೊಸ ದ್ವಿಚಕ್ರ ವಾಹನ ಖರೀದಿದಾರರಿಗೆ ಅನುಕೂಲವಾಗಲಿದೆ ಎಂದು ಹೀರೋ ಹೇಳಿದೆ.

ವಿವಿಧ ಮಾದರಿ ಮತ್ತು ಆವೃತ್ತಿಗೆ ಅನುಗುಣವಾಗಿ ದರ ಏರಿಕೆಯಾಗಲಿದೆ. ಒಟ್ಟಾರೆ ₹2,500 ವರೆಗೆ ದರ ಹೆಚ್ಚಳ ಕಂಡುಬರಬಹುದು. ಅಲ್ಲದೆ, ಮಾರುಕಟ್ಟೆಯಿಂದ ಮತ್ತೊಂದು ಮಾರುಕಟ್ಟೆಗೆ ಕೆಲವೊಂದು ದರವ್ಯತ್ಯಾಸವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT