ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್ ಬಿಡಿಭಾಗ, ಚಾರ್ಜರ್ ಬೆಲೆ ಏರಿಕೆ!

ಬೆಂಗಳೂರು: ಸೋಮವಾರ ಮಂಡಿಸಲಾದ ಪ್ರಸಕ್ತ ಸಾಲಿನ ಬಜೆಟ್ ಪ್ರಕಾರ, ದೇಶದಲ್ಲಿ ಇನ್ನು ಆಮದು ಮಾಡಿಕೊಳ್ಳುವ ಫೋನ್ ಬೆಲೆಯಲ್ಲಿ ಏರಿಕೆಯಾಗಲಿದೆ. ದೇಶದಲ್ಲಿ ಸ್ಮಾರ್ಟ್ಫೋನ್ ಉತ್ಪಾದನೆ ಉತ್ತೇಜನಗೊಳಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ವಿದೇಶದಿಂದ ಆಮದಾಗುವ ಸ್ಮಾರ್ಟ್ಫೋನ್ ಮತ್ತು ಮೊಬೈಲ್ ಬಿಡಿಭಾಗಗಳ ಬೆಲೆ ಏರಿಕೆಯಾಗುವುದರಿಂದ, ದೇಶಿಯ ಉತ್ಪಾದನೆ ಮತ್ತು ತಯಾರಿಕೆ ಕ್ಷೇತ್ರದ ಮೇಲೆ ಪ್ರಯೋಜನವಾಗಲಿದೆ. ಹೆಚ್ಚಿನ ಸ್ಮಾರ್ಟ್ಫೋನ್ ಕಂಪನಿಗಳು ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಂಡು, ಭಾರತದಲ್ಲಿ ಮಾರುಕಟ್ಟೆಗೆ ಹೊಸ ಫೋನ್ ಪರಿಚಯಿಸುತ್ತಿವೆ.
ಮೊಬೈಲ್ ಬಿಡಿಭಾಗ ಮತ್ತು ಚಾರ್ಜರ್, ಕೇಬಲ್ ಇತ್ಯಾದಿ ಸರಕುಗಳನ್ನು ಆಮದು ಮಾಡಿಕೊಳ್ಳುವ ಬದಲಿಗೆ, ದೇಶದಲ್ಲೇ ಉತ್ಪಾದನೆ ಮಾಡಿ, ಜೋಡಣೆ ಮಾಡಿದರೆ ಅದಕ್ಕೆ ಸರ್ಕಾರದಿಂದ ಪ್ರೋತ್ಸಾಹ ಕೂಡ ದೊರೆಯಲಿದೆ. ಅಲ್ಲದೆ, ಮೇಕ್ ಇನ್ ಇಂಡಿಯಾ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಆದರೆ ಆಮದು ಮಾಡಿಕೊಂಡರೆ ಹೆಚ್ಚುವರಿ ಸುಂಕ, ದರ ಪಾವತಿಸಬೇಕಾಗಿದೆ.
ಇದನ್ನೂ ಓದಿ: ಬಜೆಟ್ 2021: ಯಾವುದರ ದರ ಏರಿತು, ಯಾವುದಕ್ಕೆ ಇಳಿಯಿತು?
ಹೀಗಾಗಿ ದೇಶಿಯ ಉತ್ಪಾದನೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್ ಮೂಲಕ ಕೈಗೊಳ್ಳಲಿದೆ.
ಇದನ್ನೂ ಓದಿ: 2021-22ರಲ್ಲಿ ₹12 ಲಕ್ಷ ಕೋಟಿ ಸಾಲ: ಕೇಂದ್ರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.