ನವದೆಹಲಿ: ದೇಶದಲ್ಲಿ ₹43 ಲಕ್ಷ ಕೋಟಿಯಷ್ಟು ನೇರ ತೆರಿಗೆ ಬಾಕಿ ಉಳಿದಿದೆ. ಈ ಪೈಕಿ ಮೂರನೇ ಎರಡರಷ್ಟು ತೆರಿಗೆ ವಸೂಲಾತಿಯು ತೀರಾ ಕಷ್ಟಕರವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು, ಹಣಕಾಸಿಗೆ ಸಂಬಂಧಿಸಿದಂತೆ ರಚಿಸಿರುವ ಸಂಸದೀಯ ಸಮಿತಿಗೆ ತಿಳಿಸಿದೆ.

ನೇರ ತೆರಿಗೆ ಬಾಕಿ, ಅದರ ವಸೂಲಾತಿಗೆ ಕೈಗೊಂಡಿರುವ ಕ್ರಮ ಹಾಗೂ ವಸೂಲಾತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಸಮಿತಿಯು ಕೇಳಿದ ಪ್ರಶ್ನೆಗೆ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷರು ಈ ಉತ್ತರ ನೀಡಿದ್ದಾರೆ. ಸಂಸತ್ನಲ್ಲಿ ಈ ವರದಿ ಮಂಡಿಸಲಾಗಿದೆ.

‘ಈ ಬಾಕಿ ತೆರಿಗೆ ಮೊತ್ತವು 90ರ ದಶಕಕ್ಕೆ ಸಂಬಂಧಿಸಿದ್ದಾಗಿದೆ. ಆ ವೇಳೆ ತೆರಿಗೆ ದಾಖಲೆಗಳು ಕೈಬರಹದ ರೂಪದಲ್ಲಿವೆ’ ಎಂದು ವಿವರಿಸಿದ್ದಾರೆ.

ಬಾಕಿ ತೆರಿಗೆಯಲ್ಲಿ ₹10.55 ಲಕ್ಷ ಕೋಟಿಯು ಐದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಿಗೆ ಸಂಬಂಧಿಸಿದ್ದಾಗಿದೆ. 90ರ ದಶಕದ ಹಿಂದಿನ ಬಾಕಿಯೂ ಈ ಮೊತ್ತದಲ್ಲಿ ಸೇರಿದ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಒಟ್ಟು ₹43 ಲಕ್ಷ ಕೋಟಿಯ ಪೈಕಿ ₹28.95 ಲಕ್ಷ ಕೋಟಿ (ಶೇ 67ರಷ್ಟು) ವಸೂಲಾತಿಯು ಕಷ್ಟಕರವಾಗಿದೆ. ಈ ಪೈಕಿ ಕಾಲ್ಪನಿಕವಾಗಿ ನಮೂದಿಸಿರುವ ಮೊತ್ತವೂ ಇದೆ. ಬಾಕಿ ಮೊತ್ತವು ಡಿಜಿಟಲ್ ಪ್ರಕ್ರಿಯೆ ಆರಂಭಕ್ಕೂ ಮುಂಚಿನದ್ದಾಗಿದೆ. ಆದರೆ, ಈ ಮೊತ್ತಕ್ಕೆ ಹೊಸ ವ್ಯವಸ್ಥೆಯಡಿ ಬಡ್ಡಿ ಲೆಕ್ಕ ಹಾಕಲಾಗುತ್ತಿದೆ. ಇದರಿಂದ ಮೊತ್ತವು ಏರಿಕೆಯಾಗಿದೆ ಎಂದು ಹೇಳಿದೆ.

ಸಿಬಿಡಿಟಿಗೆ ಸಮಿತಿಯ ಸಲಹೆ ಏನು?

ತೆರಿಗೆ ಬಾಕಿ ಉಳಿಸಿಕೊಂಡರೆ ವಾರ್ಷಿಕವಾಗಿ ದಂಡವು ಹೆಚ್ಚುತ್ತದೆ. ಮತ್ತೆ ಈ ಮೊತ್ತವು ವಸೂಲಾಗುವುದಿಲ್ಲ. ಹಾಗಾಗಿ, ಪರಿಣಾಮಕಾರಿಯಾಗಿ ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ಈಗಿರುವ ತೆರಿಗೆ ಮೌಲ್ಯಮಾಪನ ವ್ಯವಸ್ಥೆಯನ್ನು ಪರಾಮರ್ಶೆ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದೆ.

ಹಾಲಿ ಇರುವ ತೆರಿಗೆ ಮೌಲ್ಯಮಾಪನ ವ್ಯವಸ್ಥೆಯಿಂದ ಪ್ರಾಮಾಣಿಕ ತೆರಿಗೆದಾರರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದೆ.

ನೈಜ ತೆರಿಗೆಯನ್ನು ವಸೂಲಿ ಮಾಡಬೇಕಿದೆ. ತೆರಿಗೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬೇಕು. ಬಾಕಿ ವಸೂಲಿಗೆ ಸಂಬಂಧಿಸಿದಂತೆ ಸಮಯ ನಿಗದಿಪಡಿಸಬೇಕಿದೆ ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.