ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2022| 2022ರ ಜನವರಿಯಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹ: ನಿರ್ಮಲಾ

Last Updated 1 ಫೆಬ್ರುವರಿ 2022, 7:13 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2022ರ ಜನವರಿಯಲ್ಲಿ ದಾಖಲೆ ಮೊತ್ತದ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದರು.

‘ಇದು ಬಜೆಟ್‌ ದಾಖಲೆಯಲ್ಲಿ ಉಲ್ಲೇಖವಾಗಿಲ್ಲ. ಆದರೆ ಸದನದ ಗಮನಕ್ಕೆ ತರುತ್ತಿದ್ದೇನೆ. ಜಿಎಸ್‌ಟಿ ಮೂಲಕ ಈ ವರ್ಷದ ಜನವರಿಯಲ್ಲಿ ₹1,40,986 ಕೋಟಿ ವರಮಾನ ಸಂಗ್ರಹವಾಗಿದೆ. ಇದು ಜೆಎಸ್‌ಟಿ ವ್ಯವಸ್ಥೆ ಪ್ರಾರಂಭವಾದಾಗಿಂದ ಈ ವರೆಗಿನ ಅತ್ಯಧಿಕ ಸಂಗ್ರಹ,’ ಎಂದು ಅವರು ತಿಳಿಸಿದರು.

ಈ ವಿಚಾರವನ್ನು ಸದನಕ್ಕೆ ತಿಳಿಸುತ್ತಲೇ ಆಡಳಿತಾರೂಢ ಪಕ್ಷಗಳ ಪ್ರತಿನಿಧಿಗಳು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT