ನವದೆಹಲಿ: ಹನ್ನೊಂದು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ (ಶೇ5) ಮಟ್ಟಕ್ಕೆ ಕುಸಿದಿರುವ ದೇಶಿ ಆರ್ಥಿಕತೆ ಪುಟಿದೇಳುವಂತೆ ಮಾಡಲು ಭಾರಿ ಘೋಷಣೆಗಳು ಪ್ರಕಟಗೊಳ್ಳಬಹುದು, ವಿತ್ತೀಯ ಶಿಸ್ತು ಸಾಧಿಸಬಹುದು ಎನ್ನುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರದ 2020–21ನೇ ಸಾಲಿನ ಬಜೆಟ್ ಬಹುತೇಕ ಹುಸಿಗೊಳಿಸಿದೆ.

ಹೊಸ ದಶಕದ ಹೊಸ್ತಿಲಲ್ಲಿ ಮಂಡಿಸಿದ ಬಜೆಟ್ನಲ್ಲಿ ಗ್ರಾಹಕರ ಬೇಡಿಕೆ ಮತ್ತು ವೆಚ್ಚ ಹೆಚ್ಚಿಸಿ ಆರ್ಥಿಕತೆ ಪುನಶ್ಚೇತನಗೊಳಿಸುವಂತಹ ಮಾಂತ್ರಿಕತೆ ಕಂಡು ಬಂದಿಲ್ಲ. ಉದ್ಯಮ ಮತ್ತು ಗ್ರಾಹಕರ ಪಾಲಿಗೆ ಗಮನಾರ್ಹ ಕೊಡುಗೆಗಳೇನೂ ಇಲ್ಲ. ಆದಾಯ ತೆರಿಗೆ ಹಂತದಲ್ಲಿನ ತೋರಿಕೆಯ ಬದಲಾವಣೆಗಳಿಂದ ಆರ್ಥಿಕತೆಯಲ್ಲಿ ಭಾರಿ ಬದಲಾವಣೆ ಕಂಡು ಬರುವ ಸಾಧ್ಯತೆ ಕ್ಷೀಣಿಸಿದೆ. ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಿಸಲು ವೈಯಕ್ತಿಕ ಆದಾಯ ತೆರಿಗೆ ಹಂತದಲ್ಲಿ ಬದಲಾವಣೆ, ಕೈಗೆಟುಕುವ ಬೆಲೆಯ ಮನೆ ಖರೀದಿಯ ತೆರಿಗೆ ಲಾಭದ ವಿಸ್ತರಣೆ, ಲಾಭಾಂಶ ವಿತರಣೆಗೆ ಸಂಬಂಧಿಸಿದಂತೆ ಕಂಪನಿಗಳಿಗೆ ವಿನಾಯ್ತಿ ಘೋಷಿಸಿದ್ದರೂ ಅದರಿಂದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ ದೊರೆಯುವ ಸಾಧ್ಯತೆ ಇಲ್ಲ.

ತೆರಿಗೆ ವಿನಾಯ್ತಿ ಮತ್ತು ಕಡಿತದ ಪ್ರಯೋಜನ ಕೈಬಿಟ್ಟು ಉದ್ದೇಶಿತ ಹೊಸ ತೆರಿಗೆ ದರ ಆಯ್ಕೆ ಮಾಡಿಕೊಂಡವರಿಂದ ತೆರಿಗೆ ಉಳಿತಾಯದ ಹೂಡಿಕೆ ಯೋಜನೆಗಳಿಗೆ ಹಣದ ಹರಿವು ನಿಂತು ಹೋಗಲಿದೆ. ಉದ್ದೇಶಿತ ಲಾಭಾಂಶ ವಿತರಣೆ ತೆರಿಗೆಯನ್ನು (ಡಿಡಿಟಿ) ಹೂಡಿಕೆದಾರರಿಗೆ ವರ್ಗಾಯಿಸುವುದರಿಂದಲೂ ನಕಾರಾತ್ಮಕ ಪರಿಣಾಮ ಕಂಡು ಬರಲಿದೆ. ಶೇ 20ರಷ್ಟು ತೆರಿಗೆ ಹಂತ ಮೀರಿದ ತೆರಿಗೆದಾರರು ತಮ್ಮ ಲಾಭಾಂಶ ಆದಾಯಕ್ಕೆ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ.

ವೈಯಕ್ತಿಕ ಆದಾಯ ತೆರಿಗೆದಾರರಿಗೆ ಹೊಸ ತೆರಿಗೆ ದರ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಹೊಸ ಯೋಜನೆಯಡಿ ಸದ್ಯಕ್ಕೆ ಜಾರಿಯಲ್ಲಿ ಇರುವ ಶೇ 10, ಶೇ 20 ಮತ್ತು ಶೇ 30ರ ತೆರಿಗೆ ದರಗಳ ಜತೆಗೆ ಹೆಚ್ಚುವರಿಯಾಗಿ ಶೇ 15, ಶೇ 25 ದರಗಳನ್ನು ಪರಿಚಯಿಸಲಾಗಿದೆ. ಈಗಾಗಲೇ ಜಾರಿಯಲ್ಲಿರುವ ವಾರ್ಷಿಕ ₹ 2.5 ಲಕ್ಷವರೆಗಿನ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯ್ತಿ ಮುಂದುವರಿಯಲಿದೆ.

ಹೊಸ ತೆರಿಗೆ ದರಗಳನ್ನು ಆಯ್ಕೆ ಮಾಡಿಕೊಳ್ಳುವವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ, 80ಡಿ, ಎಲ್ಟಿಸಿ, ಮನೆ ಬಾಡಿಗೆ ಭತ್ಯೆ, ಮನ ರಂಜನೆ ಭತ್ಯೆ, ವೃತ್ತಿ ತೆರಿಗೆ, ಗೃಹ ಸಾಲದ ಬಡ್ಡಿ – ಅಸಲು ಪಾವತಿ ಕಡಿತ ಸೌಲಭ್ಯಗಳನ್ನು ಪಡೆಯುವಂತಿಲ್ಲ. ಮೂಲ ಸೌಕರ್ಯ ವಲಯ, ಗ್ರಾಮೀಣ ಪ್ರದೇಶ, ಆರೋಗ್ಯ, ಶಿಕ್ಷಣ ವಲಯಗಳಿಗೆ ನಿಗದಿಪಡಿಸಿರುವ ಬಜೆಟ್ ಅನುದಾನವು ಅಲ್ಪ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಇದರಿಂದ ಆರ್ಥಿಕತೆ ಚೇತರಿಕೆಗೆ ಭಾರಿ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸುವಂತಿಲ್ಲ. ವೇತನದಾರರು, ಮಧ್ಯಮ ವರ್ಗದವರು, ರಿಯಲ್ ಎಸ್ಟೇಟ್ ವಹಿವಾಟುದಾರರು, ಹರುಷಪಡುವಂತಹ ಗಮನಾರ್ಹ ಕೊಡುಗೆಗಳೇನೂ ಕಾಣುವುದಿಲ್ಲ.

ಗ್ರಾಮೀಣ ಭಾರತಕ್ಕೆ ಆದ್ಯತೆ: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಿ, ರೈತಾಪಿ ವರ್ಗದ ಆದಾಯ ಹೆಚ್ಚಳಕ್ಕೆ 16 ಅಂಶಗಳ ಯೋಜನೆ ಪ್ರಕಟಿಸಲಾಗಿದೆ.

ಆಮದು ಸುಂಕ ಹೆಚ್ಚಳ: ‘ಭಾರತದಲ್ಲಿಯೇ ತಯಾರಿಸಿ’ ಅಭಿಯಾನಕ್ಕೆ ಉತ್ತೇಜನ ನೀಡಲು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪೀಠೋಪಕರಣ, ಪಾದರಕ್ಷೆ, ಆಟಿಕೆ, ಸ್ಟೇಷನರಿ, ಅಡುಗೆಮನೆ ಪಾತ್ರೆಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಕಂಪನಿಗಳು ಷೇರುದಾರರಿಗೆ ವಿತರಿಸುವ ಲಾಭಾಂಶದ ಮೇಲಿನ ತೆರಿಗೆಯನ್ನು ರದ್ದುಪಡಿಸಿರುವುದರಿಂದ ವಿದೇಶಿ ಹೂಡಿಕೆ ಹೆಚ್ಚಲಿದೆ.

ಸಾಲ: ಒಟ್ಟು ವೆಚ್ಚ ಮತ್ತು ವರಮಾನ ಸಂಗ್ರಹದಲ್ಲಿನ ₹ 7.96 ಲಕ್ಷ ಕೋಟಿ ಕೊರತೆಯನ್ನು ಭರಿಸಲು ₹ 5.45 ಲಕ್ಷ ಕೋಟಿ ಸಾಲ ಸಂಗ್ರಹಿಸಲು ಸರ್ಕಾರ ಉದ್ದೇಶಿಸಿದೆ. ಕೇಂದ್ರೋದ್ಯಮಗಳ ಷೇರು ವಿಕ್ರಯದ ಮೂಲಕ ₹ 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಿದೆ.

ಮುಖ್ಯಾಂಶಗಳು

-ಬ್ಯಾಂಕ್ ದಿವಾಳಿ ಎದ್ದ ಸಂದರ್ಭದಲ್ಲಿನ ಠೇವಣಿ ವಿಮೆ ಮೊತ್ತ (₹ 1 ಲಕ್ಷದಿಂದ ₹ 5 ಲಕ್ಷಕ್ಕೆ) ಐದು ಪಟ್ಟು ಹೆಚ್ಚಳ

-ವಿಮೆ ಕ್ಷೇತ್ರದ ದೈತ್ಯ ಸಂಸ್ಥೆ ಎಲ್ಐಸಿ ಮತ್ತು ಐಡಿಬಿಐ ಬ್ಯಾಂಕ್ಗಳಲ್ಲಿನ ಸರ್ಕಾರದ ಪಾಲು ಬಂಡವಾಳ ಮಾರಾಟ. ಖಾಸಗೀಕರಣ

-ಖಾಸಗಿ ಸಹಭಾಗಿತ್ವದಲ್ಲಿ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು

-ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಒಂದು ವರ್ಷ ತೆರಿಗೆ ವಿನಾಯಿತಿ

-ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ವೇಗೆ ಅನುಮೋದನೆ

-ಕೃಷಿ ಉತ್ಪನ್ನಗಳ ಸಾಗಣೆಗೆ ಕಿಸಾನ್ ರೈಲು

-ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ

ಹಳಿ ತಪ್ಪಿದ ಆರ್ಥಿಕ ಶಿಸ್ತು

ವರಮಾನ ಸಂಗ್ರಹ ಕಡಿಮೆಯಾಗಿರು ವುದರಿಂದ 2019–20ನೇ ಹಣಕಾಸು ವರ್ಷದಲ್ಲಿ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವೆ ಇರುವ ಅಂತರ ಹೆಚ್ಚಾಗಿ, ಆರ್ಥಿಕ ಶಿಸ್ತು ಹಳಿ ತಪ್ಪಿದೆ. ವಿತ್ತೀಯ ಕೊರತೆಯನ್ನು ‘ಜಿಡಿಪಿ’ ಶೇ 3.3ರಷ್ಟಕ್ಕೆ ನಿಯಂತ್ರಿಸುವ ಗುರಿ ಇತ್ತು. ಇದನ್ನು ಬಜೆಟ್ನಲ್ಲಿ ಶೇ 3.8ಕ್ಕೆ ಹೆಚ್ಚಿಸಲಾಗಿದೆ. 2020–21ನೇ ಹಣಕಾಸು ವರ್ಷಕ್ಕೆ ಶೇ 3.5ರಷ್ಟು ಇರಲಿದೆ. ಸತತ ಮೂರನೇ ವರ್ಷವೂ ವಿತ್ತೀಯ ಕೊರತೆ ಗುರಿ ತಪ್ಪಿದೆ.

ಕೃಷಿಗೆ ಭರಪೂರ ಕೊಡುಗೆ

ಕೃಷಿ ಮತ್ತು ಗ್ರಾಮೀಣ ವಲಯಕ್ಕೆ₹ 2.83 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಕೃಷಿ ಸಾಲ ನೀಡಲು ₹ 15 ಲಕ್ಷ ಕೋಟಿ ಗುರಿ ನಿಗದಿಪಡಿಸಲಾಗಿದೆ. ಸಾರಿಗೆ ಮೂಲಸೌಕರ್ಯಗಳಿಗಾಗಿ ₹ 1.7 ಲಕ್ಷ ಕೋಟಿ ಮತ್ತು ಇಂಧನ ವಲಯಕ್ಕೆ ₹ 40,740 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಕರಗಿದ ₹ 3.46 ಲಕ್ಷ ಕೋಟಿ

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬಜೆಟ್ಗೆ ತಣ್ಣನೆ ಪ್ರತಿಕ್ರಿಯೆ ನೀಡಿದೆ. 988 ಅಂಶ ಕುಸಿತ ಕಂಡು 39,631 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. 2008ರ ಅಕ್ಟೋಬರ್ ಬಳಿಕ ಗರಿಷ್ಠ ಕುಸಿತ ಇದಾಗಿದೆ. ನಕಾರಾತ್ಮಕ ವಹಿವಾಟಿನಿಂದಾಗಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 3.46 ಲಕ್ಷ ಕೋಟಿ ಕರಗಿದೆ.

ರಾಜ್ಯಕ್ಕೆ ₹ 9 ಸಾವಿರ ಕೋಟಿ ಖೋತಾ

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಗಾಯದ ಮೇಲೆ ಬರೆ ಎಂಬಂತೆ, ಕೇಂದ್ರೀಯ ತೆರಿಗೆಯಲ್ಲಿ ದೊರೆಯುವ ಪಾಲಿನಲ್ಲೂ ₹ 9 ಸಾವಿರ ಕೋಟಿಯಷ್ಟು ಕಡಿತವಾಗುವ ಆತಂಕ ಎದುರಾಗಿದೆ. ಇದು ರಾಜ್ಯದ 2020–21ನೇ ಸಾಲಿನ ಬಜೆಟ್ ತಯಾರಿಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ.

ರಾಜ್ಯ ಕಳೆದುಕೊಳ್ಳಬಹುದಾದ ಕೇಂದ್ರದ ಪಾಲು ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದು ₹ 11 ಸಾವಿರ ಕೋಟಿಯವರೆಗೂ ಏರಬಹುದು ಎಂದೂ ಹೇಳಲಾಗುತ್ತಿದೆ. ‘ಈ ಬಾರಿ ರಾಜ್ಯ ಪಡೆಯುವ ಪಾಲಿನಲ್ಲಿ ₹ 9 ಸಾವಿರದಷ್ಟು ಕಡಿಮೆಯಾಗುವ ಸಾಧ್ಯತೆಯಂತೂ ಇದೆ’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಹೇಳಿದರು.

ಯಾವುದು ತುಟ್ಟಿ, ಯಾವುದು ಅಗ್ಗ?
ಅಗ್ಗ: ಮುದ್ರಣ ಕಾಗದ, ಕ್ರೀಡಾ ವಸ್ತುಗಳು, ಮೈಕ್ರೊಫೋನ್, ವಿದ್ಯುತ್ ಚಾಲಿತ ವಾಹನಗಳು, ಕಚ್ಚಾ ಸಕ್ಕರೆ, ಸಂಸ್ಕರಿತ ಹಾಲು, ಕೃಷಿ ಮತ್ತು ಪ್ರಾಣಿಜನ್ಯ ವಸ್ತುಗಳು

ತುಟ್ಟಿ: ಸಿಗರೇಟ್, ತಂಬಾಕು, ಜರ್ದಾ ಲೇಪಿತ ತಂಬಾಕು, ಆಮದು ಮಾಡಿಕೊಳ್ಳುವ ವಿದ್ಯುತ್ ಚಾಲಿತ ವಾಹನಗಳು, ಖಾದ್ಯ ತೈಲ, ಫ್ಯಾನ್ಗಳು, ಟೇಬಲ್, ಪಾದರಕ್ಷೆಗಳು, ಗೊಂಬೆಗಳು, ಪೀಠೋಪಕರಣಗಳು, ದೀಪಗಳು, ನೀರಿನ ಫಿಲ್ಟರ್ಗಳು, ಗೃಹೋಪಯೋಗಿ ಪಿಂಗಾಣಿ, ಟೇಬಲ್ ಫ್ಯಾನ್, ಸೀಲಿಂಗ್ ಫ್ಯಾನ್, ಮೊಬೈಲ್ ದೂರವಾಣಿಗಳ ಕೆಲ ಬಿಡಿಭಾಗಗಳು, ವೈದ್ಯಕೀಯ ಉಪಕರಣ, ತಾಮ್ರ, ಕಚ್ಚಾ ಸಕ್ಕರೆ, ವಾಟರ್ ಹೀಟರ್ಗಳು, ಸೋಯಾ ಫೈಬರ್.

ಕೇಂದ್ರ ಬಜೆಟ್ ದೂರದೃಷ್ಟಿ ಹಾಗೂ ಕ್ರಿಯಾಶೀಲತೆ ಎರಡನ್ನೂ ಒಳಗೊಂಡಿದೆ. ಬಜೆಟ್ನಲ್ಲಿ ಘೋಷಿಸಿರುವ ಸುಧಾರಣಾ ಕ್ರಮಗಳು ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿ ಹಾಗೂ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ನೆರವಾಗಲಿವೆ. ತೆರಿಗೆ ಪ್ರಕ್ರಿಯೆಯನ್ನು ಬಜೆಟ್ ಸರಳೀಕರಣಗೊಳಿಸಿದ್ದು, ‘ಮಿತ ಸರ್ಕಾರ, ಗರಿಷ್ಠ ಆಡಳಿತ’ ಎಂಬ ಸರ್ಕಾರದ ಮಂತ್ರವನ್ನು ಈ ಬಜೆಟ್ ಬಲಪಡಿಸಿದೆ

- ನರೇಂದ್ರ ಮೋದಿ, ಪ್ರಧಾನಿ

ದುರ್ಬಲ ಆರ್ಥಿಕತೆ ಹಾಗೂ ನಿರುದ್ಯೋಗ ಸದ್ಯದ ಸಮಸ್ಯೆಗಳು. ಉದ್ಯೋಗ ಸೇರಿದಂತೆ ದೇಶದ ಯುವ ಸಮೂಹಕ್ಕೆ ಅನುಕೂಲವಾಗಬಲ್ಲ ಯಾವುದೇ ಚಿಂತನೆಯೂ ಕಾಣಿಸಿಲ್ಲ. ಸುದೀರ್ಘ ಬಜೆಟ್ ಭಾಷಣದಲ್ಲಿ ಸಾಕಷ್ಟು ಪುನರಾವರ್ತನೆ ಹಾಗೂ ವಿಷಯಾಂತರ ಮಾಡಲಾಗಿದೆ. ಇದು ಸರ್ಕಾರದ ಮನಸ್ಥಿತಿ ಸೂಚಿಸುತ್ತದೆ

- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.