ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಕಾಲದಲ್ಲೂ ಭರವಸೆ ಮೂಡಿಸಿದ ‘ಎಸ್‌–ಪ್ರೆಸೊ’

Last Updated 29 ಆಗಸ್ಟ್ 2019, 9:08 IST
ಅಕ್ಷರ ಗಾತ್ರ

ಮಾರುತಿ ಸುಜುಕಿ ಪರಿಕಲ್ಪನೆಯಲ್ಲಿ ವಿನ್ಯಾಸಗೊಂಡು 2018ರ ಆಟೊ ಎಕ್ಸ್‌ಪೋನಲ್ಲಿ ಪ್ರದರ್ಶನಗೊಂಡ ಎಸ್‌–ಪ್ರೆಸೊ ಕಾರು ಬಿಡುಗಡೆಗೆ ಸಿದ್ಧಗೊಂಡಿದೆ. ಸೆ. 30ಕ್ಕೆ ಬಿಡುಗಡೆಯಾಗಲಿರುವ ಈ ಕಾರು, ಸಂಕಷ್ಟ ಕಾಲದಲ್ಲೂ ಹಲವು ಭರವಸೆಗಳನ್ನು ಮೂಡಿಸಿದೆ.

ಸಣ್ಣ ಕಾರುಗಳ ಮಾದರಿಗೆ ಸೇರುವ ಎಸ್‌- ಪ್ರೆಸೊ ಕಾರು ಎಸ್‌ಯುವಿ ರೂಪ ಹೊಂದಿದೆ. ಹೀಗಾಗಿ ರೂಪದಲ್ಲಿ ಇದು ಗಮನ ಸೆಳೆದಿದೆ. ರಿನೊ ಕ್ವಿಡ್‌ ಹಾಗೂ ಡಟ್ಸನ್‌ ರೆಡಿ ಗೊ ಮಾದರಿಯ ಕಾರುಗಳಿಗೆ ಪೈಪೋಟಿ ನೀಡಬಹುದಾದ ಈ ಕಾರು, ಹ್ಯಾಚ್‌ಬ್ಯಾಕ್‌ ವಿನ್ಯಾಸದಲ್ಲಿನ ಎಸ್‌ಯುವಿ ಎಂದರೆ ತಪ್ಪಾಗದು. ಹೊಸ ಮಾದರಿಯ ಕಾರು ತನ್ನದೇ ಆರಂಭಿಕ ಮಾದರಿಯಾದ ಆಲ್ಟೊ ಕೆ–10ಗೆ ಸಮಾನವಾದ ಕಾರು ಇದಾಗಿದ್ದು, ಆದರೆ ಬೆಲೆ ತುಸು ಅಧಿಕ ಇರುವ ಸಾಧ್ಯತೆಗಳಿವೆ. ಇದರ ಅಂದಾಜು ₹3.5ಲಕ್ಷದ ಮೆಲ್ಪಟ್ಟು ಇರಲಿದೆ.

ಸದೃಢದೇಹ, ಟಾಲ್‌ಬಾಯ್‌ ಮಾದರಿ ಇದರದ್ದು. ನಡು ಮಧ್ಯದಲ್ಲಿ ಓಡೊಮೀಟರ್ ಹೊಂದಿದೆ. ಸ್ಪೋರ್ಟ್ಸ್‌ ಕಾರು ಮಾದರಿಯ ಒಳಾಂಗಣ ವಿನ್ಯಾಸ ಹೊಂದಿದೆ. ಟಾಪ್‌ ಮಾದರಿಯಲ್ಲಿ ಟಚ್‌ ಸ್ಕ್ರೀನ್‌ ಸೌಲಭ್ಯವಿದೆ. ಇದರಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೊ ತಂತ್ರಾಂಶ ಲಭ್ಯ.

1 ಲೀ. ಕೆ–ಸರಣಿ ಪೆಟ್ರೊಲ ಎಂಜಿನ್‌ ಎಸ್‌ ಪ್ರೆಸೋನಲ್ಲಿದ್ದು, ಇದು ಬಿಎಸ್‌6 ಮಾದರಿಯದ್ದಾಗಿದೆ. ಆಲ್ಟೊ, ಸೆಲೆರಿಯೊ ಹಾಗೂ ವ್ಯಾಗನ್ ಆರ್ ನಲ್ಲಿ ಇದೇ ಮಾದರಿಯ ಎಂಜಿನ್‌ ಇದ್ದರೂ, ಎಸ್‌ ಪ್ರೆಸೊನದ್ದು ಸುಧಾರಿತ ಮಾದರಿಯಾಗಿದೆ. 67 ಅಶ್ವಶಕ್ತಿ ಹಾಗೂ 90 ಎನ್‌ಎಂ ಟಾರ್ಕ್‌ ಉತ್ಪಾದಿಸುವ ಎಂಜಿನ್ ಇದಾಗಿದೆ. 5 ಸ್ಪೀಡ್ ಮ್ಯಾನುಯಲ್‌ ಹಾಗೂ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಇದರ ಇಂಧನ ಕ್ಷಮತೆ ಪ್ರತಿ ಲೀಟರ್‌ಗೆ 24ರಿಂದ 25 ಕಿ.ಮೀ. ಹೊಂದಿದೆ. ಇದು ಆಲ್ಟೊ ಕೆ–10ಗೆ ಸರಿಸಮಾನದ್ದಾಗಿದೆ.

ಆಟೊಮೊಬೈಲ್‌ ಕ್ಷೇತ್ರಕ್ಕೆ ಸಂಬಂಧಿಸಿದಇನ್ನಷ್ಟು ಸುದ್ದಿಗಳು ಇಲ್ಲಿವೆ.
*Automobile
*Automobile Industry

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT