ಶನಿವಾರ, 14 ಫೆಬ್ರುವರಿ 2026
×
ADVERTISEMENT
ADVERTISEMENT

ಕೂದಲಿನ ಆರೈಕೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಹೇರ್‌ ಪ್ಯಾಕ್‌ಗಳು

Published : 14 ಫೆಬ್ರುವರಿ 2026, 12:09 IST
Last Updated : 14 ಫೆಬ್ರುವರಿ 2026, 12:09 IST
ಫಾಲೋ ಮಾಡಿ
Comments
ಮುಖದ ಅಂದವಷ್ಟೇ ಅಲ್ಲದೆ ಕೇಶರಾಶಿಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಶಾಂಪೂಗಳ ಬದಲಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಕೂದಲಿನ ಆರೈಕೆ ಮಾಡಿಕೊಳ್ಳುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿವೆ.

ಮುಖದ ಅಂದವಷ್ಟೇ ಅಲ್ಲದೆ ಕೇಶರಾಶಿಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಶಾಂಪೂಗಳ ಬದಲಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಕೂದಲಿನ ಆರೈಕೆ ಮಾಡಿಕೊಳ್ಳುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿವೆ. 

ಗೆಟ್ಟಿ ಚಿತ್ರ

ADVERTISEMENT
ಬೇವಿನ ಎಲೆ ಒಂದು ಲೀಟರ್ ನೀರಿಗೆ 2 ಹಿಡಿಯಷ್ಟು ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಒಂದಿಡೀ ರಾತ್ರಿ ಅದನ್ನು ಹಾಗೆ ಇಡಬೇಕು. ಮರುದಿನ ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ 3–4 ಗಂಟೆಗಳ ಕಾಲ ಬಿಟ್ಟು ತಲೆ ತೊಳೆದುಕೊಳ್ಳವುದರಿಂದ ತಲೆಹೊಟ್ಟಿನ ಸಮಸ್ಯೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ಬೇವಿನ ಎಲೆ

ಒಂದು ಲೀಟರ್ ನೀರಿಗೆ 2 ಹಿಡಿಯಷ್ಟು ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಒಂದಿಡೀ ರಾತ್ರಿ ಅದನ್ನು ಹಾಗೆ ಇಡಬೇಕು. ಮರುದಿನ ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ 3–4 ಗಂಟೆಗಳ ಕಾಲ ಬಿಟ್ಟು ತಲೆ ತೊಳೆದುಕೊಳ್ಳವುದರಿಂದ ತಲೆಹೊಟ್ಟಿನ ಸಮಸ್ಯೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ಗೆಟ್ಟಿ ಚಿತ್ರ

ನೆಲ್ಲಿಕಾಯಿ ಹಾಗೂ ಲೋಳೆಸರನೆಲ್ಲಿಕಾಯಿ ಪುಡಿ, ಲೋಳೆಸರ, ತೆಂಗಿನೆಣ್ಣೆ ಹಾಗೂ ತುಳಸಿ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಕೂದಲ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೆ ಕೂದಲಿನ ಹೊಳಪು ಹೆಚ್ಚಲು ಸಹಕಾರಿ.

ನೆಲ್ಲಿಕಾಯಿ ಹಾಗೂ ಲೋಳೆಸರ

ನೆಲ್ಲಿಕಾಯಿ ಪುಡಿ, ಲೋಳೆಸರ, ತೆಂಗಿನೆಣ್ಣೆ ಹಾಗೂ ತುಳಸಿ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಕೂದಲ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೆ ಕೂದಲಿನ ಹೊಳಪು ಹೆಚ್ಚಲು ಸಹಕಾರಿ. 

ಗೆಟ್ಟಿ ಚಿತ್ರ

ಬೇವಿನ ಎಲೆ ಹಾಗೂ ತೆಂಗಿನ ಎಣ್ಣೆಒಂದು ಕಪ್ ತೆಂಗಿನ ಎಣ್ಣೆ ಜೊತೆ ಒಂದು ಹಿಡಿ ಬೇವಿನ ಸೊಪ್ಪು ಸೇರಿಸಿ ಕುದಿಸಿಕೊಳ್ಳಬೇಕು. ಅದಕ್ಕೆ 1ಚಮಚ ನಿಂಬೆರಸ,  ಹರಳೆಣ್ಣೆ ಸೇರಿಸಿ ಮಿಶ್ರಣ ಮಾಡ ಬೇಕು. ಈ ಮಿಶ್ರಣವನ್ನು ವಾರದಲ್ಲಿ 2 ಬಾರಿ ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಬಹುದು.

ಬೇವಿನ ಎಲೆ ಹಾಗೂ ತೆಂಗಿನ ಎಣ್ಣೆ

ಒಂದು ಕಪ್ ತೆಂಗಿನ ಎಣ್ಣೆ ಜೊತೆ ಒಂದು ಹಿಡಿ ಬೇವಿನ ಸೊಪ್ಪು ಸೇರಿಸಿ ಕುದಿಸಿಕೊಳ್ಳಬೇಕು. ಅದಕ್ಕೆ 1ಚಮಚ ನಿಂಬೆರಸ,  ಹರಳೆಣ್ಣೆ ಸೇರಿಸಿ ಮಿಶ್ರಣ ಮಾಡ ಬೇಕು. ಈ ಮಿಶ್ರಣವನ್ನು ವಾರದಲ್ಲಿ 2 ಬಾರಿ ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಬಹುದು.

ಗೆಟ್ಟಿ ಚಿತ್ರ

ಮೆಂತೆಕಾಳಿನ ಹೇರ್ ಪ್ಯಾಕ್ಒಂದು ಚಮಚ ಮೆಂತೆ ಕಾಳುಗಳನ್ನು ರಾತ್ರಿ ನೆನೆಹಾಕಿ. ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಮೊಸಲು ಸೇರಿಸಿ ಹೇರ್ ಪ್ಯಾಕ್‌ ಹಾಕಿ ಕೊಳ್ಳಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ. ಇದರಿಂದ ಕೂದಲು ಉದುರುವಿಕೆ, ತಲೆಹೊಟ್ಟು ನಿವಾರಣೆ ಮಾಡಬಹುದು.

ಮೆಂತೆಕಾಳಿನ ಹೇರ್ ಪ್ಯಾಕ್

ಒಂದು ಚಮಚ ಮೆಂತೆ ಕಾಳುಗಳನ್ನು ರಾತ್ರಿ ನೆನೆಹಾಕಿ. ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಮೊಸಲು ಸೇರಿಸಿ ಹೇರ್ ಪ್ಯಾಕ್‌ ಹಾಕಿ ಕೊಳ್ಳಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ. ಇದರಿಂದ ಕೂದಲು ಉದುರುವಿಕೆ, ತಲೆಹೊಟ್ಟು ನಿವಾರಣೆ ಮಾಡಬಹುದು.

ಗೆಟ್ಟಿ ಚಿತ್ರ

ನೆಲ್ಲಿಕಾಯಿ ಹಾಗೂ ಮೊಟ್ಟೆ ಹೇರ್ ಪ್ಯಾಕ್ಮೊಟ್ಟೆಯಲ್ಲಿ ಪ್ರೊಟೀನ್, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವಿದೆ. 2 ಚಮಚ ನೆಲ್ಲಿಕಾಯಿ ಪುಡಿ ಹಾಗೂ 2 ಒಡೆದ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿ 1ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆಗೆ ನೆರವಾಗಲಿದೆ.

ನೆಲ್ಲಿಕಾಯಿ ಹಾಗೂ ಮೊಟ್ಟೆ ಹೇರ್ ಪ್ಯಾಕ್

ಮೊಟ್ಟೆಯಲ್ಲಿ ಪ್ರೊಟೀನ್, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವಿದೆ. 2 ಚಮಚ ನೆಲ್ಲಿಕಾಯಿ ಪುಡಿ ಹಾಗೂ 2 ಒಡೆದ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿ 1ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆಗೆ ನೆರವಾಗಲಿದೆ.

ಗೆಟ್ಟಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT