ಶುಕ್ರವಾರ, ಮೇ 20, 2022
25 °C

ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಪಿಟಿಐ Updated:

ಅಕ್ಷರ ಗಾತ್ರ : | |

 Credit: AFP File Photo

ನವದೆಹಲಿ: ಇಟಲಿಯ ಸೂಪರ್ ಲಕ್ಷುರಿ ಕಾರ್ ತಯಾರಿಕ ಸಂಸ್ಥೆ ಲ್ಯಾಂಬೋರ್ಗಿನಿ, ಕಳೆದ ವರ್ಷ ದೇಶದಲ್ಲಿ 69 ಕಾರು ಮಾರಾಟ ಮಾಡಿದೆ.

ಜತೆಗೆ ಕಂಪನಿ ಮಾರಾಟದಲ್ಲಿ ದೇಶದಲ್ಲಿ ಶೇ 86ರಷ್ಟು ಪ್ರಗತಿ ದಾಖಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏಷ್ಯಾ ಫೆಸಿಫಿಕ್ ಮಾರುಕಟ್ಟೆಯಲ್ಲಿನ ಮಾರಾಟ ಪ್ರಗತಿಯನ್ನು ಗಮನಿಸಿದರೆ, 2021ರಲ್ಲಿ ಚೀನಾದಲ್ಲಿ 935, ದಕ್ಷಿಣ ಕೊರಿಯಾದಲ್ಲಿ 354 ಮತ್ತು ಥಾಯ್ಲೆಂಡ್‌ನಲ್ಲಿ 75 ಲ್ಯಾಂಬೋರ್ಗಿನಿ ಸೂಪರ್ ಕಾರು ಮಾರಾಟವಾಗಿದೆ.

ದೇಶದಲ್ಲಿ ಲ್ಯಾಂಬೋರ್ಗಿನಿ ಕಾರುಗಳ ಬೆಲೆ ₹3.16 ಕೋಟಿಯಿಂದ ಆರಂಭವಾಗುತ್ತದೆ.

2020ರಲ್ಲಿ ಒಟ್ಟು 37 ಕಾರು ಮಾರಾಟವಾಗಿದ್ದರೆ, 2021ರಲ್ಲಿ 69 ಕಾರು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಹೀಗಾಗಿ ಮುಂದಿನ ವರ್ಷ ಮತ್ತಷ್ಟು ಮಾರುಕಟ್ಟೆ ವಿಸ್ತರಣೆಯ ಗುರಿಯನ್ನು ಕಂಪನಿ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು