ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020 | ಅಂಗನವಾಡಿಗಳ ಡಿಜಿಟಲೀಕರಣ

Last Updated 1 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸುವ ಪ್ರಸ್ತಾವವನ್ನು ನಿರ್ಮಲಾ ಅವರು ಬಜೆಟ್‌ನಲ್ಲಿ ಮಾಡಿದ್ದು, ಮುಂದಿನ ದಿನಗಳಲ್ಲಿ ಅಂಗನವಾಡಿಗಳ ದೈನಂದಿನ ಕಾರ್ಯಚಟುವಟಿಗಳು ಗಣಕೀಕರಣಗೊಳ್ಳಲಿವೆ.

ತಾಯಿ ಮತ್ತು ಮಗುವಿನ ಆರೋಗ್ಯವು ಪರಸ್ಪರ ನಿಕಟ ಸಂಬಂಧ ಹೊಂದಿದ್ದು, ಪೌಷ್ಟಿಕಾಂಶವು ಇಬ್ಬರ ಆರೋಗ್ಯದ ನಿರ್ಣಾಯಕ ಅಂಶವಾಗಿದೆ. ಮಕ್ಕಳು (0–6 ವಯಸ್ಸಿನ), ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶದ ಸ್ಥಿತಿ ಸುಧಾರಿಸಲು 2017–18ರಲ್ಲಿಯೇ ಸರ್ಕಾರ ‘ಪೋಷಣ್‌ ಅಭಿಯಾನ’ವನ್ನು ಆರಂಭಿಸಿತ್ತು. ಇದರ ಅಡಿ, 10 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸ್ಥಿತಿ ಅರಿಯಲು 6 ಲಕ್ಷಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್ ಹೊಂದಿದ್ದಾರೆ. ಇದರಿಂದಾಗಿ ಒಂದು ಕೋಟಿ ಕುಟುಂಬಗಳ ಆರೋಗ್ಯ ಸುಧಾರಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಮದುವೆ ವಯಸ್ಸು ನಿಗದಿಗೆ ಕಾರ್ಯಪಡೆ
‘ಹೆಣ್ಣುಮಕ್ಕಳ ಮದುವೆ ವಯಸ್ಸು ನಿಗದಿಗೆ ಕಾರ್ಯಪಡೆ ರಚಿಸಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಹೇಳಿದರು.

‘ಆಧುನಿಕ ಯುಗದಲ್ಲಿ, ಮಹಿಳೆಗೆ ಉನ್ನತ ಶಿಕ್ಷಣ ಪಡೆಯುವ ಮತ್ತು ತನ್ನ ಭವಿಷ್ಯ ರೂಪಿಸಿಕೊಳ್ಳುವ ಅವಕಾಶಗಳು ಹೆಚ್ಚಿವೆ. ಆದ್ದರಿಂದ
ಹೆಣ್ಣುಮಕ್ಕಳ ಮದುವೆ ವಯಸ್ಸಿನ ಬಗ್ಗೆ ಮರು ಚಿಂತನೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ಒಂದು ಕಾರ್ಯಪಡೆ ರಚಿಸಲಾಗುವುದು.

ತಾಯಿಮರಣ ಸಂಖ್ಯೆಯನ್ನು ತಗ್ಗಿಸುವ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕಾಂಶದ ಕೊರತೆಯ ಪ್ರಮಾಣವನ್ನು ತಗ್ಗಿಸುವ ಜವಾಬ್ದಾರಿಯೂ ಎಲ್ಲರ ಮೇಲೆ ಇದೆ. ಈ ಕಾರ್ಯಪಡೆಯು ಆರು ತಿಂಗಳ ಒಳಗೆ ಶಿಫಾರಸುಗಳನ್ನು ನೀಡಲಿದೆ’ ಎಂದರು.

‘ಮಹಿಳಾ ಅಭಿವೃದ್ಧಿಯ ವಿವಿಧ ಯೋಜನೆಗಳಿಗೆ ₹28,600 ಕೋಟಿ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT