ಬಾಬಾ ರಾಮದೇವ್ ಅವರ ನಾಯಕತ್ವದಲ್ಲಿ ಪತಂಜಲಿ ಆಯುರ್ವೇದ ಕಂಪನಿಯು ಒಂದು ಸಣ್ಣ ಆಯುರ್ವೇದ ಉತ್ಪನ್ನದಿಂದ ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಪ್ರಮುಖ ಬ್ರ್ಯಾಂಡ್ ಆಗಿ ಪರಿವರ್ತನೆಗೊಂಡಿದೆ. ಈ ಬೆಳವಣಿಗೆಯ ಹಾದಿಯು ಭಾರತದ ಆರ್ಥಿಕತೆಯ ಎಫ್ಎಂಸಿಜಿ (ತ್ವರಿತಗತಿಯಲ್ಲಿ ಬಿಕರಿಯಾಗುವ ಪದಾರ್ಥಗಳು) ವಿಭಾಗದಲ್ಲಿ ಕ್ರಾಂತಿಯನ್ನೇ ಮಾಡಿದೆ.

ಸ್ವದೇಶಿ ಆಂದೋಲನಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರುವುದು, ಸ್ವಾವಲಂಬನೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು ಪತಂಜಲಿಯ ಯಶಸ್ಸಿನ ಮೂಲವಾಗಿದೆ. ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮತ್ತು ಉತ್ಪಾದನೆಯನ್ನು ಬೆಂಬಲಿಸುವ ಮೂಲಕ, ಪತಂಜಲಿಯು ವಿದೇಶಿ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಆ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ.

ಪತಂಜಲಿ ದೇಶೀಯ ಉತ್ಪಾದನೆಗೆ ಒತ್ತು ನೀಡುತ್ತದೆ. ಕೃಷಿ, ಚಿಲ್ಲರೆ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ನಂತಹ ಕ್ಷೇತ್ರಗಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ. ಈ ದೇಶಿ ಕ್ರಮವು ಸ್ಥಳೀಯ ಸಂಪನ್ಮೂಲಗಳ ಮೇಲೆ ಕೇಂದ್ರೀಕರಿಸಿ ಸ್ಥಳೀಯ ಕೈಗಾರಿಕೆಗಳನ್ನು ಸಬಲೀಕರಣಗೊಳಿಸುತ್ತದೆ. ತನ್ಮೂಲಕ ಸ್ವಾವಲಂಬಿ ರಾಷ್ಟ್ರವಾಗುವ ಭಾರತದ ದೃಷ್ಟಿಕೋನಕ್ಕೆ ಪತಂಜಲಿ ಪೂರಕವಾಗಿದೆ.

ಭಾರತದ ಸ್ವಾವಲಂಬನೆಯ ಪರಿಕಲ್ಪನೆಗೆ ಪತಂಜಲಿ ಸಾಧಿಸಿರುವ ಆರ್ಥಿಕ ಹೆಜ್ಜೆಗುರುತು ಕನ್ನಡಿಯಾಗಿದೆ. ಪತಂಜಲಿಯು ಸ್ಥಳೀಯವಾಗಿ ತಯಾರಿಸಿದ ಸರಕುಗಳಿಗೆ ಒತ್ತು ನೀಡುವ ಮೂಲಕ, ವಿಶೇಷವಾಗಿ ಆರೋಗ್ಯ, ಯೋಗಕ್ಷೇಮ ಮತ್ತು ಆಹಾರ ವಲಯದ ಮೇಲೆ ವಿದೇಶಿ ಅವಲಂಬನೆಯನ್ನು ತಡೆಯುತ್ತದೆ. ಪತಂಜಲಿಯ ಎಲ್ಲ ಉತ್ಪನ್ನಗಳು ಭಾರತದ ಅತಿದೊಡ್ಡ ಕೃಷಿ ಪರಂಪರೆಗೆ ಗೌರವ ಸಲ್ಲಿಸುತ್ತವೆ ಮತ್ತು ಪೂರೈಕೆ ಸರಪಳಿಯನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತವೆ.

ಪತಂಜಲಿಯು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳನ್ನು (MSMEs) ಹೆಚ್ಚು ಬೆಂಬಲಿಸುತ್ತದೆ. ಈ ಮೂಲಕ ಅದು ಸ್ಥಳೀಯ ರೈತರು, ತಯಾರಕರು ಮತ್ತು ಸಣ್ಣ ವ್ಯಾಪಾರಸ್ಥರೊಂದಿಗೆ ವ್ಯವಹರಿಸುತ್ತದೆ. ಉದ್ಯಮಕ್ಕೆ ಸ್ಥಳೀಯವಾಗಿ ಕಚ್ಚಾ ವಸ್ತುಗಳನ್ನು ಪಡೆಯುವುದರ ಮೂಲಕ ಮತ್ತು ಸ್ಥಳೀಯ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಭಾರತದ ಜೀವನೋಪಾಯದ ಮೇಲೆ ಪತಂಜಲಿ ಕಂಪನಿಯು ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಪತಂಜಲಿಯ ಯಶಸ್ಸು ದೇಶದ ಹಲವಾರು ಉದ್ಯಮಿಗಳಿಗೆ ಸ್ಫೂರ್ತಿ ನೀಡಿದ್ದು, ಮಾರುಕಟ್ಟೆಯಲ್ಲಿ ನಾವೀನ್ಯತೆ ಮತ್ತು ಆರೋಗ್ಯಕರ ಸ್ಪರ್ಧೆಗೆ ಪ್ರೋತ್ಸಾಹ ನೀಡಿದೆ. ಕಂಪನಿಯ ಆರೋಗ್ಯಕರ ವ್ಯವಹಾರ ಮಾದರಿಯು ಸಾಂಪ್ರದಾಯಿಕ ಆಯುರ್ವೇದ ಜ್ಞಾನವನ್ನು ಸಮಕಾಲೀನ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತದೆ. ಅದು ಹೆಚ್ಚು ಗುಣಮಟ್ಟದಿಂದ ಸುಲಭ ದರದಲ್ಲಿ ಮತ್ತು ಸುಲಭವಾಗಿ ಗ್ರಾಹಕರಿಗೆ ದೊರೆಯುವುದಕ್ಕೆ ಆದ್ಯತೆ ನೀಡುತ್ತದೆ.

ಮುಖ್ಯವಾಗಿ ಪತಂಜಲಿಯ ಹೂಡಿಕೆಗಳು ಗ್ರಾಮೀಣ ಮತ್ತು ನಗರ ಎರಡೂ ಆರ್ಥಿಕತೆಗಳಿಗೆ ಸೇವೆ ಸಲ್ಲಿಸುತ್ತವೆ. ಗ್ರಾಮೀಣ ಆರ್ಥಿಕತೆಯಲ್ಲಿ, ಕಂಪನಿಯ ಸ್ಥಳೀಯ ಬೆಂಬಲದ ನೀತಿಯು ರೈತರು ಮತ್ತು ಅಲ್ಲಿನ ಸಣ್ಣ ಕೈಗಾರಿಕಾ ಸಮುದಾಯಗಳನ್ನು ಬೆಂಬಲಿಸುತ್ತದೆ. ನಗರ ಪ್ರದೇಶದಲ್ಲಿನ ಆರ್ಥಿಕತೆಯಲ್ಲಿ ಪತಂಜಲಿಯ ವಿಸ್ತರಣೆಯು ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆ ಮೂಲಕ ನಗರ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.

ಮುಂದುವರೆದು ನೋಡುವುದಾದರೆ ಭಾರತದ ಆರ್ಥಿಕತೆಗೆ ಪತಂಜಲಿಯ ಕೊಡುಗೆ ಗಮನಾರ್ಹವಾಗಿದೆ ಮತ್ತು ದೂರದೃಷ್ಟಿಯುಳ್ಳದ್ದಾಗಿದೆ. ಪತಂಜಲಿಯು ಸ್ವದೇಶಿ ಆಂದೋಲನವನ್ನು ಬೆಂಬಲಿಸುತ್ತಿರುವುದರಿಂದ ಸ್ಥಳೀಯ ವ್ಯವಹಾರಗಳಲ್ಲಿ ಹೂಡಿಕೆಗೆ ಅವಕಾಶ ಸಿಗುತ್ತಿದೆ. ಅಲ್ಲದೇ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದೆ. ಇದರೊಂದಿಗೆ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸಾಕಾರ ಮಾಡುವಲ್ಲಿ ಪತಂಜಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.