ಬೆಂಗಳೂರು: ಹಬ್ಬಗಳ ಋತುವಿನ ಮೊದಲ ಆರು ದಿನಗಳ ಅವಧಿಯಲ್ಲಿ ಗ್ರಾಹಕರು ಇ–ವಾಣಿಜ್ಯ ವೇದಿಕೆಗಳ ಮೂಲಕ ಖರೀದಿಸಿದ ವಸ್ತುಗಳ ಪ್ರಮಾಣವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇಕಡ 21ರಷ್ಟು ಹೆಚ್ಚಳ ಕಂಡಿದೆ.

ತಂತ್ರಾಂಶ ಸೇವೆ ಒದಗಿಸುವ ಯೂನಿಕಾಮರ್ಸ್ ಕಂಪನಿಯು ದೇಶದ ವಿವಿಧ ಇ–ವಾಣಿಜ್ಯ ಕಂಪನಿಗಳ ಮೂಲಕ ನಡೆದ 4 ಕೋಟಿ ವಹಿವಾಟುಗಳನ್ನು ವಿಶ್ಲೇಷಿಸಿ ಸಿದ್ಧಪಡಿಸಿದ ವರದಿಯು ಈ ಸಂಗತಿಯನ್ನು ತಿಳಿಸಿದೆ.

ದೇಶದ ಪ್ರಮುಖ ಇ–ವಾಣಿಜ್ಯ ವೇದಿಕೆಗಳಲ್ಲಿ ನವೆಂಬರ್ 22ರಿಂದ ಹಬ್ಬಗಳ ಸಂದರ್ಭದ ಮಾರಾಟ ಮೇಳ ಆರಂಭವಾಗಿದೆ. ಜಿಎಸ್ಟಿ ತೆರಿಗೆ ಇಳಿಕೆಯು ಕೂಡ ಅದೇ ದಿನದಿಂದ ಜಾರಿಗೆ ಬಂದಿದೆ.

ಯೂನಿಕಾಮರ್ಸ್ ನೀಡಿರುವ ದತ್ತಾಂಶದ ಪ್ರಕಾರ, ವಿವಿಧ ಉತ್ಪನ್ನಗಳನ್ನು ಗ್ರಾಹಕರ ಮನೆಬಾಗಿಲಿಗೆ ತ್ವರಿತವಾಗಿ ತಲುಪಿಸುವ ಕ್ವಿಕ್–ಕಾಮರ್ಸ್ ವೇದಿಕೆಗಳ ಮೂಲಕ ನಡೆದಿರುವ ವಹಿವಾಟು ಹಬ್ಬದ ಅವಧಿಯ ಮೊದಲ ಆರು ದಿನಗಳ ಅವಧಿಯಲ್ಲಿ ಶೇಕಡ 85ರಷ್ಟು ಹೆಚ್ಚಳ ಕಂಡಿದೆ.

ತಾವು ಬಯಸುವ ಉತ್ಪನ್ನಗಳು ಮನೆ ಬಾಗಿಲಿಗೆ ತ್ವರಿತವಾಗಿ ಬರಬೇಕು ಎಂದು ಗ್ರಾಹಕರು ಬಯಸುತ್ತಿರುವುದನ್ನು ಇದು ತೋರಿಸುತ್ತಿದೆ ಎಂದು ಯೂನಿಕಾಮರ್ಸ್ ಹೇಳಿದೆ.

ಎಫ್ಎಂಸಿಜಿ ಉತ್ಪನ್ನಗಳು, ಸೌಂದರ್ಯ ವರ್ಧಕಗಳು, ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಿವೆ.

ಹಬ್ಬದ ಸಂದರ್ಭದಲ್ಲಿ ನಡೆದ ವಹಿವಾಟಿನಲ್ಲಿ ಶೇ 58ರಷ್ಟು 2ನೆಯ ಹಾಗೂ 3ನೆಯ ಹಂತಗಳ ನಗರಗಳಿಂದ ಆಗಿವೆ. ಮಹಾನಗರ ಪ್ರದೇಶಗಳಲ್ಲಿ ವಹಿವಾಟು ಶೇ 22ರಷ್ಟು ಹೆಚ್ಚಳ ಕಂಡಿದ್ದರೆ, 2ನೆಯ ಹಾಗೂ 3ನೆಯ ಹಂತಗಳ ನಗರಗಳಲ್ಲಿನ ವಹಿವಾಟು ಪ್ರಮಾಣದಲ್ಲಿ ಶೇ 20ರಷ್ಟು ಹೆಚ್ಚಳ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.