ಭಾನುವಾರ, ಜುಲೈ 3, 2022
23 °C

ಈ ಬಾರಿಯೂ ಕಾಗದ ರಹಿತ ಬಜೆಟ್: ಟ್ಯಾಬ್‌ ಹಿಡಿದು ಬಂದ ಹಣಕಾಸು ಸಚಿವೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯೂ ಕಾಗದ ರಹಿತ ಬಜೆಟ್‌ ಮಂಡಿಸುತ್ತಿದ್ದಾರೆ.

ಕಳೆದ ವರ್ಷ, ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಅವರು, ಸಾಂಪ್ರದಾಯಿಕ ಮಾದರಿಯ ಬಜೆಟ್ ಭಾಷಣ ಪುಸ್ತಕದ ಬದಲಾಗಿ, ಟ್ಯಾಬ್ಲೆಟ್ ಹಿಡಿದು ಬಜೆಟ್ ಮಂಡಿಸಿದ್ದರು.

ಈ ಬಾರಿಯೂ, ಅದೇ ಮಾದರಿಯಲ್ಲಿ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ.

ಕೆಂಪು ಬಣ್ಣದ ಕವರ್‌ನಲ್ಲಿ ಬಜೆಟ್ ಭಾಷಣವಿರುವ ಟ್ಯಾಬ್ಲೆಟ್ ಹಿಡಿದುಕೊಂಡಿದ್ದ ಸಚಿವೆ ನಿರ್ಮಲಾ ಸೀತಾರಾಮನ್, ಅದನ್ನು ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದವರೆದುರು ಪ್ರದರ್ಶಿಸಿದರು.

ಈ ಬಾರಿ ಕೋವಿಡ್ ನಿರ್ಬಂಧದ ಕಾರಣ, ಬಜೆಟ್ ಹಲ್ವ ಸಮಾರಂಭವನ್ನು ಕೂಡ ಮಾಡಿಲ್ಲ. ಹಲ್ವ ಸಮಾರಂಭವನ್ನು ಇದೇ ಮೊದಲ ಬಾರಿಗೆ ರದ್ದುಪಡಿಸಲಾಗಿದೆ.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು