ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

XUV 700: 1 ಲಕ್ಷ ಕಾರುಗಳಲ್ಲಿ ತಾಂತ್ರಿಕ ದೋಷ; ಪರಿಶೀಲನೆಗೆ ಮುಂದಾದ ಮಹಿಂದ್ರಾ

Published 19 ಆಗಸ್ಟ್ 2023, 11:04 IST
Last Updated 19 ಆಗಸ್ಟ್ 2023, 11:04 IST
ಅಕ್ಷರ ಗಾತ್ರ

ನವದೆಹಲಿ: ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಯ ಸ್ಪೋರ್ಟ್ಸ್‌ ಯುಟಿಲಿಟಿ ವಾಹನ ಎಕ್ಸ್‌ಯುವಿ 700 ಕಾರಿನ ಎಂಜಿನ್‌ ಕೋಣೆಯಲ್ಲಿ ವೈರಿಂಗ್ ಸಮಸ್ಯೆ ಕಂಡುಬಂದಿದ್ದು, ಇವುಗಳನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಕಂಪನಿ ಹೇಳಿದೆ.

2021ರ ಜೂನ್ 8ರಿಂದ 2023ರ ಜೂನ್ 28ರವರೆಗೆ ತಯಾರಾದ 1.08 ಲಕ್ಷ ಕಾರುಗಳಲ್ಲಿ ಈ ದೋಷ ಕಂಡುಬಂದಿರುವ ಸಾಧ್ಯತೆ ಇದೆ. ಹೀಗಾಗಿ ಈ ಅವಧಿಯ ಎಕ್ಸ್‌ಯುವಿ 700 ಕಾರುಗಳನ್ನು ತರಿಸಿ ಅವುಗಳ ವೈರಿಂಗ್‌ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು. ಆ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.

ಅದರಂತೆಯೇ 2023ರ ಫೆ. 16ರಿಂದ ಜೂನ್ 5ರವರೆಗೆ ತಯಾರಾದ 3,560 ಎಕ್ಸ್‌ಯುವಿ 400 ಕಾರುಗಳಲ್ಲಿ ಬ್ರೇಕ್‌ ಪೊಟೆನ್ಶೊಮೀಟರ್‌ನಲ್ಲಿನ ಸ್ಪ್ರಿಂಗ್‌ ಸರಿಯಾಗಿ ಕಾರ್ಯನಿರ್ವಹಿಸದಿರುವ ಸಮಸ್ಯೆಯೂ ಕಂಡುಬಂದಿದೆ. 

ಈ ಎರಡೂ ಮಾದರಿಯ ಕಾರುಗಳಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಉಚಿತವಾಗಿ ತಪಾಸಣೆಗೆ ಒಳಪಡಿಸಿ, ಪರಿಹರಿಸಲಾಗುವುದು. ಕಾರುಗಳ ಮಾಲೀಕರನ್ನು ಕಂಪನಿಯೇ ಸಂಪರ್ಕಿಸಲಿದೆ ಎಂದು ಕಾರು ತಯಾರಿಕಾ ಕಂಪನಿ ಮಹಿಂದ್ರಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT