ಹಬ್ಬಗಳೆಂದರೆ ಹಾಗೆ... ಸಡಗರ– ಸಂಭ್ರಮ. ಹೆಣ್ಣುಮಕ್ಕಳಿಗಂತೂ ಚೆಂದದ ಹೊಸ ಬಟ್ಟೆ ತೊಟ್ಟು ಮನೆಯೆಲ್ಲಾ ಓಡಾಡುವ ಹುರುಪು. ಹಬ್ಬಗಳಲ್ಲಿ ಸಾಂಪ್ರಾದಾಯಿಕ ಉಡುಗೆಗಳಿಗೇ ಹೆಚ್ಚು ಪ್ರಾಶಸ್ತ್ಯ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿ ಇರಬೇಕೆಂದೇ ಎಲ್ಲರೂ ಬಯಸುತ್ತಾರೆ.
ಸಾಂಪ್ರದಾಯಿಕವಾಗಿಯೂ ಕಾಣುವಂತೆ ಟ್ರೆಂಡ್ ಉಡುಪನ್ನು ಧರಿಸಬಹುದು. ಅದಕ್ಕೆ ಸ್ಕರ್ಟ್ ಅಥವಾ ಲಂಗಗಳು ಉತ್ತಮ ಆಯ್ಕೆ. ಎಲ್ಲಾ ಕಾಲದಲ್ಲೂ ಹೆಂಗಳೆಯರ ನೆಚ್ಚಿನ ಉಡುಪು ಲಂಗ. ಅದಕ್ಕೀಗ ಫ್ಯಾಷನ್ ಟಚ್ ನೀಡಿ ಇನ್ನಷ್ಟು ಆಕರ್ಷಕವಾಗಿ ಮಾಡಲಾಗಿದೆ. ಹಬ್ಬಗಳಲ್ಲಿ, ಸಮಾರಂಭಗಳಲ್ಲಿ ಸಾಂಪ್ರದಾಯಿಕವಾಗಿ ಕಾಣಲು ಸ್ಕರ್ಟ್‌ಗಳು ಬೆಸ್ಟ್.
ಲಾಂಗ್ ಸ್ಕರ್ಟ್‌ಗಳು: ಬಣ್ಣದ ಬಣ್ಣದ ಲಾಂಗ್ ಸ್ಕರ್ಟ್‌ಗಳು ಹಬ್ಬಗಳ ಸಂದರ್ಭದಲ್ಲಿ ಹೇಳಿ ಮಾಡಿಸಿದ ಉಡುಗೆಯಾಗಿದೆ. ಅದರಲ್ಲೂ ಡಿಸೈನ್ ಇರದ ಕೆಂಪು, ಗೋಲ್ಡ್, ಗಾಢ ಗುಲಾಬಿ, ಗಾಢ ನೀಲಿ ಬಣ್ಣದ ಲಾಂಗ್ ಸ್ಕರ್ಟ್‌ಗಳು ರಿಚ್ ಲುಕ್ ನೀಡುತ್ತವೆ. ಈ ರೀತಿಯ ಸ್ಕರ್ಟ್‌ಗಳಿಗೆ ಶಾರ್ಟ್ ಟಾಪ್‌ಗಳು ಒಪ್ಪುತ್ತವೆ.
ರಾಜಸ್ಥಾನಿ ಲಾಂಗ್ ಸ್ಕರ್ಟ್: ಹೆಚ್ಚಾಗಿ ಕಾಟನ್ ಬಟ್ಟೆಗಳಿಂದ ತಯಾರಾಗುವ ರಾಜಸ್ಥಾನಿ ಲಾಂಗ್ ಸ್ಕರ್ಟ್‌ಗಳು ಧರಿಸಲು ಹಿತವಾಗಿರುತ್ತವೆ. ಒಂದೇ ಸ್ಕರ್ಟ್‌ನಲ್ಲಿ ವಿವಿಧ ಬಣ್ಣಗಳು, ಚೆಂದದ ಡಿಸೈನ್‌ಗಳನ್ನು ಕಾಣಬಹುದು. ಕಲಂಕಾರಿ, ಟೆಂಪಲ್. ಆನೆ–ರಥಗಳಿರುವ ಆರ್ಟ್‌ಗಳು ಈ ರಾಜಸ್ಥಾನಿ ಸ್ಕರ್ಟ್‌ಗಳ ವಿಶೇಷತೆಯಾಗಿದೆ.
ಕುರ್ತಾದೊಂದಿಗೆ ಸ್ಕರ್ಟ್‌ಗಳು: ಕುರ್ತಾಗಳಿಗೆ ವಿವಿಧ ರೀತಿಯ ಪ್ಯಾಂಟ್‌ಗಳನ್ನು ಧರಿಸುವುದು ಈಗ ಹಳೆಯ ಫ್ಯಾಶನ್. ಏನಿದ್ದರೂ ಆರಾಮದಾಯಕ ಎನಿಸುವ ಸ್ಕರ್ಟ್‌ಗಳು ಕುರ್ತಾಗಳಿಗೆ ಧರಿಸಿದರೆ ವಿಭಿನ್ನ ಲುಕ್ ನೀಡುತ್ತದೆ. ಸ್ಕರ್ಟ್ ಅನ್ನು ಕಾಂಟ್ರಾಸ್ಟ್ ಕುರ್ತಾದೊಂದಿಗೆ ಧರಿಸಿ. ಅದಕ್ಕೆ ಹೊಂದಿಕೆಯಾಗುವ ದುಪಟ್ಟಾವನ್ನು ಧರಿಸಲು ಮರೆಯದಿರಿ.
ಫ್ಲೇರ್ಡ್ ಸ್ಕರ್ಟ್‌ಗಳು: ಒಂದೊಂದು ಬಟ್ಟೆಯ ತುಂಡನ್ನು ಸೇರಿಸಿ ವಿಭಿನ್ನವಾಗಿ ವಿನ್ಯಾಸಗೊಳಿಸಿರುವ ಫ್ಲೇರ್ಡ್ ಸ್ಕರ್ಟ್‌ಗಳು ಸಾಂಪ್ರದಾಯಿಕ ಲುಕ್ ನೀಡಬಲ್ಲದು. ಅದರಲ್ಲೂ ಕಾಂಟ್ರಾಸ್ಟ್ ಕಲರ್ ಬಟ್ಟೆಗಳನ್ನು ಜೋಡಿಸಿದ ಸ್ಕರ್ಟ್‌ಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಈ ಸ್ಕರ್ಟ್‌ಗಳ ಮೇಲೆ, ಹೂವು, ಬಳ್ಳಿಗಳ ಚಿತ್ರ, ಪೇಂಟಿಂಗ್‌ಗಳು, ಬಣ್ಣದ ವಿನ್ಯಾಸವನ್ನು ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.