ನವದೆಹಲಿ: 2020ರ ಆಗಸ್ಟ್ಗೆ ಹೋಲಿಸಿದರೆ 2021ರ ಆಗಸ್ಟ್ನಲ್ಲಿ ವಾಹನಗಳ ತಯಾರಿಕೆಯು ಸೆಮಿಕಂಡಕ್ಟರ್ ಕೊರತೆಯಿಂದಾಗಿ ಶೇಕಡ 8ರಷ್ಟು ಇಳಿಕೆ ಆಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬುಧವಾರ ತಿಳಿಸಿದೆ.

ಕಳೆದ ವರ್ಷದ ಆಗಸ್ಟ್ನಲ್ಲಿ 1.23 ಲಕ್ಷ ವಾಹನಗಳು ತಯಾರಾಗಿದ್ದವು. ಈ ವರ್ಷದ ಆಗಸ್ಟ್ನಲ್ಲಿ 1.13 ಲಕ್ಷ ವಾಹನಗಳು ತಯಾರಾಗಿವೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಜುಲೈನಲ್ಲಿ ಕಂಪನಿಯ ಒಟ್ಟಾರೆ ತಯಾರಿಕೆಯು ಶೇ 58ರಷ್ಟು ಹೆಚ್ಚಾಗಿತ್ತು.

ಹೊಸ ವಾಹನಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಡ್ರೈವರ್ ಅಸಿಸ್ಟ್, ನ್ಯಾವಿಗೇಷನ್ ಹಾಗೂ ಹೈಬ್ರಿಡ್ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಅಳವಡಿಕೆ ಆಗುತ್ತಿರುವುದರಿಂದ ಜಾಗತಿಕವಾಗಿ ವಾಹನ ಉದ್ಯಮದಲ್ಲಿ ಸೆಮಿಕಂಡಕ್ಟರ್ ಬಳಕೆ ಹೆಚ್ಚಾಗುತ್ತಿದೆ.

ಪ್ರಯಾಣಿಕ ವಾಹನಗಳ ತಯಾರಿಕೆಯು 1.21 ಲಕ್ಷದಿಂದ 1.11 ಲಕ್ಷಕ್ಕೆ ಇಳಿಕೆ ಆಗಿದೆ. ಕಾಂಪ್ಯಾಕ್ಟ್ ಕಾರುಗಳ ತಯಾರಿಕೆಯು 67,348ರಿಂದ 47,640ಕ್ಕೆ ಇಳಿಕೆ ಆಗಿದೆ. ಆದರೆ, ಯುಟಿಲಿಟಿ ವಾಹನಗಳ ತಯಾರಿಕೆಯು 21,737ರಿಂದ 29,965ಕ್ಕೆ ಏರಿಕೆ ಆಗಿದೆ. ಅದೇ ರೀತಿ ಲಘು ವಾಣಿಜ್ಯ ವಾಹನ ಸೂಪರ್ ಕ್ಯಾರಿ ತಯಾರಿಕೆಯು 2,388ರಿಂದ 2,569ಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.