ಬೆಂಗಳೂರು: ಆಟೋಮೊಬೈಲ್ ಲೋಕದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿ ಇದೀಗ ‘ಎನ್ಟಾರ್ಕ್ 150 ಹೈಪರ್ ಸ್ಪೋರ್ಟ್ಸ್’ ಸ್ಕೂಟರ್ ಅನ್ನು ತಯಾರಿಸಿದೆ.

ನವೀನ ತಂತ್ರಜ್ಞಾನ, ಪ್ರಯಾಣ ಸ್ನೇಹಿ ಮತ್ತು ಅತ್ಯಾಕರ್ಷಕ ವಿನ್ಯಾಸದಿಂದ ಕೂಡಿರುವ ನೂತನ ‘ಎನ್ಟಾರ್ಕ್ 150' ಸ್ಕೂಟರ್ ಸ್ಪೋರ್ಟ್ಸ್ ಬೈಕ್ನ ಅನುಭವವನ್ನು ನೀಡುತ್ತದೆ.

ವಿದ್ಯಾರ್ಥಿಗಳು ಮತ್ತು ಯುವಕರನ್ನು ಗಮನದಲ್ಲಿಟ್ಟುಕೊಂಡು ಟಿವಿಎಸ್ ಹೊಸ ಸ್ಕೂಟರ್ ಅನ್ನು ನಿರ್ಮಿಸಿದ್ದು, ಅದಕ್ಕಾಗಿ ಹೊಸ ಹೊಸ ವ್ಯವಸ್ಥೆಗಳನ್ನು ಪರಿಚಯಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡಲಾಗಿದೆ.

‘ಸ್ಟ್ಯಾಂಡರ್ಡ್ ಎನ್ಟಾರ್ಕ್ 150’ ಹಾಗೂ ‘ಎನ್ಟಾರ್ಕ್ 150 ಟಿಎಫ್ಟಿ’ ಎಂಬ ಎರಡು ರೂಪಾಂತರಗಳನ್ನು ಹೊಂದಿರುವ (ವೇರಿಯೆಂಟ್) ಈ ಸ್ಕೂಟರ್ ಬೆಲೆಯೂ ಅತೀ ಕಡಿಮೆ ಇದ್ದು, ₹1.19 ಲಕ್ಷದಿಂದ ₹1.29 ಲಕ್ಷ (ಎಕ್ಸ್ ಶೋರೂಂ - ಪ್ಯಾನ್ ಇಂಡಿಯಾ) ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಸ್ಟೆಲ್ತ್ ಸಿಲ್ವರ್, ರೇಸಿಂಗ್ ರೆಡ್, ಟರ್ಬೊ ಬ್ಲೂ ಮತ್ತು ನೈಟ್ರೋ ಗ್ರೀನ್ ಎಂಬ ಬಣ್ಣಗಳಲ್ಲಿ ‘ಎನ್ಟಾರ್ಕ್ 150’ ಸಿಗಲಿದೆ. ಈಗಾಗಲೇ ಬುಕ್ಕಿಂಗ್ ಕೂಡ ಪ್ರಾರಂಭವಾಗಿದ್ದು, ಅತಿ ಶೀಘ್ರದಲ್ಲೇ ಗ್ರಾಹಕರಿಗೆ ಕೈಗೆ ಸಿಗಲಿದೆ. ‘ಟಿವಿಎಸ್ ಎನ್ಟಾರ್ಕ್ 125'ನ ಹೋಲಿಕೆಯಿರುವ ಈ ಸ್ಕೂಟರ್ ಅದಕ್ಕಿಂತ ಹಲವು ಸುಧಾರಿತ ಮತ್ತು ನೂತನ ತಂತ್ರಜ್ಞಾನಗಳನ್ನು ಹೊಂದಿದೆ.

ವಿಶೇಷತೆಗಳು

‘ಸ್ಟ್ಯಾಂಡರ್ಡ್ ಎನ್ಟಾರ್ಕ್ 150’ನ ಹೊರನೋಟದ ವಿಷಯಕ್ಕೆ ಬಂದರೆ ಇದು 1861 ಮಿ.ಮೀ ಉದ್ದ, 740 ಮಿ.ಮೀ ಅಗಲ ಹಾಗೂ 1120 ಮಿ.ಮೀ ಎತ್ತರವಿದೆ. ಜೊತೆಗೆ 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1285 ಮಿ.ಮೀ ವೀಲ್ಬೇಸ್ನ್ನು ಒಳಗೊಂಡಿದೆ. ಸೀಟ್ ಎತ್ತರ 770 ಮಿ.ಮೀ ಇದೆ.

ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳು, ಎಲ್ಇಡಿ ಡಿಆರ್ಎಲ್ಗಳು, ಎಲ್ಇಡಿ ಟರ್ನ್ ಇಂಡಿಕೇಟರ್ಗಳು, ಸ್ಪ್ಲಿಟ್ ಗ್ರಾಬ್ ರೈಲ್ಗಳು, ಎಲ್ಇಡಿ ಟೈಲ್ ಲ್ಯಾಂಪ್, ಹಝರ್ಡ್ ಲೈಟ್ಗಳು ಹಾಗೂ ಅಗ್ರೆಸಿವ್ ಬಾಡಿ ಪ್ಯಾನೆಲ್ಗಳನ್ನು ಹೊಂದಿದೆ.

ಫುಲ್ ಟಿಎಫ್ಟಿ ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಟ್ರೀಟ್ ಮತ್ತು ರೇಸ್ ಎಂಬ ಎರಡು ರೈಡಿಂಗ್ ಮೋಡ್ಗಳನ್ನೂ ನೀಡಲಾಗಿದ್ದು, ಇದು ಸವಾರರಿಗೆ ಅನುಕೂಲಕರವಾಗಲಿದೆ.

ಸಾಮರ್ಥ್ಯ

ನೂತನ ಸ್ಕೂಟರ್ ಬಲಿಷ್ಠವಾದ ಪವರ್ಟ್ರೇನ್ನ್ನು ಒಳಗೊಂಡಿದೆ. 149.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಇದೆ. 7,000 ಆರ್ಪಿಎಂನಲ್ಲಿ 13.2 ಪಿಎಸ್ ಎಚ್ಪಿ ಮತ್ತು 5,500 ಆರ್ಪಿಎಂನಲ್ಲಿ 14.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಅನ್ನು ಟಿವಿಎಸ್ ನೀಡಿದೆ.

ಗಂಟೆಗೆ 104 ಕಿ.ಮೀ ವೇಗ ನೀಡಬಲ್ಲದು. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 60 ಕಿ.ಮೀ ವೇಗಕ್ಕೆ ತಲುಪುವ ಸಾಮರ್ಥ್ಯ ಹೊಂದಿದೆ. 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ನ್ನು ತನ್ನದಾಗಿಸಿಕೊಂಡಿರುವ ಈ ಸ್ಕೂಟರ್ ಸವಾರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ.

ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ಗಳಿದ್ದು, ಸಿಂಗಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ಡ್ರಮ್ ಬ್ರೇಕ್ಗಳನ್ನು ನೀಡಲಾಗಿದೆ. ಜೊತೆಗೆ 12-ಇಂಚಿನ ಅಲಾಯ್ಡ್ ವೀಲ್ಗಳನ್ನು ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.