ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2030ರಿಂದ ಕೇವಲ ಎಲೆಕ್ಟ್ರಿಕ್‌ ಕಾರ್ ಮಾತ್ರ ತಯಾರಿಕೆ: ವೋಲ್ವೊ

Last Updated 2 ಮಾರ್ಚ್ 2021, 11:01 IST
ಅಕ್ಷರ ಗಾತ್ರ

ಸ್ಟಾಕ್ಹೋಮ್: 2030ರಿಂದ ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರವೇ ತಯಾರಿಸುವುದಾಗಿ ವೋಲ್ವೊ ಕಂಪನಿ ಹೇಳಿದೆ.

ಹೈಬ್ರಿಡ್‌ ಅನ್ನೂ ಒಳಗೊಂಡು ಆಂತರಿಕ ದಹನಕಾರಿ (ಇಂಟರ್ನಲ್‌ ಕಂಬಸ್ಚನ್) ಎಂಜಿನ್‌ಗಳನ್ನು ಹೊಂದಿರುವ ಎಲ್ಲಾ ಕಾರುಗಳ ತಯಾರಿಕೆಯನ್ನು ಹಂತಹಂತವಾಗಿ ನಿಲ್ಲಿಸುವುದಾಗಿ ತಿಳಿಸಿದೆ.

‘ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ಕಾರುಗಳಿಗೆ ದೀರ್ಘಾವಧಿಯ ಭವಿಷ್ಯವಿಲ್ಲ’ ಎಂದು ವೋಲ್ವೊ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಹೆನ್ರಿಕ್‌ ಗ್ರೀನ್‌ ತಿಳಿಸಿದ್ದಾರೆ.

‘ಕೇವಲ ಎಲೆಕ್ಟ್ರಿಕ್‌ ಕಾರ್‌ ತಯಾರಿಕಾ ಕಂಪನಿಯಾಗಲು ನಾವು ಬದ್ಧರಾಗಿದ್ದೇವೆ. ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ತಲುಪಲು ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪರಿಹಾರ ಕಂಡುಕೊಳ್ಳಲು ಇದು ಅವಕಾಶ ಕಲ್ಪಿಸಲಿದೆ’ ಎಂದೂ ಅವರು ಹೇಳಿದ್ದಾರೆ.

ಎಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಆನ್‌ಲೈನ್‌ನಲ್ಲಿ ಮಾತ್ರವೇ ಮಾರಾಟ ಮಾಡಲಾಗುವುದು ಎಂದು ಹೇಳಿದೆ. ಕಳೆದ ವರ್ಷ ಕಾಂಪ್ಯಾಕ್ಟ್‌ ಎಸ್‌ಯುವಿ ಎಕ್ಸ್‌ಸಿ 40 ರಿಚಾರ್ಜ್‌ ಬಿಡುಗಡೆ ಮಾಡಿದ್ದ ಕಂಪನಿಯು ಈ ವರ್ಷ ಸಂಪೂರ್ಣ ವಿದ್ಯುತ್‌ ಚಾಲಿತ ಎರಡನೇ ಕಾರನ್ನು ಅನಾವರಣ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT