ಬುಧವಾರ, ಡಿಸೆಂಬರ್ 2, 2020
25 °C

ಹೋಂಡಾ ಕಾರ್ಸ್‌ ಇಂಡಿಯಾದಿಂದ ಅಮೇಜ್, ಡಬ್ಲ್ಯುಆರ್‌–ವಿ ಸುಧಾರಿತ ಆವೃತ್ತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Honda WR V

ನವದೆಹಲಿ: ಹೋಂಡಾ ಕಾರ್ಸ್‌ ಇಂಡಿಯಾವು ‘ಅಮೇಜ್’ ಮತ್ತು ‘ಡಬ್ಲ್ಯುಆರ್‌–ವಿ’ಯ ವಿಶೇಷ ಸುಧಾರಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

‘ಟಾಪ್ ಗ್ರೇಡ್ VX’ ಆಧಾರಿತ ಸುಧಾರಿತ ಆವೃತ್ತಿಯ ಎರಡೂ ಕಾರುಗಳು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು ಎಲ್ಲ ಬಣ್ಣಗಳಲ್ಲೂ ಲಭ್ಯವಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಕಂಪನಿಯ ಉಪಾಧ್ಯಕ್ಷ, ಮಾರ್ಕೆಟಿಂಗ್ ಆ್ಯಂಡ್ ಸೇಲ್ಸ್‌ ಡೈರೆಕ್ಟರ್ ರಾಜೇಶ್ ಗೋಯಲ್ ಸುಧಾರಿತ ಆವೃತ್ತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ‘ಹಬ್ಬದ ಈ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ನಮ್ಮ ಕಾರಿನ ಮಾಡೆಲ್‌ಗಳನ್ನು ಇನ್ನಷ್ಟು ಅಂದಗೊಳಿಸುವತ್ತ ಗಮನಹರಿಸಿದ್ದೇವೆ’ ಎಂದು ಹೇಳಿದ್ದಾರೆ.

ಹೋಂಡಾ ಅಮೇಜ್‌ ವಿಶೇಷ

* ಎಂಟಿ (ಮ್ಯಾನುವಲ್ ಟ್ರಾನ್ಸ್‌ಮಿಷನ್), ಸಿವಿಟಿ (ಕಂಟಿನ್ಯೂವಸ್ ವೇರಿಯೇಬಲ್ ಟ್ರಾನ್ಸ್‌ಮಿಷನ್) ಆವೃತ್ತಿಗಳಲ್ಲಿ ಟಾಪ್ ಗ್ರೇಡ್ VX ಆಧಾರಿತವಾಗಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯ

* ಆಕರ್ಷಕ ವಿಂಡೋ ಕ್ರೋಮ್ ಮೌಲ್ಡಿಂಗ್

* ಪ್ರೀಮಿಯಂ ಸುಯೇಡ್ ಬ್ಲಾಕ್ ಸೀಟ್ ಕವರ್

* ಆರಾಮದಾಯಕ ಮತ್ತು ಫಂಕ್ಷನಲ್ ಆರ್ಮ್‌ರೆಸ್ಟ್

* ಸ್ಟೆಪ್ ಇಲ್ಯೂಮಿನೇಷನ್ ಮತ್ತು ಫ್ರಂಟ್ ಫೂಟ್ ಲೈಟ್

ಬೆಲೆ ಎಷ್ಟು?

ಹೋಂಡಾ ಅಮೇಜ್‌ ಪೆಟ್ರೋಲ್ ಕಾರಿನ ಎಂಟಿ ಆವೃತ್ತಿಯ ಎಕ್ಸ್‌ ಶೋರೂಂ ದರ (ದೆಹಲಿ) ₹7,96,000 ಇದೆ. ಸಿವಿಟಿ ಆವೃತ್ತಿಯದ್ದು ₹8,79,000 ಇದೆ. ಡೀಸೆಲ್ ಕಾರಿನ ಎಂಟಿ ಆವೃತ್ತಿಯ ಎಕ್ಸ್‌ ಶೋರೂಂ ದರ (ದೆಹಲಿ) ₹9,26,000 ಇದ್ದರೆ ಸಿವಿಟಿ ಆವೃತ್ತಿಯದ್ದು ₹9,99,000 ಇದೆ.

ಡಬ್ಲ್ಯುಆರ್‌–ವಿ ವಿಶೇಷ

* ಎಂಟಿ ಆವೃತ್ತಿಯಲ್ಲಿ ಟಾಪ್ ಗ್ರೇಡ್ VX ಆಧಾರಿತವಾಗಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯ

* ಆಕರ್ಷಕ ಕ್ರೋಮ್ ಗಾರ್ನಿಷ್ಡ್ ಗ್ರಿಲ್ ಮತ್ತು ಫಾಗ್ ಲ್ಯಾಂಪ್

* ಎಕ್ಸ್‌ಕ್ಲೂಸಿವ್ ಎಡಿಷನ್ ಬಾಡಿ ಗ್ರಾಫಿಕ್ಸ್

* ಪ್ರೀಮಿಯಂ ಸುಯೇಡ್ ಸೀಟ್ ಕವರ್

* ಸ್ಟೆಪ್ ಇಲ್ಯುಮಿನೇಷನ್ ಆ್ಯಂಡ್ ಫ್ರಂಟ್‌ ಫೂಟ್ ಲೈಟ್

* ಎಕ್ಸ್‌ಕ್ಲೂಸಿವ್ ಎಡಿಷನ್ ಎಂಬ್ಲೆಮ್

ಬೆಲೆ ಎಷ್ಟು?

ಹೋಂಡಾ ಡಬ್ಲ್ಯುಆರ್‌–ವಿ ಪೆಟ್ರೋಲ್ ಕಾರಿನ ಎಂಟಿ ಆವೃತ್ತಿಯ ಎಕ್ಸ್‌ ಶೋರೂಂ ದರ (ದೆಹಲಿ) ₹6,69,900 ಇದೆ. ಡೀಸೆಲ್ ಕಾರಿನ ಎಂಟಿ ಆವೃತ್ತಿಯ ದರ ₹10,99,900 ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು