Union Budget 2023: ದಂಡ ಮೊತ್ತ ಪಾವತಿಸಲಾಗದ ಬಡ ಕೈದಿಗಳಿಗೆ ಆರ್ಥಿಕ ನೆರವು

ನವದೆಹಲಿ: ದಂಡ ಅಥವಾ ಜಾಮೀನು ಮೊತ್ತ ಪಾವತಿಸಲಾಗದ ಬಡ ಕೈದಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಮೊದಲು ಜಾಮೀನು ದೊರಕಿದ್ದರೂ ಸುಮಾರು 5,000 ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್‌ಎಎಲ್‌ಎಸ್ಎ) ಮಾಹಿತಿ ಒದಗಿಸಿತ್ತು.
ಬಜೆಟ್ ಕುರಿತು ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕೇಂದ್ರ ಬಜೆಟ್ 2023
ಕಳೆದ ವರ್ಷ ಸಂವಿಧಾನ ದಿನದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾರಾಗೃಹಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆ ಮಾಡಲು ಮತ್ತು ಬಡ ಕೈದಿಗಳಿಗೆ ನೆರವು ಮಾಡಲು ಸಲಹೆ ನೀಡಿದ್ದರು.
ಬಳಿಕ ಈ ಕುರಿತು ಮಾಹಿತಿ ಒದಗಿಸುವುದಂತೆ ಸುಪ್ರೀಂ ಕೋರ್ಟ್, ಎನ್‌ಎಎಲ್‌ಎಸ್‌ಎಗೆ ನಿರ್ದೇಶನ ನೀಡಿತ್ತು.
ಇನ್ನಷ್ಟು ಸುದ್ದಿಗಳು:
Union Budget 2023 Live | ಕೇಂದ್ರ ಬಜೆಟ್ನ ಸಂಪೂರ್ಣ ಮಾಹಿತಿ
Union Budget 2023 highlights: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ
Union Budget 2023: ಯಾವುದು ದುಬಾರಿ? ಯಾವುದು ಅಗ್ಗ?
Union Budget: ಭದ್ರಾ ಮೇಲ್ಡಂಡೆ ಯೋಜನೆಗೆ ₹5,300 ಕೋಟಿ ಘೋಷಣೆ
Union Budget–2023: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ
50 ಹೆಚ್ಚುವರಿ ವಿಮಾನ ನಿಲ್ದಾಣ, ಏರೋಡ್ರಮ್, ಹೆಲಿಪೋರ್ಟ್ ನಿರ್ಮಾಣ: ಬಜೆಟ್ ಘೋಷಣೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.