ಜಾಕೆಟ್ ಈಗ ಕೇವಲ ಚಳಿಗಾಲಕ್ಕೆ ಸೀಮಿತವಲ್ಲ. ತರಹೇವಾರಿ ಜಾಕೆಟ್ಗಳು ವರ್ಷ ಪೂರ್ತಿ ಫ್ಯಾಷನ್ ಲೋಕವನ್ನು ಆಳುತ್ತಿವೆ. ಕಾಲೇಜು ವಿದ್ಯಾರ್ಥಿನಿಯರು, ಆಫೀಸ್ಗೆ ಹೋಗುವ ಮಹಿಳೆಯರಿಗೆ ಇದೇ ಫೇವರೇಟ್. ಡಿಸೈನರ್ ಸೇರಿದಂತೆ ಸಿಂಪಲ್ ಜಾಕೆಟ್ಗಳು ಗಮನ ಸೆಳೆದಿವೆ. ಇದು ಡ್ರೆಸ್ಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಂತಹದ್ದೇ ಸಿಂಪಲ್ ಲುಕ್ ಇದ್ರೂ ಜಾಕೆಟ್ ಹಾಕೊಂಡ್ರೆ ನಿಮ್ಮ ಲುಕ್ನ್ನೇ ಬದಲಾಯಿಸಲಿದೆ. ಆದರೆ ಯಾವ ಜಾಕೆಟ್ಗಳನ್ನ ಯಾವ ಡ್ರೆಸ್ಗೆ ಹಾಕೊಂಡ್ರೆ ಚೆನ್ನಾ, ಹೇಗೆ ಸ್ಟೈಲ್ ಮಾಡಿದ್ರೆ ನಿಮ್ಮ ಲುಕ್ ಅನ್ನು ಬದಲಿಸಬಹುದು ಎನ್ನುವುದನ್ನು ನೋಡುವುದಾದರೆ

ಡೆನಿಮ್ ಜಾಕೆಟ್: ಡೆನಿಮ್ ಜಾಕೆಟ್ಗಳು ಎಂದಿಗೂ ಔಟ್ ಆಫ್ ಫ್ಯಾಷನ್ ಆಗುವುದಿಲ್ಲ. ಇದು ಎಲ್ಲಾ ಕಾಲಕ್ಕೂ ಸೂಕ್ತವಾದ ಜಾಕೆಟ್. ಲೈಟ್, ಡಾರ್ಕ್, ಬ್ಲ್ಯಾಕ್ ಡೆನಿಮ್ ಬಣ್ಣಗಳು ಹೆಚ್ಚು ಟ್ರೆಂಡ್ ಆಗಿವೆ. ಓವರ್ಸೈಜ್ಡ್, ಕ್ರಾಪ್ಡ್, ಫಿಟೆಡ್ ಜಾಕೆಟ್ಗಳು ನಿಮ್ಮ ಡ್ರೆಸ್ಗೆ ಹೊಸ ಮೆರುಗು ನೀಡುತ್ತವೆ. ಇದರಲ್ಲಿ ರಿಪ್ಡ್, ಪ್ಯಾಚ್ ವರ್ಕ್, ಎಂಬ್ರಾಯ್ಡರಿ ಡಿಸೈನ್ಗಳು ಕಾಲೇಜು ಹುಡುಗಿಯರ ಫೇವರೇಟ್. ಇವು ಸಿಂಪಲ್ ಟೀ-ಶರ್ಟ್ ಜೀನ್ಸ್ ಧರಿಸಿ ಡೆನಿಮ್ ಹಾಕಿಕೊಂಡರೆ ನಿಮ್ಮ ಲುಕ್ ಚೇಂಚ್ ಆಗುತ್ತೆ. ಫ್ಲೋರಲ್ ಡ್ರೆಸ್ ಮೇಲೆ ಈ ಜಾಕೆಟ್ ಹಾಕಿದರೆ ಹೊಸ ಸ್ಟೈಲ್ ಸ್ಟೇಟ್ಮೆಂಟ್ ಸೃಷ್ಟಿಯಾಗುತ್ತದೆ. ಸೀರೆ ಜತೆನೂ ಈ ಜಾಕೆಟ್ಗಳನ್ನು ಧರಿಸಬಹುದು. ಇದು ಇಂಡೋ-ವೆಸ್ಟರ್ನ್ ಫ್ಯಾಷನ್ ಲುಕ್ ನೀಡುತ್ತದೆ.

ಲಾಂಗ್ ಜಾಕೆಟ್: ಇದು ಸಾಂಪ್ರದಾಯಿಕ ಮತ್ತು ಮಾರ್ಡನ್ ಡ್ರೆಸ್ಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಕಾಟನ್, ಸಿಲ್ಕ್, ವೆಲ್ವೆಟ್, ಜಾರ್ಜೆಟ್ ಫ್ಯಾಬ್ರಿಕ್ಗಳಲ್ಲಿ ಹೆಚ್ಚು ಟ್ರೆಂಡ್ ಆಗಿವೆ. ಸ್ಟ್ರೈಟ್ ಕಟ್ ಅಥವಾ ಫ್ಲೋಯಿಂಗ್ ಡಿಸೈನ್ ಸೇರಿದಂತೆ ಹೆವಿ ಎಂಬ್ರಾಯ್ಡರಿ ಜಾಕೆಟ್ಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಮದುವೆ ಸಮಾರಂಭಗಳು, ಹಬ್ಬ-ಹರಿದಿನಗಳು ಸೇರಿದಂತೆ ಆಫೀಸ್ ಫಾರ್ಮಲ್ ಮೀಟಿಂಗ್ಗಳಿಗೆ ಇದು ಸೂಕ್ತ. ಈ ಜಾಕೆಟ್ಗಳನ್ನು ಧರಿಸಿವುದರಿಂದ ಸ್ಲಿಮ್ ಲುಕ್ ನೀಡುತ್ತವೆ.

ಲೆದರ್ ಜಾಕೆಟ್: ಈ ಜಾಕೆಟ್ಗಳು ಬೋಲ್ಡ್ ಲುಕ್ ನೀಡುತ್ತವೆ. ಲೆದರ್ ಜಾಕೆಟ್ಗಳು ಮಾಡರ್ನ್ ಲುಕ್ಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ. ಬೈಕರ್ ಸ್ಟೈಲ್ ಹೆಚ್ಚು ಜನಪ್ರಿಯ. ಜಿಪ್ ಡೀಟೈಲಿಂಗ್, ಮೆಟಲ್ ಬಟನ್ ಸೇರಿದಂತೆ ಅನೇಕ ವಿಧಗಳಿದ್ದು, ಕಪ್ಪು ಮತ್ತು ಬ್ರೌನ್ ಬಣ್ಣಗಳ ಜಾಕೆಟ್ಗಳಿಗೆ ಹೆಚ್ಚು ಬೇಡಿಕೆ. ಸ್ಕಿನ್ನಿ ಜೀನ್ಸ್ ಜೊತೆ ಧರಿಸಬಹುದು. ಮಿಡಿ ಡ್ರೆಸ್ ಜತೆ ಧರಿಸಿದರೆ ಕ್ಲಾಸಿ ಲುಕ್ ಪಡೆಯಬಹುದು. ಜಾಕೆಟ್ ಜತೆ ಬೂಟ್ಸ್ ಮತ್ತು ಸನ್ಗ್ಲಾಸ್ ಸೇರಿಸಿದರೆ ಪರ್ಫೆಕ್ಟ್ ಮ್ಯಾಚ್.

ಕ್ರಾಪ್ಡ್ ಜಾಕೆಟ್: ಈ ಜಾಕೆಟ್ಗಳು ಸ್ಟೈಲಿಶ್ ಲುಕ್ ನೀಡುತ್ತವೆ. ಇವು ಯುವತಿಯರಿಗೆ ಹೆಚ್ಚು ಸೂಕ್ತ ಎಂದರೆ ತಪ್ಪಾಗಲಾರದು. ಕಡಿಮೆ ಉದ್ದದ ಜಾಕೆಟ್ಗಳು ಕ್ರಾಪ್ಡ್ ಜಾಕೆಟ್ಗಳು ಎನ್ನಲಾಗುತ್ತದೆ. ಹೈ-ವೆಸ್ಟ್ ಪ್ಯಾಂಟ್ಗಳಿಗೆ ಸೂಕ್ತ. ಲೆಹಂಗಾ ಹಾಗೂ ಸೀರೆ ಜೊತೆ ಧರಿಸಿದರೆ ಉಡುಪಿನ ಅಂದವನ್ನೇ ಹೆಚ್ಚಿಸುತ್ತದೆ. ಈ ಜಾಕೆಟ್ಗಳು ದೇಹದ ಆಕಾರವನ್ನು ಹೈಲೈಟ್ ಮಾಡುತ್ತವೆ.

ಪಫರ್ / ಕ್ವಿಲ್ಟೆಡ್ ಜಾಕೆಟ್: ಚಳಿಗಾಲಕ್ಕೆ ಸರಿ ಹೊಂದುವ ಜಾಕೆಟ್ ಎಂದರೆ ಪಫರ್ ಜಾಕೆಟ್. ಚಳಿಗಾಲದಲ್ಲಿ ಬೆಚ್ಚನೆಯ ವಾತಾವರಣ ಜತೆಗೆ ಸ್ಟೈಲಿಶ್ ಆಗಿಯೂ ಕಾಣುತ್ತದೆ. ಶಾರ್ಟ್ ಮತ್ತು ಲಾಂಗ್ ಎರಡು ವಿಧದಲ್ಲಿ ಇದೆ. ಲೇಟ್ ವೆಯ್ಟ್ ಆಗಿರುತ್ತದೆ. ಹುಡಿ ಮಾದರಿಯಲ್ಲೂ ಸಿಗುತ್ತೆ. ಪ್ರವಾಸ ಅಥವಾ ಔಟಿಂಗ್ ಹೋಗುವಾಗ ಧರಿಸಬಹುದು.

ಜಾಕೆಟ್ ಆಯ್ಕೆ ಮಾಡುವ ಮುನ್ನ..

* ನಿಮ್ಮ ದೇಹದ ಆಕಾರಕ್ಕೆ ತಕ್ಕಂತೆ ಜಾಕೆಟ್ಗಳನ್ನು ಆಯ್ಕೆ ಮಾಡಿಕೊಳ್ಳಿ

* ಹವಾಮಾನಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಸೂಕ್ತ

* ಬಜೆಟ್ಗೆ ಅನುಗುಣವಾಗಿ ಖರೀದಿಸಬಹುದು.

* ಜಾಕೆಟ್ ಆಯ್ಕೆ ಮಾಡುವಾಗ ಉತ್ತಮ ಗುಣಮಟ್ಟದ್ದನ್ನೇ ಆಯ್ದುಕೊಳ್ಳಿ. ದೀರ್ಘಕಾಲದವರೆಗೂ ಬಾಳಿಕೆ ಬರುತ್ತದೆ.

* ಮುಖ್ಯವಾಗಿ ಉಡುಪುಗಳಿಗೆ ಸರಿಹೊಂದುವ ಬಣ್ಣಗಳ ಆಯ್ಕೆ ಒಳಿತು

ಯಾವುದೇ ಉಡುಪು ಧರಿಸಿದರೂ ಸರಿ. ಅನುಕರಣೆಗಿಂತ ಕೆಲವು ಟಿಪ್ಸ್ಗಳ ಸಹಾಯದಿಂದ ನಿಮ್ಮದೇ ಆದ ಹೊಸ ಸ್ಟೈಲ್ ಸೃಷ್ಟಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.