ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Union Budget–2023: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ

Published : 1 ಫೆಬ್ರುವರಿ 2023, 8:19 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪಾವತಿದಾರರಿಗೆ ಅಲ್ಪ ವಿನಾಯಿತಿ ನೀಡಿದ್ದಾರೆ. ತೆರಿಗೆ ವಿನಾಯಿತಿ ಮಿತಿಯನ್ನು ಹಳೆ ತೆರಿಗೆ ಪದ್ದತಿಯಲ್ಲಿ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಹಾಗೂ ಹೊಸ ತೆರಿಗೆ ಪದ್ದತಿಯಲ್ಲಿ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆಬ್ರವರಿ 1) 2023–24ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಸಂಸತ್‌ನಲ್ಲಿ ಮಂಡಿಸಿದ್ದಾರೆ.

ಈ ವೇಳೆ ಆದಾಯ ತೆರಿಗೆ ಸಂಬಂಧ ಮಾಹಿತಿ ನೀಡಿರುವ ಅವರು, ಹಳೆ ತೆರಿಗೆ ಪದ್ದತಿಯ ವ್ಯಾಪ್ತಿಗೆ ಬರುವ ತೆರಿಗೆದಾರರಿಗೆ ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು ₹ 2.5 ಲಕ್ಷದ ಬದಲು ₹ 3 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನ್ನು ಸಲ್ಲಿಸಲಾಗಿದೆ. ಅದೇರೀತಿ ಹೊಸ ತೆರಿಗೆ ಪದ್ದತಿ ವ್ಯಾಪ್ತಿಗೆ ಬರುವ ತೆರಿಗೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಜೆಟ್ 2023: ನಿಮ್ಮ ಆದಾಯ ತೆರಿಗೆ ಲೆಕ್ಕಾಚಾರ ಹಾಕಲು ಇಲ್ಲಿ ಕ್ಲಿಕ್ ಮಾಡಿ

ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿರುವುದು ತೆರಿಗೆ ಪಾವತಿದಾರರಿಗೆ ಸಮಾಧಾನ ತಂದಿದೆ. ಹೊಸ ತೆರಿಗೆ ಪದ್ದತಿ ಅನುಸಾರ ₹ 7 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಇದೆ. ವಾರ್ಷಿಕ 9 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಇನ್ನುಮಂದೆ ₹ 45,000 ಪಾವತಿಸಬೇಕಾಗುತ್ತದೆ. ಇದರ ಪ್ರಮಾಣ ಒಟ್ಟಾರೆ ಆದಾಯದ ಶೇ 5 ರಷ್ಟಾಗುತ್ತದೆ. ಇದು ಸದ್ಯ ಪಾವತಿಸುತ್ತಿರುವ ₹ 60 ಸಾವಿರಕ್ಕೆ ಹೋಲಿಸಿದರೆ ಶೇ 25ರಷ್ಟು ಕಡಿತಗೊಳ್ಳಲಿದೆ.

ಅದೇರೀತಿ ₹15 ಲಕ್ಷ ಆದಾಯ ಹೊಂದಿರುವವರು ₹ 1.5 ಲಕ್ಷ ಅಥವಾ ಶೇ 10 ರಷ್ಟು ತೆರಿಗೆ ಪಾವತಿಸಬೇಕು. ಇದರ ಪ್ರಮಾಣವೂ ಸದ್ಯ ಪಾವತಿಸಬೇಕಿರುವ ₹ 1,87,500ಕ್ಕೆ ಹೋಲಿಸಿದರೆ ಶೇ 20 ರಷ್ಟು ಕಡಿತಗೊಳ್ಳಲಿದೆ.

ಹಳೆ ಪದ್ದತಿಯಂತೆ ಪರಿಷ್ಕೃತ ತೆರಿಗೆ ಪಾವತಿ ವಿವರ
₹ 0 – ₹ 3 ಲಕ್ಷದ ವರೆಗೆ: ತೆರಿಗೆ ವಿನಾಯಿತಿ
₹ 3 ಲಕ್ಷದದಿಂದ ₹ 6 ಲಕ್ಷದವರೆಗೆ: ಶೇ. 5 ರಷ್ಟು
₹ 6 ಲಕ್ಷದದಿಂದ ₹ 9 ಲಕ್ಷದವರೆಗೆ: ಶೇ. 10 ರಷ್ಟು
₹ 9 ಲಕ್ಷದದಿಂದ ₹ 12 ಲಕ್ಷದವರೆಗೆ: ಶೇ. 15 ರಷ್ಟು
₹ 12 ಲಕ್ಷದದಿಂದ 15 ಲಕ್ಷದವರೆಗೆ: ಶೇ. 20 ರಷ್ಟು
₹ 15 ಲಕ್ಷದದಿಂದ ಮೇಲ್ಪಟ್ಟು: ಶೇ. 30 ರಷ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT