ನಡೆದಾಡಲು ಇ-ಸ್ಕೂಟರ್: ಟೊಯೊಟಾ ಸಿ+ ವಾಕ್ ಬಿಡುಗಡೆ

ಬೆಂಗಳೂರು: ಕಾರು ತಯಾರಿಕಾ ಕಂಪನಿ ಟೊಯೊಟಾ, ಮೂರು ಚಕ್ರಗಳ, ಬ್ಯಾಟರಿ ಚಾಲಿತ ಪುಟ್ಟ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.
ಸಿ+ವಾಕ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್, ಪಾದಾಚಾರಿ ಮಾರ್ಗಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಅಲ್ಲದೆ, ಕಡಿಮೆ ಸ್ಥಳವನ್ನು ಇದು ಆಕ್ರಮಿಸಿಕೊಳ್ಳುವ ಜತೆಗೆ, ಸಾಮಾನ್ಯರು ನಡೆದಾಡುವ ಗರಿಷ್ಠ ವೇಗದಷ್ಟೇ ವೇಗ ಹೊಂದಿದ್ದು, ಜನರಿಗೆ ಮತ್ತು ಇತರ ವಸ್ತುಗಳಿಗೆ ಡಿಕ್ಕಿಯಾಗುವ ಸಾಧ್ಯತೆ ಇರುವುದಿಲ್ಲ ಎಂದು ಕಂಪನಿ ಹೇಳಿದೆ.
ಮುಂಭಾಗದಲ್ಲಿ ಒಂದು ಮತ್ತು ಹಿಂಭಾಗದಲ್ಲಿ ಎರಡು ಪುಟ್ಟ ಚಕ್ರಗಳು ಇದ್ದು, ಕ್ಯಾಂಪಸ್‌ಗಳಲ್ಲಿ, ಬಡಾವಣೆಯಲ್ಲಿ ಮತ್ತು ನಡೆದಾಡಲು ತೊಂದರೆ ಇರುವವರು ಬಳಸಲು ಪ್ರಶಸ್ತವಾಗಿದೆ ಎಂದು ಟೊಯೊಟಾ ತಿಳಿಸಿದೆ.
2.5 ಗಂಟೆಗಳಲ್ಲಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲಿದೆ. ಬಳಿಕ 14 ಕಿ.ಮೀ ಚಲಾಯಿಸಬಹುದಾಗಿದೆ.
ಟಾಟಾ ಪಂಚ್ ಅನಾವರಣ: ₹21 ಸಾವಿರಕ್ಕೆ ಬುಕಿಂಗ್ ಆರಂಭ
ಜಪಾನ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದ್ದು, ಅಂದಾಜು ₹2.27 ಲಕ್ಷ ಮತ್ತು ₹2.36 ಲಕ್ಷ ದರ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.