ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ಫೋಕ್ಸ್‌ವ್ಯಾಗನ್‌ ಕಾರು ಮಾರಾಟದಲ್ಲಿ ಶೇ 85.48ರಷ್ಟು ಏರಿಕೆ!

2022 ರಲ್ಲಿ ಬರೋಬ್ಬರಿ  1,01,270 ಕಾರುಗಳ ಮಾರಾಟ
Last Updated 4 ಜನವರಿ 2023, 9:16 IST
ಅಕ್ಷರ ಗಾತ್ರ

ಬೆಂಗಳೂರು: ಜರ್ಮನಿ ಮೂಲದ ಆಟೊಮೊಬೈಲ್‌ ತಯಾರಕ ಫೋಕ್ಸ್‌ವ್ಯಾಗನ್‌ ಸಮೂಹ ಸಂಸ್ಥೆಯು, 2022ರಲ್ಲಿ ಭಾರತದಲ್ಲಿ ಬರೋಬ್ಬರಿ 1,01,270 ಕಾರುಗಳನ್ನು ಮಾರಾಟ ಮಾಡಿದ್ದಾಗಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೇಳಿದೆ.

2021ರಲ್ಲಿ 54,598 ಕಾರುಗಳನ್ನು ಮಾರಾಟ ಮಾಡಿತ್ತು. ಅಂದರೆ 2022ರಲ್ಲಿ ಕಾರುಗಳ ಮಾರಾಟ ಶೇ 85.48 ರಷ್ಟು ಹೆಚ್ಚಳವಾಗಿದೆ ಎಂದರ್ಥ.

ಭಾರತದಲ್ಲಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು, ಸ್ಕೋಡಾ, ಫೋಕ್ಸ್‌ವ್ಯಾಗನ್‌, ಆಡಿ, ಪೋರ್ಶೆ ಹಾಗೂ ಲ್ಯಾಂಬೊರ್ಗಿನಿ ಕಾರುಗಳನ್ನು ಮಾರಾಟ ಮಾಡುತ್ತದೆ.

‘ಜಾಗತಿಕವಾಗಿ ಚಿಪ್‌ ಅಭಾವದಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದ್ದರೂ, ಅವುಗಳ ಪ್ರಭಾವ ಕಡಿಮೆ ಮಾಡಲು ನಾವು ವೇಗವಾಗಿ ಹಾಗೂ ಯಶಸ್ವಿಯಾಗಿ ಮರು-ಮಾಪನಾಂಕ ನಿರ್ಣಯಿಸಿದೆವು‘ ಎಂದು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ಪಿಯೂಷ್‌ ಅರೋರಾ ಹೇಳಿದ್ದಾರೆ.

ಜಾಗತಿಕವಾಗಿ ತನ್ನ ಉದ್ಯಮ ವಿಸ್ತರಣೆ ಮಾಡಲು ಭಾರತ ಅತಿ ದೊಡ್ಡ ಮಾರುಕಟ್ಟೆಯಲ್ಲಿ ಒಂದಾಗಿದೆ. ಜತೆಗೆ ಭಾರತವು ಸಮೂಹದ ಕಾರು ಉತ್ಪಾದನೆಯ ಪ್ರಮುಖ ತಾಣವೂ ಆಗಿದೆ.‌ ಹೀಗಾಗಿ ಭಾರತದ ಮಾರುಕಟ್ಟೆಗೆ ಹೆಚ್ಚಿನ ಗಮನ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT