ಕರ್ನಾಟಕ ಬಜೆಟ್: ಪ್ರವಾಸೋದ್ಯಮಕ್ಕೆ ಆದ್ಯತೆ; ಜೋಗ, ನಂದಿ ಬೆಟ್ಟದಲ್ಲಿ ರೋಪ್ವೇ

ಬೆಂಗಳೂರು: ಜೋಗ ಜಲಪಾತ, ನಂದಿ ಬೆಟ್ಟ ಮತ್ತು ಯಾಣ ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು (ಮಾ.04), 2022–23ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಶಿವಮೊಗ್ಗದಲ್ಲಿರುವ ಜೋಗ ಜಲಪಾತದಲ್ಲಿ ಅಂದಾಜು ₹ 116 ಕೋಟಿ ವೆಚ್ಚದಲ್ಲಿ ಹೋಟೆಲ್ ಮತ್ತು ರೋಪ್ವೇ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ₹ 93 ಕೋಟಿ ವೆಚ್ಚದಲ್ಲಿ ರೋಪ್ವೇ ಅಭಿವೃದ್ಧಿಪಡಿಸಲಾಗುವುದು. ಯಾಣದಲ್ಲಿಯೂ ರೋಪ್ವೇ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪರ್ವತ ಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿ ದತ್ತಪೀಠಗಳಲ್ಲಿ ರೋಪ್ವೇ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಿದ್ದಾರೆ.
Karnataka Budget Live Updates: ಯಾವುದೇ ತೆರಿಗೆ ಹೆಚ್ಚಳ ಇಲ್ಲ Live
ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಷ್ಟು ಕ್ರಮ
* ಕೊಪ್ಪಳದ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ₹ 100 ಕೊಟಿ ಅನುದಾನ
* ಹಂಪಿ–ಬಾದಾಮಿ–ಐಹೊಳೆ–ಪಟ್ಟದಕಲ್ಲು–ವಿಜಯಪುರ ಪ್ರವಾಸಿ ವೃತ್ತ ಹಾಗೂ ಮೈಸೂರು–ಶ್ರೀರಂಗಪಟ್ಟಣ–ಹಾಸನ–ಬೇಲೂರು–ಹಳೇಬೀಡು ಪ್ರವಾಸಿ ವೃತ್ತ ಅಭಿವೃದ್ಧಿಗೆ ಕ್ರಮ
* ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಹೊಯ್ಸಳರ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿ ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ
* ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸಿಆರ್ಜೆಡ್ ಮಾನದಂಡಗಳನ್ನು ಸಡಿಲಿಸುವಂತೆ ಕೇಂದ್ರದ ಅನುಮೋದನೆ ಪಡೆಯಲು ಕ್ರಮ
* ತಬಡಿ ಬಂದರಿನಲ್ಲಿ ಪರಿಸರ–ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ
* ಪಾರಂಪರಿಕ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ
* ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ನೆರವಾಗುವಂತಹ 'Adopt a Monument' ಯೋಜನೆ ಜಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.