ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ 2020 | ನಿಮ್ಮ ಆದಾಯ ತೆರಿಗೆ ಎಷ್ಟು ತಗ್ಗಿದೆ? ಇಲ್ಲಿದೆ ಮಾಹಿತಿ

Last Updated 1 ಫೆಬ್ರುವರಿ 2020, 10:38 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ2020ನೇ ಸಾಲಿನ ಬಜೆಟ್‌ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌,ತೆರಿಗೆ ಸುಧಾರಣೆ ಮಂತ್ರ ಪಠಿಸಿದ್ದು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲವುವಿನಾಯಿತಿ ಘೋಷಿಸಿದರು.

ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವುದಾಗಿ ಹೇಳಿದ ನಿರ್ಮಲಾ,ಕಾಯ್ದೆಯಲ್ಲಿ ಸುಧಾರಣೆ ತಂದು ಹೊಸ ವ್ಯವಸ್ಥೆ ಜಾರಿ ಮಾಡುವುದಾಗಿ ಎಂದು ಭರವಸೆ ನೀಡಿದರು.

* ₹ 2.5ಲಕ್ಷದ ವರೆಗೂ ಆದಾಯ ಹೊಂದಿರುವವರರಿಗೆಯಾವುದೇ ತೆರಿಗೆ ಇಲ್ಲವೆಂದ ಸಚಿವೆ, ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದ ಹಾಗೆಯೇ₹ 2.5 ಲಕ್ಷದಿಂದ5 ಲಕ್ಷದ ವರೆಗೆ ಆದಾಯ ಹೊಂದಿರುವರಿಗೆ ಶೆ.5ರಷ್ಟು ತರಿಗೆ ಮುಂದುವರಿಸಿದ್ದಾರೆ.

* ₹ 5 ಲಕ್ಷದಿಂದ ₹ 7.5 ಆದಾಯ ಹೊಂದಿದ್ದವರು ಈ ಹಿಂದೆ ₹ 20 ರಷ್ಟು ತೆರಿಗೆ ಪಾವತಿಸಬೇಕಿತ್ತು. ಆದರೆ, ಅದನ್ನು ಶೇ. 10ಕ್ಕೆ ಇಳಿಸಲಾಗಿದೆ.

* ₹ 7.5 ಲಕ್ಷದಿಂದ ₹ 10 ಲಕ್ಷದ ವರೆಗೆ ಆದಾಯ ಹೊಂದಿರುವವರು ಶೇ.15 ರಷ್ಟು ತೆರಿಗೆ ಪಾವತಿಸಿದರೆ ಸಾಕು. ಈ ವರ್ಗದ ಆದಾಯದಾರರಿಗೆಈ ಹಿಂದೆ ಶೇ.20 ರಷ್ಟುತೆರಿಗೆ ದರವಿತ್ತು.

*₹ 10 ಲಕ್ಷದಿಂದ ₹ 12.5 ಲಕ್ಷದ ವರೆಗೆ ಆದಾಯ ಹೊಂದಿರುವವರರುಈ ಹಿಂದೆ ಶೇ.30 ರಷ್ಟು ತೆರಿಗೆ ಪಾವತಿಸಬೇಕಿತ್ತು. ಅದನ್ನು ಶೇ. 20ಕ್ಕೆ ಇಳಿಸಲಾಗಿದೆ.

* ₹ 12.5 ಲಕ್ಷದಿಂದ ₹ 15 ಲಕ್ಷದ ವರೆಗೆ ಆದಾಯ ಹೊಂದಿರುವವರಿಗೆಸದ್ಯ ಇರುವಶೇ.30 ರಷ್ಟುತೆರಿಗೆ ಪಾವತಿಸಬೇಕಿತ್ತು. ಅದನ್ನು ಶೇ. 20ಕ್ಕೆ ಇಳಿಸಲಾಗಿದೆ.

* ₹ 15 ಲಕ್ಷಕ್ಕಿಂತ ಹೆಚ್ಚಿ ಆದಾಯ ಹೊಂದಿರುವರು ಈಗ ಇರುವ ಶೇ.30ರ ದರದಲ್ಲೇ ತೆರಿಗೆ ಪಾವತಿಸಬೇಕಿದೆ.

ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿಯಿಂದಾಗಿ ವಾರ್ಷಿಕ ₹ 40 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್‌, ಹೊಸ ನಿಯಮವು ತೆರಿಗೆದಾರರಿಗೆ ಕಡ್ಡಾಯವಲ್ಲ. ಅದು ಆಯ್ಕೆಯಾಗಿದ್ದು, ತೆರಿಗೆದಾರರು ಬಯಸಿದರೆ ಹಳೆಯ ನಿಯಮವನ್ನೇ ಆಯ್ಕೆ ಮಾಡಿಕೊಳ್ಳಬಹದುಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT