ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ: ಬೆಣ್ಣೆಯಂತಹ ತ್ವಚೆಗೆ ಬೇಕು ತೇವಾಂಶ

Last Updated 24 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಚಳಿಗಾಲಕ್ಕೆ ನಿಮ್ಮ ಸೌಂದರ್ಯವರ್ಧಕಗಳ ಪೆಟ್ಟಿಗೆ ಕೊಂಚವಾದರೂ ಬದಲಾವಣೆ ಕಂಡಿದೆಯಾ? ಏಕೆಂದರೆ ಮಳೆ ಆಗಾಗ ಸುರಿಯುತ್ತಿದ್ದರೂ ಚಳಿಗಾಲ ಕಾಲಿಡಲು ಇನ್ನೇನು ಹೆಚ್ಚು ದಿನಗಳು ಬೇಕಿಲ್ಲ. ಚಳಿಯ ದಿನಗಳೆಂದರೆ ಕಡಿಮೆ ಉಷ್ಣಾಂಶ, ಕಡಿಮೆ ಉಷ್ಣಾಂಶವೆಂದರೆ ಕಡಿಮೆಯಾಗುವ ತೇವಾಂಶ. ಅಂದರೆ ಒಣಹವೆ ನಿಮ್ಮ ಬೆಣ್ಣೆಯಂತಹ ತ್ವಚೆಯನ್ನು ಒರಟಾಗಿ ಪರಿವರ್ತಿಸಿಬಿಡುತ್ತದೆ. ಕಳೆದ ಬೇಸಿಗೆ, ನಂತರ ಆರಂಭವಾದ ಮಳೆಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಲು ನೀವೇನು ಮಾಡುತ್ತಿದ್ದೀರೋ ಅಂತಹ ವಿಧಾನಗಳು ಚಳಿಗಾಲದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಹಿಂದಿನ ಕೆಲವು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ.

ಮುಖ ತೊಳೆಯುವುದು ಕಡಿಮೆ ಮಾಡಿ

ನಿಮ್ಮ ತ್ವಚೆಯ ವಿಧಕ್ಕೆ ಅನುಗುಣವಾಗಿ ಚಳಿಗಾಲದಲ್ಲಿ ಮುಖ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಅಂದರೆ ಒಣ ಚರ್ಮದವರಾದರೆ ಪದೆ ಪದೆ ಮುಖ ತೊಳೆಯುವುದು ಬೇಡ ಎನ್ನುತ್ತಾರೆ ತಜ್ಞರು. ಆದರೆ ಎಣ್ಣೆ ತ್ವಚೆಯಿದ್ದರೆ ಬೆಳಿಗ್ಗೆ ಮತ್ತು ಸಂಜೆ ಮುಖವನ್ನು ತೊಳೆಯಬಹುದು. ಜೊತೆಗೆ ಒಂದಿಷ್ಟು ಮುಂಜಾಗ್ರತೆ ವಹಿಸಿ. ಅಂದರೆ ದಿನಕ್ಕೆ ಒಂದು ಸಲ ಮಾತ್ರ ಫೇಸ್‌ವಾಷ್‌, ಕ್ಲೆನ್ಸರ್‌ ಬಳಸಬಹುದು. ಇನ್ನೊಂದು ಸಲ ತೊಳೆಯುವಾಗ ತಣ್ಣೀರು ಬಳಸಿ, ಸಾಕು.

ವಾರಕ್ಕೊಮ್ಮೆ ಮಾತ್ರ ಸ್ಕ್ರಬ್‌

ಹಾಗೆಯೇ ತ್ವಚೆಯ ಮೇಲಿನ ಸತ್ತ ಸರ್ಮದ ಪದರ ತೆಗೆಯಲು ಸ್ಕ್ರಬ್‌ ಬಳಸುವ ರೂಢಿಯಿದ್ದರೆ ವಾರಕ್ಕೆ ಒಮ್ಮೆ ಮಾತ್ರ ಬಳಸಬಹುದು; ಅದೂ ತೀಕ್ಷ್ಣವಲ್ಲದ ಸ್ಕ್ರಬ್‌. ಇಲ್ಲದಿದ್ದರೆ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತವೆ. ಹಾಗೆಯೇ ಆಲ್ಕೋಹಾಲ್‌ ರಹಿತ ಟೋನರ್‌ನಿಂದ ತ್ವಚೆಯನ್ನು ನಿಧಾನವಾಗಿ ಉಜ್ಜಿ ಶುಚಿಗೊಳಿಸಬಹುದು.

ಮೊಡವೆ ಏಳುವ ಸಮಸ್ಯೆಯಿದ್ದರೆ ಈ ಸ್ಕ್ರಬ್‌ ಹಾಗೂ ಟೋನರ್ ಬಳಕೆ ಬಿಡುವುದು ಒಳ್ಳೆಯದು. ಮುಖದ ಚರ್ಮವನ್ನು ಪದೆ ಪದೆ ಕ್ರೀಮ್‌ನಿಂದ ಉಜ್ಜಿ ಸತ್ತ ಪದರ ತೆಗೆಯುತ್ತಿದ್ದರೆ ಮೊಡವೆ ಏಳುವುದು ಹೆಚ್ಚು.

ಮಾಯಿಶ್ಚರೈಸರ್‌ ಬಳಕೆ

ಹಾಗೆಯೇ ಬೇಸಿಗೆಯಲ್ಲಿ ಫೋಮ್‌ ಮತ್ತು ಜೆಲ್‌ ಇರುವ ಕ್ಲೆನ್ಸರ್‌ ಬಳಸುತ್ತಿದ್ದರೆ, ಚಳಿಗಾಲಕ್ಕೆ ಹೆಚ್ಚು ತೇವಾಂಶಯುಕ್ತ ಕ್ರೀಮ್‌ ಅಥವಾ ಲೋಷನ್‌ ಬಳಸಿ. ಮಾಯಿಶ್ಚರೈಸರ್‌ ಹೆಚ್ಚು ತೇವಾಂಶ ಹಿಡಿದುಕೊಳ್ಳುವ ಸಾಮರ್ಥ್ಯವಿದ್ದರೆ ಸೂಕ್ತ. ಈಗಂತೂ ಹೈಲುರೋನಿಕ್‌ ಆ್ಯಸಿಡ್‌ ಇರುವ ಕ್ರೀಮ್‌ ಮಾರುಕಟ್ಟೆಯಲ್ಲಿ ಲಭ್ಯ. ಇದು ತ್ವಚೆಯ ತೇವಾಂಶವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಂಡು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.

ಚಳಿಗಾಲ ಯಾವಾಗ ಶುರುವಾಗಬಹುದು ಎಂದು ಕಾಯುತ್ತ ಕೂರುವುದಕ್ಕಿಂತ ನಿಮ್ಮ ತ್ವಚೆಯ ಮೇಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಅಭ್ಯಾಸಗಳನ್ನು ಶುರು ಮಾಡಲು ಅನುಕೂಲ. ಒಣ ಹಾಗೂ ಒಡೆದ ಚರ್ಮ ಕಾಣಿಸಿಕೊಂಡರೆ ಕೂಡಲೇ ಇಂತಹ ಆರೈಕೆಗಳನ್ನು ಶುರು ಮಾಡಿ. ಅದಕ್ಕೂ ಮುನ್ನವೇ ಮುಖ ತೊಳೆದಾಗ ತ್ವಚೆ ಬಿಗಿ ಎನಿಸಿದರೆ ಕೂಡ ವಾತಾವರಣದ ಚಳಿಯಿಂದ ಹೀಗಾಗುತ್ತಿದೆ ಎಂದು ತಿಳಿದುಕೊಳ್ಳಬಹುದು.

ಚಳಿಗಾಲದಲ್ಲೂ ಕೆಲವೊಮ್ಮೆ ಬಿಸಿಲು ಅತಿಯಾಗಬಹುದು. ಸಾಮಾನ್ಯವಾಗಿ ಇದು ಅಕ್ಟೋಬರ್‌ನಲ್ಲಿ ಕೆಲವು ವಾರಗಳ ಕಾಲವಿರುತ್ತದೆ. ಆಗ ನಿಮ್ಮ ಅಭ್ಯಾಸವನ್ನು ಬೇಸಿಗೆಯ ತ್ವಚೆ ಆರೈಕೆಗೆ ಬದಲಾಯಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT