ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮಾರುಕಟ್ಟೆಯಲ್ಲಿರುವ ₹10 ಲಕ್ಷ ಒಳಗಿನ ಐದು ಟಾಪ್ ಅಟೊಮ್ಯಾಟಿಕ್ ಕಾರುಗಳು

ಅಕ್ಷರ ಗಾತ್ರ

ಬೆಂಗಳೂರು: ದೇಶದ ಅಟೊಮೊಬೈಲ್ ಮಾರುಕಟ್ಟೆಯಲ್ಲಿ ಈಗ ಸ್ವಯಂಚಾಲಿತ ಗೇರ್ ವ್ಯವಸ್ಥೆ ಹೊಂದಿರುವ ಕಾರುಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಸುಲಲಿತ ಚಾಲನಾ ಅನುಭವ ಮತ್ತು ಹೆಚ್ಚಿನ ಮೈಲೇಜ್ ಕೂಡ ನೀಡುವ ಈ ಕಾರುಗಳು ಬೇಡಿಕೆ ಪಡೆದುಕೊಂಡಿದ್ದು, ನಗರಗಳ ವಿಸ್ತರಣೆ, ಪ್ರಯಾಣದ ಅಗತ್ಯತೆ ಕೂಡ ಇದಕ್ಕೆ ಕಾರಣವಾಗಿದೆ.

ದೇಶದಲ್ಲಿ ಪ್ರಸ್ತುತ ₹10 ಲಕ್ಷದ ಒಳಗಿನ ದರ ಹೊಂದಿರುವ ಐದು ಟಾಪ್ ಅಟೊಮ್ಯಾಟಿಕ್ ಕಾರುಗಳ ವಿವರ ಇಲ್ಲಿದೆ.

1. ಫೋಕ್ಸ್‌ವ್ಯಾಗನ್ ಪೋಲೊ 1.0 ಟಿಎಸ್ಐ ಎಟಿ

ಫೋಕ್ಸ್‌ವ್ಯಾಗನ್‌ನ ಜನಪ್ರಿಯ ಮಾದರಿ ಪೋಲೊ, ಹೆಚ್ಚು ಇಂಧನ ಉಳಿತಾಯಕ್ಕೆ ಸಹಕಾರಿಯಾಗುತ್ತದೆ. ದೇಶದಲ್ಲಿ ಫೋಕ್ಸ್‌ವ್ಯಾಗನ್ ಬೆಲೆ ಶ್ರೇಣಿ (ಪೋಲೊ ಎಟಿ): ₹9.59 ಲಕ್ಷ - ₹10 ಲಕ್ಷ (ಎಕ್ಸ್ ಶೋ ರೂಂ)

2. ಮಾರುತಿ ಸುಜುಕಿ ಬಲೆನೊ / ಟೊಯೋಟ ಗ್ಲ್ಯಾನ್ಜಾ

ದೇಶದಲ್ಲಿ ಮಾರುತಿ ಬಲೆನೊ ಮತ್ತು ಟೊಯೋಟ ಗ್ಲ್ಯಾನ್ಜಾ ಮಾದರಿಗಳು ಕೂಡ ₹10 ಲಕ್ಷ ಬೆಲೆಯ ಒಳಗಡೆ ಲಭ್ಯವಿದೆ.

ಬೆಲೆ ಶ್ರೇಣಿ: ಬಲೆನೊ - ₹7.91 ಲಕ್ಷದಿಂದ ₹9.30 ಲಕ್ಷ / ಗ್ಲ್ಯಾನ್ಜಾ - ₹8.54 ಲಕ್ಷದಿಂದ ₹9.30 ಲಕ್ಷ (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ)

3. ಹೋಂಡಾ ಅಮೇಝ್ ಸಿವಿಟಿ

ಹೋಂಡಾ ಅಮೇಜ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಲಭ್ಯವಿದೆ. ಸೆಡಾನ್ ಮಾದರಿ ಇದಾಗಿದ್ದು, ದೇಶದಲ್ಲಿ ಬೆಲೆ ಶ್ರೇಣಿ: ₹7.93 ಲಕ್ಷ - ₹10 ಲಕ್ಷ (ಎಕ್ಸ್ ಶೋ ರೂಂ) ಇದೆ.

4. ನಿಸಾನ್ ಮಾಗ್ನೈಟ್/ ರಿನಾಲ್ಟ್ ಕಿಗರ್

ಇವು ಎರಡು ಮಾದರಿಗಳು ಕೂಡ ಕಾಂಪಾಕ್ಟ್ ಎಸ್‌ಯುವಿ ಆಗಿದ್ದು, ಹೆಚ್ಚಿನ ಬೇಡಿಕೆ ಹೊಂದಿರುವ ಮಾದರಿಗಳಾಗಿವೆ.

ಬೆಲೆ ಶ್ರೇಣಿ (ಮ್ಯಾಗ್ನೈಟ್ ಸಿವಿಟಿ): ₹8.39 ಲಕ್ಷ - ₹9.89 ಲಕ್ಷ. (ಎಕ್ಸ್ ಶೋ ರೂಂ)

ಬೆಲೆ ಶ್ರೇಣಿ (ಕಿಗರ್ ಸಿವಿಟಿ): ₹8.60 ಲಕ್ಷ - ₹9.75 ಲಕ್ಷ (ಎಕ್ಸ್ ಶೋ ರೂಂ)

5. ಹುಂಡೈ ವೆನ್ಯು 1.0 ಟರ್ಬೊ ಡಿಸಿಟಿ

ಹುಂಡೈನ ಆಕರ್ಷಕ ಕಾಂಪಾಕ್ಟ್ ಎಸ್‌ಯುವಿ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ದೇಶದಲ್ಲಿ ಇದರ ಬೆಲೆ: ₹9.78 ಲಕ್ಷ. (ಎಕ್ಸ್ ಶೋ ರೂಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT